Site icon Vistara News

INDvsAUS : ಅನಿಲ್​ ಕುಂಬ್ಳೆ ದಾಖಲೆ ಮುರಿದ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್​ ನಥಾನ್​ ಲಿಯಾನ್​, ಏನದು ಸಾಧನೆ?

Gujarat Titans won the toss and chose to field

ನವ ದೆಹಲಿ : ಬಾರ್ಡರ್​ ಗವಾಸ್ಕರ್ ಟ್ರೋಫಿಯ (INDvsAUS) ಯಶಸ್ವಿ ಬೌಲರ್​ಗಳ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಇದುವರೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದ ಅನಿಲ್​ ಕುಂಬ್ಳೆಯನ್ನು ಆಸ್ಟ್ರೇಲಿಯಾದ ಸ್ಪಿನ್​ ಬೌಲರ್ ನಥಾನ್​ ಲಿಯಾನ್ ಹಿಂದಿಕ್ಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಸ್ಪಿನ್ನರ್​ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇಂದೋರ್​ನ ಹೋಳ್ಕರ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಒಟ್ಟು 11 ವಿಕೆಟ್​ ಪಡೆಯುವ ಮೂಲಕ ಪ್ರವಾಸಿ ತಂಡದ ಬೌಲರ್​ ನೂತನ ಸಾಧನೆ ಮಾಡಿದ್ದಾರೆ.

ನಥಾನ್​ ಲಿಯಾನ್​ ಭಾರತ ತಂಡ 9 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಲು ಕಾರಣರಾಗಿದ್ದಾರೆ. ಅವರು ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್​ ಕಬಳಿಸಿದ್ದರೆ ಎರಡನೇ ಇನಿಂಗ್ಸ್​ನಲ್ಲಿ 8 ವಿಕೆಟ್​ ಪಡೆದಿದ್ದರು. ಈ ಮೂಲಕ ಒಟ್ಟು 11 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡಿದ್ದರು. ಅವರೀಗ ಒಟ್ಟು 25 ಬಾರ್ಡರ್​- ಗವಾಸ್ಕರ್ ಟ್ರೋಫಿಯ ಪಂದ್ಯಗಳಲ್ಲಿ 113 ವಿಕೆಟ್​ಗಳನ್ನು ಪಡೆದಿದ್ದಾರೆ. ಈ ಮೂಲಕ 20 ಟೆಸ್ಟ್​ ಪಂದ್ಯಗಳಲ್ಲಿ 111 ವಿಕೆಟ್​ಗಳನ್ನು ಉರುಳಿಸಿದ್ದ ಅನಿಲ್​ ಕುಂಬ್ಳೆಯನ್ನು ಹಿಂದಿಕ್ಕಿದ್ದಾರೆ.

ಇದನ್ನೂ ಓದಿ : Nathan Lyon: ಆಸ್ಟ್ರೇಲಿಯಾದ ಸ್ಪಿನ್ನರ್​ ನೇಥನ್ ಲಿಯಾನ್​ ಅತಿ ಹೆಚ್ಚು ಬಾರಿ ಔಟ್​ ಮಾಡಿದ ಬ್ಯಾಟರ್‌ಗಳು​

ಭಾರತ ತಂಡದ ಸ್ಪಿನ್ನರ್​ ಆರ್​. ಅಶ್ವಿನ್​ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಒಟ್ಟು 107 ವಿಕೆಟ್​ಗಳನ್ನು ಆಸ್ಟ್ರೇಲಿಯಾ ತಂಡದ ವಿರುದ್ಧ ಪಡೆದಿದ್ದಾರೆ. ಲಿಯಾನ್​ ಹಾಗೂ ಅಶ್ವಿನ್​ ನಡುವೆ ಈ ಮೊದಲ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ.

95 ವಿಕೆಟ್​ಗಳನ್ನು ಉರುಳಿಸಿರುವ ಸ್ಪಿನ್ನರ್ ಹರ್ಭಜನ್​ ಸಿಂಗ್​ ನಾಲ್ಕನೇ ಸ್ಥಾನದಲ್ಲಿ ಇದ್ದರೆ, 84 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡಿರುವ ರವೀಂದ್ರ ಜಡೇಜಾ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

Exit mobile version