Site icon Vistara News

Anurag Thakur: ಕ್ರೀಡಾ ಒಕ್ಕೂಟಕ್ಕೆ ಎಲ್ಲ ರೀತಿಯ ಸಹಕಾರ; ಅನುರಾಗ್ ಠಾಕೂರ್

anurag-thakur-all-kinds-of-cooperation-for-sports-federation-anurag-thakur

anurag-thakur-all-kinds-of-cooperation-for-sports-federation-anurag-thakur

ಬೆಂಗಳೂರು: ಮಿಷನ್ ಒಲಿಂಪಿಕ್ ಸೆಲ್ ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ಮತ್ತು ಸಹಕಾರವನ್ನು ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur) ಅವರು ಭರವಸೆ ನೀಡಿದ್ದಾರೆ.

ಬುಧವಾರ(ಫೆ.22) ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಹೊಸ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆಗೊಳಿಸಿ ಅವರು ಈ ಭರವಸೆ ನಿಡಿದರು.

ಬೆಂಗಳೂರಿನಲ್ಲಿರುವ ಸಾಯ್​ ಕ್ರೀಡಾ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಧನರಾಜ್ ಪಿಳ್ಳೆ, ಪುಲ್ಲೇಲ ಗೋಪಿಚಂದ್‌, ಅಂಜು ಬಾಬಿ ಜಾರ್ಜ್ ಸೇರಿ ಅನೇಕ ಕ್ರೀಡಾಪಟುಗಳು ಇಲ್ಲಿ ತರಬೇತಿ ಪಡೆದು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಈ ಕೇಂದ್ರವು 50 ಒಲಿಂಪಿಯನ್‌ಗಳು ಮತ್ತು 50 ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ವಿಜೇತರನ್ನು ಒಳಗೊಂಡ ಶ್ರೇಷ್ಠ ಕ್ರೀಡಾ ಮಂಡಳಿಯಾಗಿ ಗುರುತಿಸಿಕೊಂಡಿದೆ. ಮುಂದಿನ ಎರಡು ತಿಂಗಳಲ್ಲಿ ಬಾಲಕ ಮತ್ತು ಬಾಲಕಿಯರಿಗಾಗಿ 630 ಹಾಸಿಗೆ ಸಾಮರ್ಥ್ಯದ ಹಾಸ್ಟೆಲ್ ನಿರ್ಮಾಣವನ್ನು ಕೇಂದ್ರ ಸರಕಾರ ಮಾಡಲಿದೆ ಎಂದು ಅನುರಾಗ್ ಠಾಕೂರ್ ಹೇಳಿದರು.

ಇದನ್ನೂ ಓದಿ ISSF World Cup: ಶೂಟಿಂಗ್‌ ವಿಶ್ವಕಪ್‌; ಚಿನ್ನಕ್ಕೆ ಗುರಿ​ಯಿಟ್ಟ ರುದ್ರಾಂಕ್ಷ್ ಪಾಟೀಲ್‌

ಕೇಂದ್ರ ಸರಕಾರ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಹಿಂದೆ 2014ರ ಬಜೆಟ್​ನಲ್ಲಿ ಕ್ರೀಡೆಗೆ ಕೇವಲ 964 ಕೋಟಿ ರೂ. ಗಳನ್ನು ಮೀಸಲಿಡಲಾಗಿತ್ತು. ಆದರೆ ಈಗ 2023-24ರ ಬಜೆಟ್‌ನಲ್ಲಿ ಈ ಮೊತ್ತ 3397 ಕೋಟಿಗೆ ಏರಿಕೆ ಕಂಡಿದೆ ಎಂದು ಹೇಳಿದರು. ಇದೇ ವೇಳೆ ಅವರು ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಿತ ಕ್ರೀಡಾಪಟುಗಳಾದ ಆಕಾಶ್​ದೀಪ್​ ಸಿಂಗ್, ಪ್ರಿಯಾಂಕಾ ಗೋಸ್ವಾಮಿ ಮತ್ತು ಅನೇಕ ಆಟಗಾರರನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಭಾರತ ಹಾಕಿ ತಂಡದ ಸದಸ್ಯರು ಸೇರಿ ವಿವಿಧ ಕ್ರೀಡಾ ಕ್ಷೇತ್ರದ ಕ್ರೀಡಾಪಟುಗಳು ಮತ್ತು ಕೋಚ್​ಗಳು ಉಪಸ್ಥಿತರಿದ್ದರು.

Exit mobile version