ಪಲ್ಲೆಕೆಲೆ: ಭಾರತ ಹಾಗೂ ನೇಪಾಳ ನಡುವಿನ ಏಷ್ಯಾ ಕಪ್ (Asia Cup 2023) ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನಕ್ಕೆ (Pakistan) ಸೇರಿದ ಅಭಿಮಾನಿಗಳು ಭಾರತ ವಿರೋಧಿ ಘೋಷಣೆ ಕೂಗಿರುವ ಬಗ್ಗೆ ವರದಿಯಾಗಿದೆ. ಕಾಮೆಂಟರಿ ತಂಡದಲ್ಲಿದ್ದ ಭಾರತ ತಂಡದ ಮಾಜಿ ಆಟಗಾರ ಹಾಗೂ ಡೆಲ್ಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಈ ಆರೋಪ ಮಾಡಿದ್ದಾರೆ. ಆದರೆ ಈ ಘಟನೆ ಬಗ್ಗೆ ಇನ್ನೂ ಸ್ಪಷ್ಟತೆ. ಗಂಭೀರ್ (Gautam Gambhir) ಆ ರೀತಿ ಹೇಳಿರುವುದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಿದಾಡುತ್ತಿವೆ.
ತಾವು ಕಾಮೆಂಟರಿ ಬಾಕ್ಸ್ನಿಂದ ಹೊರಕ್ಕೆ ನಡೆಯುತ್ತಿದ್ದ ವೇಳೆ ಗ್ಯಾಲರಿಯಲ್ಲಿದ್ದ ಕೆಲವು ಪಾಕಿಸ್ತಾನಿ ಪ್ರೇಕ್ಷಕರು ಭಾರತ ವಿರೋಧಿ ಘೋಷಣೆಗಳನ್ನು ಹೊರಡಿಸಿದರು. ಹೀಗಾಗಿ ಅವರ ವಿರುದ್ಧ ಅನಿವಾರ್ಯವಾಗಿ ಅಶ್ಲೀಲ ಸನ್ನೆ ಮಾಡಬೇಕಾಯಿತು ಎಂದು ಗಂಭೀರ್ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ವಿಷಯ ಬೆಳಕಿಗೆ ಬಂದಿದೆ.
ಯಾವಾಗ ನಡೆಯಿತು ಘಟನೆ?
ಗೌತಮ್ ಗಂಭೀರ್ ಹೋದಲೆಲ್ಲ ವಿರಾಟ್ ಕೊಹ್ಲಿ ಅಭಿಮಾನಿಗಳು ಅವರಿಗೆ ಕಾಟ ಕೊಡುತ್ತಾರೆ. ಅವರು ನಡೆಯುವಾಗಲೂ, ಕುಳಿತಿರುವಾಗಲೂ ಕೊಹ್ಲಿ, ಕೊಹ್ಲಿ ಎಂದು ಕೂಗುವ ಮೂಲಕ ಕೋಪ ಬರಿಸುತ್ತಾರೆ. ಅದೇ ರೀತಿ ಶ್ರೀಲಂಕಾದಲ್ಲಿ ಏಷ್ಯಾ ಕಪ್ ನಡೆಯುವ ವೇಳೆಯೂ ಇದೇ ರೀತಿಯ ಘಟನೆ ನಡೆಯಿತು. ಕೋಪಗೊಂಡ ಗಂಭೀರ್ ತಮ್ಮ ಎಲ್ಲ ಘನತೆ, ಗೌರವ ಹಾಗೂ ಗಂಭೀರತೆಯನ್ನು ದಾಟಿ ಅಶ್ಲೀಲ ಸನ್ನೆ (ಮಿಡಲ್ ಫಿಂಗರ್) ತೋರಿ ಟೀಕೆಗೆ ಒಳಗಾಗಿದ್ದಾರೆ.
