ಅಹಮದಾಬಾದ್: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರು ವರ್ಷಗಳ ಶತಕದ ಬರ ನೀಗಿಸಿಕೊಂಡದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೇ ಪಂದ್ಯದಲ್ಲಿ 186 ರನ್ಗಳನ್ನು ಬಾರಿಸಿರುವ ಅವರು ಮತ್ತೆ ಹೊಡೆಬಡಿಯ ಬ್ಯಾಟಿಂಗ್ಗೆ ಸೈ ಎಂಬ ಸಂದೇಶ ರವಾನಿಸಿದ್ದಾರೆ. ಏತನ್ಮಧ್ಯೆ ಪತಿಯ ಸಾಧನೆಗೆ ಪತ್ನಿ ಅನುಷ್ಕಾ ಶರ್ಮಾ ಶಹಬ್ಬಾಸ್ ಗಿರಿ ನೀಡಿದ್ದಾರೆ. ಅಲ್ಲದೆ ಅವರ ಪರಿಶ್ರಮ ನನಗೆ ಮಾದರಿ ಎಂಬುದಾಗಿಯೂ ಹೇಳಿಕೆ ಕೊಟ್ಟಿದ್ದಾರೆ.
ಭಾರತ ತಂಡ ಟೆಸ್ಟ್ ಸರಣಿಯ ಕೊನೇ ಪಂದ್ಯದಲ್ಲಿ 571 ರನ್ಗಳಿಗೆ ಆಲ್ಔಟ್ ಆಗಿದೆ. ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಬ್ಯಾಟ್ ಮಾಡದ ಕಾರಣ 9 ವಿಕೆಟ್ಗಳಿಗೆ ಭಾರತದ ಇನಿಂಗ್ಸ್ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ 186 ರನ್ ಬಾರಿಸುವುದರೊಂದಿಗೆ 75ನೇ ಅಂತಾರಾಷ್ಟ್ರೀಯ ಶತಕದ ಸಾಧನೆ ಮಾಡಿದ್ದಾರೆ. ಆದರೆ, ಈ ಬೃಹತ್ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುತ್ತಿದ್ದ ವೇಳೆ ವಿರಾಟ್ ಕೊಹ್ಲಿ ಅನಾರೋಗ್ಯ ಎದುರಿಸುತ್ತಿದ್ದರು ಎಂಬುದು ಇದೀಗ ಅನುಷ್ಕಾ ಶರ್ಮಾ ಸಂದೇಶದದ ಮೂಲಕ ಗೊತ್ತಾಗಿದೆ.
ಇದನ್ನೂ ಓದಿ : IND VS AUS: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ; ಏನದು?
ವಿರಾಟ್ ಕೊಹ್ಲಿ ದೊಡ್ಡ ಮೊತ್ತವನ್ನು ಪೇರಿಸಿದ ಬಳಿಕ ಬ್ಯಾಟ್ ಎತ್ತಿ ಸಂಭ್ರಮಿಸಿದ್ದರು. ಅವರ ಈ ಮೊತ್ತ ಆಸ್ಟ್ರೇಲಿಯಾ ತಂಡದ ವಿರುದ್ಧ ಅವರ ವೈಯಕ್ತಿಕ ಗರಿಷ್ಠ ಮೊತ್ತವೂ ಹೌದು. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಖುಷಿ ವ್ಯಕ್ತಪಡಿಸಿರುವ ಅನುಷ್ಕಾ ಶರ್ಮಾ, ಅನಾರೋಗ್ಯದ ನಡುವೆಯೂ ಇಂಥದ್ದೊಂದು ಬೃಹತ್ ಇನಿಂಗ್ಸ್ ಕಟ್ಟಿದ್ದಾರೆ. ಇದೊಂದು ನನಗೆ ಪ್ರೇರಣೆ ಎಂಬುದಾಗಿ ಬರೆದಕೊಂಡಿದ್ದಾರೆ.