Site icon Vistara News

Anshuman Gaekwad: ಮಾಜಿ ಕ್ರಿಕೆಟಿಗ ಅಂಶುಮಾನ್‌ ಗಾಯಕ್ವಾಡ್‌ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Anshuman Gaekwad

Anshuman Gaekwad: PM Modi, Dodda Ganesh mourn Anshuman Gaekwad's death: Pained by his demise

ಮುಂಬಯಿ: ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್‌ ಆಗಿದ್ದ ಅಂಶುಮಾನ್‌ ಗಾಯಕ್ವಾಡ್‌(Anshuman Gaekwad) ನಿಧನ ಹೊಂದಿದ್ದಾರೆ. ಕೆಲವು ವಾರಗಳ ಹಿಂದಷ್ಟೇ ಅವರ ಚಿಕಿತ್ಸೆಗೆ ಬಿಸಿಸಿಐ ಒಂದು ಕೋಟಿ ರೂ. ಆರ್ಥಿಕ ನೆರವು ಘೋಷಿಸಿತ್ತು. ಮಾಜಿ ಕ್ರಿಕೆಟಿಗರಾದ ಕಪಿಲ್‌ದೇವ್‌, ಸಂದೀಪ್‌ ಪಾಟೀಲ್‌ ಮೊದಲಾದವರ ಮನವಿ ಹಾಗೂ ಕಳಕಳಿಗೆ ಸ್ಪಂದಿಸಿದ ಬಿಸಿಸಿಐ ಈ ಮಾನವೀಯ ನಿರ್ಧಾರಕ್ಕೆ ಪ್ರಕಟಿಸಿತ್ತು. ಆದರೆ, ಇದೀಗ ಅವರು ನಮ್ಮನ್ನು ಅಗಲಿದ್ದಾರೆ. ನಿನ್ನೆ(ಬುಧವಾರ ಜುಲೈ 31) ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.

ಅಂಶುಮಾನ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಆಟಗಾರರಾದ ಕಪಿಲ್‌ದೇವ್‌, ಸುನೀಲ್‌ ಗಾವಸ್ಕರ್‌, ಸಚಿನ್​ ತೆಂಡೂಲ್ಕರ್​, ರವಿಶಾಸ್ತ್ರಿ, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಸೇರಿದಂತೆ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕರಾಗಿದ್ದ ದತ್ತಾಜಿರಾವ್‌ ಗಾಯಕ್ವಾಡ್‌ ಅವರ ಪುತ್ರನಾಗಿರುವ ಅಂಶುಮಾನ್‌ ಗಾಯಕ್ವಾಡ್‌, 1975 -1985ರ ಅವಧಿಯಲ್ಲಿ ಭಾರತದ ಪರ 40 ಟೆಸ್ಟ್‌ ಆಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಟೆಸ್ಟ್‌ ಬದುಕು ಆರಂಭಿಸಿದ ಗಾಯಕ್ವಾಡ್‌, ಬಳಿಕ ಆರಂಭಿಕನಾಗಿ ಭಡ್ತಿ ಪಡೆದಿದ್ದರು. ಸುನೀಲ್‌ ಗಾವಸ್ಕರ್‌ ಅವರೊಂದಿಗೆ ಅನೇಕ ಉತ್ತಮ ಜತೆಯಾಟ ನಡೆಸಿದ್ದರು. 1999 ರ ವಿಶ್ವಕಪ್ ಸಮಯದಲ್ಲಿ ಕೀನ್ಯಾ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿದ್ದರು.

“ಅಂಶುಮಾನ್ ಗಾಯಕ್ವಾಡ್ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ. ಪ್ರತಿಭಾನ್ವಿತ ಆಟಗಾರ ಮತ್ತು ಅತ್ಯುತ್ತಮ ತರಬೇತುದಾರರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಮೋದಿ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

“ಭಾರತೀಯ ಕ್ರಿಕೆಟ್‌ನ ಹೆಮ್ಮೆಯನ್ನು ಹೆಚ್ಚಿಸಿದ ಕ್ರಿಕೆಟ್ ಕೌಶಲವನ್ನು ಹೆಚ್ಚಿಸಿದ ದಿಗ್ಗಜ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅವರ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪವಿದೆ. ಓಂ ಶಾಂತಿ” ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಂತಾಪ ಸೂಚಿಸಿದ್ದಾರೆ.

Exit mobile version