ಕ್ಯಾಂಡಿಯ ಪಲ್ಲೆಕೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನೇಪಾಳ ಏಷ್ಯಾ ಕಪ್ 2023 ರ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಏಷ್ಯಾಕಪ್ ಪಂದ್ಯದ ವೇಳೆ ಗಂಭೀರ್ ತಮ್ಮ ಕಾಮೆಂಟರಿ ಸ್ಟ್ಯಾಂಡ್ನಿಂದ ಹೊರನಡೆಯುತ್ತಿದ್ದಾಗ ಅಭಿಮಾನಿಗಳು ಕೂಗಿದ್ದಾರೆ. ವಿಶ್ವಕಪ್ ವಿಜೇತ ಆಟಗಾರ ಗಂಭೀರ್ ನಡೆದುಕೊಂಡು ಹೋಗುತ್ತಿದ್ದಾಗ, ಮತ್ತೊಂದು ಸ್ಟ್ಯಾಂಡ್ನಿಂದ ಸಾಕಷ್ಟು ಅಭಿಮಾನಿಗಳು ವಿರಾಟ್ ಕೊಹ್ಲಿಯ ಹೆಸರನ್ನು ಕೂಗಿದ್ದಾರೆ. ಅದು ತಮ್ಮನ್ನು ಉದ್ದೇಶಿಸಿಯೇ ಮಾಡುತ್ತಿದ್ದಾರೆ ಎಂದು ತಿಳಿದ ಅವರು ಕೋಪಗೊಂಡು ತಮ್ಮ ಬಲಗೈಯನ್ನು ಜೇಬಿನಿಂದ ಹೊರತೆಗೆದು ಅವರೆಲ್ಲರಿಗೂ ಅಶ್ಲೀಲ ಸನ್ನೆ ಮಾಡಿದ್ದಾರೆ.
ವೀಡಿಯೊದ ಕೊನೆಯಲ್ಲಿ, ಗಂಭೀರ್ ಮಳೆಯಲ್ಲಿ ಛತ್ರಿ ಹಿಡಿದಿರುವ ವ್ಯಕ್ತಿಯೊಂದಿಗೆ ನಡೆಯುವುದನ್ನು ಕಾಣಬಹುದು.
ಡಾನ್ಸ್ ಮಾಡಿದ ಕೊಹ್ಲಿ
ಪಲ್ಲೆಕೆಲೆ: ಏಷ್ಯಾಕಪ್ 2023ರ (Asia Cup 2023) ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಅತ್ಯಂತ ಕಳಪೆ ಫೀಲ್ಡಿಂಗ್ ಮಾಡಿತು. ಅರಂಭಿಕ 26 ಎಸೆತಗಳ ಒಳಗೆ ಮೂರು ಬಾರಿ ಕ್ಯಾಚ್ ಬಿಡುವ ಮೂಲಕ ಭಾರತ ತಂಡ ಟೀಕೆಗೆ ಒಳಗಾಯಿತು. ಇದರಲ್ಲೊಂದು ಸುಲಭ ಕ್ಯಾಚ್ ಬಿಟ್ಟವರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ. ಈ ಕ್ಯಾಚ್ಗಳು ಭಾರತದ ಪಾಲಿಗೆ ಹಿನ್ನಡೆ ಉಂಟು ಮಾಡಿದವು. ಇಷ್ಟೆಲ್ಲ ಅಪಹಾಸ್ಯಕ್ಕೆ ಒಳಗಾದ ನಡುವೆಯೂ ವಿರಾಟ್ ಕೊಹ್ಲಿ ನೇಪಾಳಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಇದನ್ನೂ ಓದಿ : Virat Kohli: ಸುಲಭ ಕ್ಯಾಚ್ ಕೈಬಿಟ್ಟು ‘ಚೋಕ್ಲಿ’ ಆದ ವಿರಾಟ್ ಕೊಹ್ಲಿ
ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಶಾರ್ಟ್ ಕವರ್ನಲ್ಲಿ ವಿರಾಟ್ ಕೊಹ್ಲಿ ಸುಲಭ ಕ್ಯಾಚ್ ಕೈಬಿಟ್ಟಿದ್ದರಿಂದ ಭಾರತೀಯ ಅಭಿಮಾನಿಗಳಿಗೆ ಬೇಸರ ಉಂಟಾಯಿತು. ಈ ಕ್ಯಾಚ್ ಡ್ರಾಪ್ ನಂತರ ನೇಪಾಳದ ಆಟಗಾರ ಆಸಿಫ್ ಶೇಖ್ ಅರ್ಧಶತಕ ಗಳಿಸಿ ತಮ್ಮ ತಂಡದ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು.