ನವ ದೆಹಲಿ: ಲೈಂಗಿಕ ಕಿರುಕುಳ ಪ್ರಕರಣದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಅವರ ವಿರುದ್ಧದ ಆರೋಪದ ಪ್ರತ್ಯಕ್ಷ ಸಾಕ್ಷಿಯೇ ಚುನಾವಣೆ ನಿಂತಿದ್ದಾರೆ. ಅವರೇ ಮಾಜಿ ಕುಸ್ತಿಪಟು ಅನಿತಾ ಶ್ಯೋರಾಣಾ. ಒಂದು ವೇಳೆ ಚುನಾವಣೆಯಲ್ಲಿ ಅವರು ಗೆದ್ದರೆ ಭಾರತೀಯ ಕುಸ್ತಿ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ. ಮಹಿಳೆಯೊಬ್ಬಳು ಭಾರತೀಯ ಕುಸ್ತಿ ಒಕ್ಕೂಟದ ಉನ್ನದ ಸ್ಥಾನ ಅಲಂಕರಿಸಿದಂತಾಗುತ್ತದೆ.
ಆಗಸ್ಟ್ 12 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ, 2010 ರ ನವದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಅನಿತಾ ಶ್ಯೋರಾಣಾ ಅವರು ಸ್ಪರ್ಧಿಸಲು ತಮ್ಮ ದಾಖಲೆಗಳನ್ನು ಸಲ್ಲಿಸಿದರು. ಅವರು ಗೆಲ್ಲಲು ಯಶಸ್ವಿಯಾದರೆ ಭಾರತದ ಪ್ರಾಚೀನ ಕ್ರೀಡೆಯ ಸಂಸ್ಥೆಯನ್ನು ಮುನ್ನಡೆಸಿದ ಮೊದಲ ಮಹಿಳೆಯಾಗಲಿದ್ದಾರೆ. ಈ ಕ್ರೀಡೆಗೆ ಸಹಸ್ರಾರು ವರ್ಷದ ಇತಿಹಾಸ ಇದ್ದರೂ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಇರುತ್ತಿರಲಿಲ್ಲ. ಕ್ರೀಡೆಗೆ ಮಹಿಳೆಯರು ಎಂಟ್ರಿಯಾಗಿದ್ದರೂ ಆಡಳಿತದಲ್ಲಿ ಪುರುಷರದ್ದೇ ಪಾರುಪತ್ಯ. ಹೀಗಾಗಿ ಈ ಬಾರಿಯ ಚುನಾವಣೆ ವಿಭಿನ್ನವಾಗಿ ನಡೆಯಲಿದೆ.
ಡಬ್ಲ್ಯುಎಫ್ಐ ಚುನಾವಣೆಗಳಲ್ಲಿಯೂ 50 ಮತದಾರರಲ್ಲಿ ಅನಿತಾ ಶ್ಯೋರಣಾಅ ಅವರೇ ಏಕೈಕ ಮಹಿಳೆ. ದೆಹಲಿ ಕುಸ್ತಿ ಸಂಘದ ಮುಖ್ಯಸ್ಥ ಒಲಿಂಪಿಯನ್ ಜೈ ಪ್ರಕಾಶ್ ಮತ್ತು ಬ್ರಿಜ್ ಭೂಷಣ್ ಬಣದ ಉತ್ತರ ಪ್ರದೇಶದ ಸಂಜಯ್ ಸಿಂಗ್ ಭೋಲಾ ವಿರುದ್ಧ 38 ವರ್ಷದ ಅನಿತಾ ಅಧ್ಯಕ್ಷ ಹುದ್ದೆಗೆ ಸೆಣಸಲಿದ್ದಾರೆ.
ಬ್ರಿಜ್ ಭೂಷಣ್ ಬಣವು ಸೋಮವಾರ ರಾಜಧಾನಿ ದೆಹಲಿಯಲ್ಲಿ ಸಮ್ಮೇಳನ ನಡೆಸಿ, 25 ರಾಜ್ಯ ಘಟಕಗಳಲ್ಲಿ ಕನಿಷ್ಠ 20 ಘಟಕಗಳು ತಮ್ಮನ್ನು ಬೆಂಬಲಿಸುತ್ತಿವೆ ಎಂದು ಹೇಳಿದೆ. ನಾವು ಯಶಸ್ವಿಯಾಗಬಹುದು ಎಂದು ನಮಗೆ ಖಾತ್ರಿಯಿದೆ. ಮುಂದಿನ ದಿನಗಳಲ್ಲಿ ಈ ಹುದ್ದೆಗೆ ಅಂತಿಮ ಅಭ್ಯರ್ಥಿಯನ್ನು ನಾವು ನಿರ್ಧರಿಸುತ್ತೇವೆ. ಆದರೆ ನಮ್ಮ ನಿರ್ಧಾರವು ಸರ್ವಾನುಮತದಿಂದ ಇರುತ್ತದೆ ಎಂದು ಜೈ ಪ್ರಕಾಶ್ ಹೇಳಿದ್ದಾರೆ.
ಅನಿತಾ ಶ್ಯೋರಣ್ ವಿರೋಧ ಪಕ್ಷದ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪ್ರತಿಭಟಿಸುತ್ತಿರುವ ಕುಸ್ತಿಪಟುಗಳ ಬೆಂಬಲವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಬ್ರಿಜ್ ಭೂಷಣ್ ತನ್ನನ್ನು ತನ್ನ ಕೋಣೆಗೆ ಕರೆಸಿಕೊಂಡು ಬಲವಂತವಾಗಿ ತಬ್ಬಿಕೊಂಡ ಘಟನೆಯ ಹಂಚಿಕೊಳ್ಳಲು ದೂರುದಾರರಲ್ಲಿ ಒಬ್ಬರು ವಿದೇಶದಿಂದ ತನ್ನನ್ನು ಸಂಪರ್ಕಿಸಿದ್ದರು ಎಂದು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಕಳೆದ ಜೂನ್ನಲ್ಲಿ ಇಂಡಿಯನ್ ಎಕ್ಸ್ಪ್ರೆಸ್ಗೆ ಬಹಿರಂಗಪಡಿಸಿದ್ದರು.
ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್ಎಸ್ಪಿಬಿ) ಕಾರ್ಯದರ್ಶಿ ಪ್ರೇಮ್ ಚಂದ್ ಲೋಚಬ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯಾಗಿದ್ದು, ಅನಿತಾ ಅವರ ಸಮಿತಿಯಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಕುಸ್ತಿಪಟು ದುಶ್ಯಂತ್ ಶರ್ಮಾ ಅವರು ಉಪಾಧ್ಯಕ್ಷ ಮತ್ತು ಖಜಾಂಚಿ ಸ್ಥಾನಗಳಿಗೆ ತಮ್ಮ ಹೆಸರನ್ನು ಸಲ್ಲಿಸಿದ್ದಾರೆ. ಸಮಿತಿಯು ಹರಿಯಾಣ ಮೂಲದ ಹೋಟೆಲ್ ಉದ್ಯಮಿ ದೇವೇಂದರ್ ಕಡಿಯಾನ್ ಅವರನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಇದನ್ನೂ ಓದಿ : Wrestlers Protest : ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಕೇಸಲ್ಲಿ ಬ್ರಿಜ್ಭೂಷಣ್ಗೆ ರಿಲೀಫ್
ಬ್ರಿಜ್ ಭೂಷಣ್ ಕಡೆಯಿಂದ ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ಹಿರಿಯ ಉಪಾಧ್ಯಕ್ಷ ಸ್ಥಾನಗಳಿಗೆ ಅಭ್ಯರ್ಥಿಗಳಲ್ಲಿ ಚಂಡೀಗಢದ ದರ್ಶನ್ ಲಾಲ್, ಉತ್ತರಾಖಂಡದ ಸತ್ಯಪಾಲ್ ಸಿಂಗ್ ದೇಶ್ವಾಲ್ ಮತ್ತು ಪಶ್ಚಿಮ ಬಂಗಾಳದ ಅಸಿತ್ ಕುಮಾರ್ ಸಹಾ ಸೇರಿದ್ದಾರೆ.
ಬ್ರಿಜ್ ಭೂಷಣ್ ಅವರ ಕುಟುಂಬದ ಯಾವುದೇ ಸದಸ್ಯರಿಗೆ ಹೊಸ ಸಂಸ್ಥೆಯಲ್ಲಿ ಯಾವುದೇ ಸ್ಥಾನಗಳನ್ನು ಅಲಂಕರಿಸಲು ಅವಕಾಶ ನೀಡುವುದಿಲ್ಲ ಸರ್ಕಾರ ಪ್ರತಿಭಟನೆ ನಡೆಸುತ್ತಿದ್ದ ಮೂವರು ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಅವರಿಗೆ ಭರವಸೆ ನೀಡಿತ್ತು. ಇದರ ಪರಿಣಾಮವಾಗಿ, ಬ್ರಿಜ್ ಭೂಷಣ್ ಮತ್ತು ಅವರ ಮಗ ಕರಣ್ ಅವರನ್ನು ಮತದಾರರ ಪಟ್ಟಿಯಲ್ಲಿ ಪಟ್ಟಿ ಮಾಡಲಾಗಿಲ್ಲ. ಬಿಜೆಪಿ ಸಂಸದರ ಅಳಿಯ ವಿಶಾಲ್ ಸಿಂಗ್ ಬಿಹಾರವನ್ನು ಪ್ರತಿನಿಧಿಸುತ್ತಿದ್ದರೂ ಅವರಿಗೂ ಅವಕಾಶ ನೀಡಿಲ್ಲ.