ಚೆನ್ನೈ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದಲ್ಲಿ(Asian Champions Trophy) ಅಜೇಯ ಓಟವನ್ನು ಕಾಯ್ದುಕೊಂಡ ಆತಿಥೇಯ ಭಾರತ(india vs japan) ತಂಡ ಶುಕ್ರವಾರ ನಡೆಯುವ ಸೆಮಿಫೈನಲ್ ಕಾದಾಟದಲ್ಲಿ ಬಲಿಷ್ಠ ಜಪಾನ್ ತಂಡದ ಸವಾಲನ್ನು ಎದುರಿಸಲಿದೆ. ಉಭಯ ತಂಡಗಳ ಈ ಮುಖಾಮುಖಿ ಇಲ್ಲಿನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತವೇ ಫೇವರಿಟ್ ಆದರೆ…
ಹರ್ಮನ್‌ಪ್ರೀತ್ ಸಿಂಗ್(harmanpreet singh) ಸಾರಥ್ಯದ ಭಾರತ ತಂಡ ಲೀಗ್ ಹಂತದಲ್ಲಿ ಆಡಿದ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ಒಂದರಲ್ಲಿ ಡ್ರಾ ಸಾಧಿಸಿದೆ. ಈ ಪ್ರದರ್ಶನವನ್ನು ನೋಡುವಾಗ ಭಾರತ ನೆಚ್ಚಿನ ತಂಡವಾಗಿದೆ. ಆದರೆ ಭಾರತ ಡ್ರಾ ಸಾಧಿಸಿದ್ದು ಜಪಾನ್ ವಿರುದ್ಧ ಎನ್ನುದನ್ನು ಮರೆಯುವಂತಿಲ್ಲ. ಭಾರತ ಈ ಹಿಂದೆ ಢಾಕಾದಲ್ಲಿ ನಡೆದ 2021ರ ಆವೃತ್ತಿಯ ಸೆಮಿಫೈನಲ್‌ನಲ್ಲಿ ಜಪಾನ್‌ಗೆ 3-5 ಗೋಲುಗಳಿಂದ ಸೋತಿತ್ತು. ಹೀಗಾಗಿ ಎಚ್ಚರಿಕೆಯ ಆಟ ಅತ್ಯಗತ್ಯ. ಲೀಗ್ ಹಂತದಲ್ಲಿ ಇತ್ತಂಡಗಳ ನಡುವಿನ ಹೋರಾಟ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಇದೇ ರೋಚಕತೆ ಮತ್ತು ಪೈಪೋಟಿ ಸೆಮಿಯಲ್ಲಿಯೂ ಕಂಡು ಬರುವ ನಿರೀಕ್ಷೆಯೊಂದನ್ನು ಮಾಡಬಹುದಾಗಿದೆ.
ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣು
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದಲ್ಲಿ ಭಾರತ ಮತ್ತು ತನ್ನ ಬದ್ಧ ಎದುರಾಳಿ ಪಾಕಿಸ್ತಾನ ಇದುವರೆಗೆ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಈ ಬಾರಿ ನಾಲ್ಕನೇ ಪ್ರಶಸ್ತಿ ಗೆದ್ದು ಪಾಕ್ ದಾಖಲೆಯನ್ನು ಮೀರಿ ನಿಲ್ಲುವುದು ಭಾರತೀಯ ಹಾಕಿ ಆಟಗಾರರ ದೃಢ ಸಂಕಲ್ಪವಾಗಿದೆ. ಹೀಗಾಗಿ ಸೆಮಿಫೈನಲ್‌ನಲ್ಲಿ ಜಪಾನ್ ಮಿರುದ್ಧ ಶಕ್ತಿ ಮೀರಿ ಪ್ರದರ್ಶನ ತೋರಲು ಆಟಗಾರರು ಪಣ ತೊಟ್ಟಿರುವುದಾಗಿ ನಾಯಕ ಹರ್ಮನ್ ಹೇಳಿದ್ದಾರೆ.
ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿಸುವ ಪ್ರಯತ್ನಿಸುವಲ್ಲಿ ಎಡವುತ್ತಿದ್ದ ಹರ್ಮನ್‌ಪ್ರೀತ್ ಸಿಂಗ್ ಪಡೆ ಪಾಕ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಇದನ್ನು ಸರಿಪಡಿಸಿಕೊಂಡಂತೆ ಕಾಣುತ್ತಿದೆ. ಏಕೆಂದರೆ 4 ಗೋಲ್ಗಳಲ್ಲಿ ಮೂರು ಗೋಲ್ ಪೆನಾಲ್ಟಿ ಕಾರ್ನರ್ ಮೂಲಕ ದಾಖಲಾಗಿತ್ತು. ಹೀಗಾಗಿ ಈ ವಿಭಾಗದಲ್ಲಿಯೂ ಸುಧಾರಣೆ ಕಂಡಿರುವುದು ಸಂತಸದ ವಿಚಾರ.
ಇದನ್ನೂ ಓದಿ Asian Champions Trophy: ಭಾರತ ವಿರುದ್ಧ ಪಾಕ್ಗೆ ಹೀನಾಯ ಸೋಲು
We are in the End Game now.
— Hockey India (@TheHockeyIndia) August 11, 2023
Come support Team India and watch them live at the Mayor Radhakrishnan Hockey Stadium.
Ticket Link: https://t.co/6tPYDkDY1n#HockeyIndia #IndiaKaGame #HACT2023 pic.twitter.com/1xek37R4Lf
ಭಾರತ ತಂಡ
ಮಿಡ್‌ಫೀಲ್ಡರ್‌ಗಳು: ಹರ್ಮನ್‌ಪ್ರೀತ್ ಸಿಂಗ್(ನಾಯಕ), ಹಾರ್ದಿಕ್ ಸಿಂಗ್ (ಉಪನಾಯಕ), ಜರ್ಮನ್‌ಪ್ರೀತ್ ಸಿಂಗ್, ಸುಮಿತ್, ಜುಗರಾಜ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್. ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ ಮತ್ತು ಶಂಶೇರ್ ಸಿಂಗ್. ಫಾರ್ವರ್ಡ್‌ಗಳು: ಆಕಾಶದೀಪ್ ಸಿಂಗ್, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್, ಸುಖಜೀತ್ ಸಿಂಗ್, ಎಸ್ ಕಾರ್ತಿ. ಗೋಲ್ ಕೀಪರ್: ಪಿ.ಆರ್ ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್.