Site icon Vistara News

Virat kohli : ಟೀಮ್​ ಇಂಡಿಯಾ ಹೋಟೆಲ್​ನಲ್ಲಿ ಕೊಹ್ಲಿ ಜತೆ ಹೆಜ್ಜೆ ಹಾಕಿದ ಅನುಷ್ಕಾ

Virat kohli

ಬೆಂಗಳೂರು: ಭಾನುವಾರ (ನವೆಂಬರ್ 12) ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಭಾರತೀಯ ಕ್ರಿಕೆಟ್ ತಂಡ ನವೆಂಬರ್ 6 ರಂದು ಬೆಂಗಳೂರಿಗೆ ತಲುಪಿದೆ. ಅವರೆಲ್ಲರೂ ಟೀಮ್ ಇಂಡಿಯಾ ನೀಡಿರುವ ಹೋಟೆಲ್​ನಲ್ಲಿ ತಂಗಿದ್ದಾರೆ. ಈ ಹೋಟೆಲ್​ಗಳಲ್ಲಿ ತಂಡದ ಸದಸ್ಯರು ಮಾತ್ರ ಹೋಟೆಲ್​​ನಲ್ಲಿ ಉಳಿಯಬಹುದಾದರೂ ವಿರಾಟ್ ಕೊಹ್ಲಿ (Virat kohli) ಜತೆ ಪತ್ನಿ ಅನುಷ್ಕಾ ಶರ್ಮಾ ಇರುವುದನ್ನು ಕಂಡಿದ್ದಾರೆ. ಪಾಪರಾಜಿಗಳು ಅದರ ವಿಡಿಯೊವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಬಾಲಿವುಡ್ ನಟಇ ಕಪ್ಪು ಒನ್ ಪೀಸ್ ಡ್ರೆಸ್​​ನಲ್ಲಿ ಕಾಣಿಸಿಕೊಂಡರೆ, ಕೊಹ್ಲಿ ಕೂಡ ಕಪ್ಪು ಶರ್ಟ್ ಧರಿಸಿಕೊಂಡು ಹೋಟೆಲ್​ನಿಂದ ಹೊರಗೆ ಬಂದಿದ್ದರು. ಸ್ಟಾರ್​ ದಂಪತಿಗಳು ಎತ್ತ ಕಡಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಬಾಡಿಗಾರ್ಡ್​ಗಳ ಜತೆಗೆ ನಡೆಯುತ್ತಿರುವುದು ಕಂಡು ಬಂದಿದೆ.

ಅನುಷ್ಕಾ ಮತ್ತು ಕೊಹ್ಲಿ ಡಿನ್ನರ್ ಡೇಟ್ ಅಥವಾ ಕ್ಯಾಶುಯಲ್ ವಿಹಾರಕ್ಕಾಗಿ ಹೊರಗೆ ಹೋಗುತ್ತಿರಬಹುದು ಎಂದು ಹೇಳಲಾಗಿದೆ. ವೀಡಿಯೊವನ್ನು ಕೊಹ್ಲಿಯ ಅಭಿಮಾನಿಯೊಬ್ಬರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾ ಗುರುವಾರ ಮತ್ತು ನಾಳೆ ತರಬೇತಿ ಅವಧಿಯನ್ನು ಹೊಂದಿರುತ್ತದೆ. ಕೊಹ್ಲಿ ತರಬೇತಿಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗರಿಷ್ಠ ಸ್ಕೋರರ್​

ಭಾರತದ ಮಾಜಿ ನಾಯಕ ವಿಶ್ವಕಪ್​ನ್ಲಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, ಎಂಟು ಪಂದ್ಯಗಳಿಂದ 543 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 101 ರನ್ ಬಾರಿಸಿದ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.

ಕೊಹ್ಲಿ ಭಾರತಕ್ಕಾಗಿ ಅದ್ಭುತ ಫಾರ್ಮ್​​ನ ಲ್ಲಿದ್ದಾರೆ. ಅದು ಟ್ರಿಕ್ ರನ್ ಚೇಸಿಂಗ್ ಆಗಿರಲಿ ಅಥವಾ ಸ್ಕೋರ್​ಗಳನ್ನು ಹೊಂದಿಸುವುದಿರಲಿ 36 ವರ್ಷದ ಆಟಗಾರ ಮುಂಚೂಣಿ ಸ್ಥಾನದಲ್ಲಿ ನಿಂತು ಆಡುತ್ತಿದ್ದಾರೆ. ಉಳಿದ ಆಕ್ರಮಣಕಾರಿ ಬ್ಯಾಟರ್​ಗಳಿಗೆ ಮೊದಲ ಎಸೆತದಿಂದ ರನ್ ಬಾರಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ.

ಇದನ್ನೂ ಓದಿ: ನನ್ನ ಮಗನನ್ನು ಕ್ರಿಕೆಟ್ ಆಡಲು ಕಳುಹಿಸುವುದಿಲ್ಲ; ಮಾಜಿ ಕ್ರಿಕೆಟಿಗನ ಆಘಾತಕಾರಿ ಹೇಳಿಕೆ

ಕೊಹ್ಲಿಯ ಉತ್ತಮ ಫಾರ್ಮ್ ಕೂಡ ಭಾರತದ ಮೇಲೆ ಪರಿಣಾಮ ಬೀರಿದೆ, ಏಕೆಂದರೆ ವಿಶ್ವಕಪ್​​ನಲ್ಲಿ ಇದುವರೆಗೆ ಎಂಟು ಪಂದ್ಯಗಳನ್ನು ಗೆದ್ದಿರುವ ಟೀಮ್​ ಇಂಡಿಯಾ ಏಕೈಕ ಅಜೇಯ ತಂಡವಾಗಿದೆ.

ನೆದರ್ಲೆಂಡ್ಸ್ ವಿರುದ್ಧ ವಿರಾಟ್ ಆಡುತ್ತಾರಾ?

ಭಾರತ ಈಗಾಗಲೇ ವಿಶ್ವಕಪ್​​ಗೆ ಅರ್ಹತೆ ಪಡೆದಿರುವುದರಿಂದ, ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಯೋಚಿಸಬಹುದು. ಏಷ್ಯಾಕಪ್ ಬಳಿಕದಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿರುವ ಕೊಹ್ಲಿ ಅವರಲ್ಲಿ ಕೊಹ್ಲಿಯೂ ಒಬ್ಬರಾಗಿದ್ದಾರೆ. ಕೊಹ್ಲಿ ಬದಲಿಗೆ ಇಶಾನ್ ಕಿಶನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುವ ಆಯ್ಕೆ ಭಾರತಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಮ್ಯಾಕ್ಸ್​ವೆಲ್​ ಹೊಗಳಿದ ಕೊಹ್ಲಿ

ಗಾಯದ ಮಧ್ಯೆಯೂ ಅಸಾಮಾನ್ಯ ಬ್ಯಾಟಿಂಗ್​ ಹೋರಾಟ ನಡೆಸಿ ಆಸ್ಟ್ರೇಲಿಯಾ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ ಅವರ ಸಾಹಸಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೊಹ್ಲಿ ಹಾಗೂ ಮ್ಯಾಕ್ಸಿ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದಾರೆ.

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮೆಚ್ಚುಗೆಯ ಪೋಸ್ಟ್​ ಮಾಡಿರುವ ಕೊಹ್ಲಿ, “ಇದು ನಿಮ್ಮಿಂದ ಮಾತ್ರ ಸಾಧ್ಯ ಫ್ರೀಕ್​” ಎಂದು ಬರೆದುಕೊಂಡಿದ್ದಾರೆ. ಮ್ಯಾಕ್ಸ್​ವೆಲ್​ ಮತ್ತು ಕೊಹ್ಲಿ ಐಪಿಎಲ್​ನಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.

ಆಸ್ಟ್ರೇಲಿಯಾ ತಂಡ 49 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ವೇಳೆ ಆಡಲು ಬಂದ ಗ್ಲೆನ್​ ಮ್ಯಾಕ್ಸ್​ವೆಲ್​ ಕೊನೆ ತನಕ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿಕೊಟ್ಟರು. ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಡಿಆರ್​ಎಸ್​ ಮನವಿ ಎದುರಿಸಿದ ಗ್ಲೆನ್​ ಮ್ಯಾಕ್ಸ್​ವೆಲ್ ಅಲ್ಲಿಂದ 128 ಎಸೆತಗಳನ್ನು ಎದುರಿಸಿ 21 ಫೋರ್ ಹಾಗೂ 10 ಸಿಕ್ಸರ್​ಗಳ ನೆರವಿನಿಂದ ದ್ವಿಶತಕ(201*) ಬಾರಿಸಿ ಗೆಲುವು ತಂದುಕೊಟ್ಟರು.

Exit mobile version