ಮುಂಬಯಿ: ಸಚಿನ್ ತೆಂಡೂಲ್ಕರ್ ಅವರ ಸಮ್ಮುಖದಲ್ಲೇ, ಅವರು ಆಡಿ ಬೆಳೆದ ಮುಂಬಯಿ ಖಾಂಖೆಡೆ ಸ್ಟೇಡಿಯಂನಲ್ಲೇ ವಿರಾಟ್ ಕೊಹ್ಲಿ(virat kohli) 50ನೇ ಶತಕ ಬಾರಿಸಿ ಸಚಿನ್ ಅವರ ದಾಖಲೆ ಮುರಿದಿದ್ದಾರೆ. ಬುಧವಾರ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು. ಅವರ ಈ ಸಾಹಸಕ್ಕೆ ಸ್ವತಃ ಸಚಿನ್ ಸೇರಿ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಪತ್ನಿ ಅನುಷ್ಕಾ ಶರ್ಮ(Anushka Sharma) ಅವರು ಮೆಚ್ಚುಗೆ ಸೂಚಿಸಿ ಮಾಡಿರುವ ಪೋಸ್ಟ್ ಎಲ್ಲರ ಮನಗೆದ್ದಿದೆ.
ಅನುಷ್ಕಾ ಶರ್ಮ(Virat And Anushka) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿಯ ಸಾಧನೆಯ ಬಗ್ಗೆ ಬರೆದುಕೊಂಡು, ದೇವರ ಮಗು ಎಂದು ಹೇಳಿದ್ದಾರೆ. “ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್! ನನಗೆ ನಿಮ್ಮ ಪ್ರೀತಿಯ ಆಶೀರ್ವಾದ ಸಿಕ್ಕಿರುವ ಜತೆಗೆ ಕೊಹ್ಲಿಯ ಪ್ರೀತಿ ಕೂಡ ಸಿಗುವಂತೆ ಮಾಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲಿ ಕೊಹ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ಸು ಸಾಧಿಸಲಿ, ಬೆಳವಣಿಗೆ ಹೊಂದಲಿ. ನಿಜವಾಗಿಯೂ ನೀವು ದೇವರ ಮಗು” ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.
ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ
ವಿರಾಟ್ ಕೊಹ್ಲಿ (Virat Kohli) ತಮ್ಮ 50 ನೇ ಏಕದಿನ ಶತಕವನ್ನು ಗಳಿಸುತ್ತಿದ್ದಂತೆ ಇಡೀ ದೇಶವು ಶಹಬ್ಬಾಸ್ಗಿರಿ ನೀಡಿತು. ಈ ವೇಳೆ ಸ್ಟೇಡಿಯಮ್ನ ಗ್ಯಾಲರಿಯಲ್ಲಿದ್ದ ಅವರ ಪತ್ನಿ ಮತ್ತು ಅವರ ಪಾಲಿನ ಅತಿದೊಡ್ಡ ಚಿಯರ್ ಲೀಡರ್ ಅನುಷ್ಕಾ ಶರ್ಮಾ ಆನಂದಭಾಷ್ಪ ಸುರಿಸಿದರು. ಜತೆಗೆ ನೂರಾರು ಫ್ಲೈಯಿಂಗ್ ಕಿಸ್ ಕೊಟ್ಟು ಖುಷಿ ಪಟ್ಟರು.
ಇದನ್ನೂ ಓದಿ ಕೊಹ್ಲಿ ಶತಕಗಳ ಅರ್ಧಶತಕ; ಇಲ್ಲಿದೆ ‘ಸೆಂಚುರಿ ಸರದಾರ’ ಸಾಗಿದ ಹಾದಿ…
ಕೊಹ್ಲಿ ತಮ್ಮ 100ನೇ ರನ್ ಗಳಿಸುತ್ತಿದ್ದಂತೆ, ಅನುಷ್ಕಾ ಕ್ರೀಡಾಂಗಣದಲ್ಲಿ ಭಾವನಾತ್ಮಕ ಕ್ಷಣವನ್ನು ಅನುಭವಿಸಿದರು. ಅವರು ತನ್ನ ಗಂಡನಿಗೆ ಸಾವಿರ ಮುತ್ತುಗಳನ್ನು ಗಾಳಿಯಲ್ಲಿ ರವಾನಿಸುವ ವೇಳೆ ಕ್ಯಾಮೆರಾಗಳು ಅವರ ಸಂತಸದ ಕಣ್ಣೀರು ತುಂಬಿದ ಕಣ್ಣುಗಳನ್ನು ಸೆರೆಹಿಡಿದವು. ವಿರಾಟ್ ಕೂಡ ಅವರನ್ನು ನೋಡಿ ಪತ್ನಿಗೆ ಪ್ರೀತಿಯ ಮುತ್ತುಗಳನ್ನು ಕಳುಹಿಸಿದ್ದರು.
Happiness 😍❤️ #ViratKohli #anushkasharma #IndiaVsNewZealand #WorldCup2023 https://t.co/t0FOc9mPjI
— 🥰 filmy Affairs 😍 (@TollywoodLover7) November 16, 2023
ಈ ಜೋಡಿ ಅದೆಷ್ಟೋ ಜನರಿಗೆ ಸ್ಫೂರ್ತಿ
ಕೊಹ್ಲಿ ಮತ್ತು ಅನುಷ್ಕಾ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್ಜಿವೊ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.
ಇದನ್ನೂ ಓದಿ Virat Kohli : ಸಚಿನ್ ದಾಖಲೆ ಮುರಿದ ಬಳಿಕ ವಿರಾಟ್ ಕೊಹ್ಲಿ ತಲೆಬಾಗಿ ನಮಿಸಿದ್ದು ಯಾರಿಗೆ?
“ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿತ್ತು. ನೀವು ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ನಿಮ್ಮೊಳಗೆ ಆ ಬದಲಾವಣೆಗಳನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸುತ್ತೀರಿ. ಅವಳ ಜೀವನದ ದೃಷ್ಟಿಕೋನವು ವಿಭಿನ್ನವಾಗಿತ್ತು ಮತ್ತು ಅದು ನನ್ನನ್ನು ಉತ್ತಮವಾಗಿ ಬದಲಾಯಿಸಲು ಮತ್ತು ವಿಷಯಗಳನ್ನು ಹೆಚ್ಚು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗಗಳು ದೊಡ್ಡವು. ಅವಳನ್ನು ನೋಡಿದಾಗ, ನನಗೆ ಏನೇ ಸಮಸ್ಯೆಗಳಿದ್ದರೂ ಏನೂ ಅಲ್ಲ ಎಂದು ಎನಿಸಿಬಿಡುತ್ತದೆ” ಎಂದು ಕೊಹ್ಲಿ ಪತ್ನಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು.