Site icon Vistara News

Virat Kohli | ಸ್ಕೂಟರ್ ಹತ್ತಿ ಮುಂಬಯಿಯಲ್ಲಿ ಜಾಲಿ ರೈಡ್‌ ಹೋದ ವಿರಾಟ್‌ ಕೊಹ್ಲಿ- ಅನುಷ್ಕಾ ದಂಪತಿ

virat kohli

ಮುಂಬಯಿ : ಸ್ಟಾರ್‌ ದಂಪತಿ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ತಮ್ಮ ಲಕ್ಸುರಿ ಕಾರುಗಳನ್ನು ಬಿಟ್ಟು ಸ್ಕೂಟರ್‌ನಲ್ಲಿ ವೀಕೆಂಡ್‌ ಜಾಲಿ ರೈಡ್‌ ಮಾಡಿದ್ದಾರೆ. ಮುಂಬಯಿಯ ಬೀದಿಯಲ್ಲಿ ಅವರು ಸ್ಕೂಟರ್‌ ಸವಾರಿ ಮಾಡುತ್ತಿರುವುದನ್ನು ಹಲವರು ಚಿತ್ರಿಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಸದಾ ಬ್ಯುಸಿಯಾಗಿರುತ್ತಾರೆ. ಕೊಹ್ಲಿ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದರೆ ಅನುಷ್ಕಾ ಜಾಹೀರಾತುಗಳು ಸೇರಿದಂತೆ ನಾನಾ ಬಗೆಯ ಶೂಟಿಂಗ್‌ನಲ್ಲಿ ತೊಡಗಿರುತ್ತಾರೆ. ಆದರೆ, ದಂಪತಿ ತಮಗಾಗಿ ಒಂದಿಷ್ಟು ಸಮಯ ಮೀಸಲಿಡುತ್ತಾರೆ. ಅಂತೆಯೇ ಅವರು ಶನಿವಾರ ಸ್ಕೂಟರ್‌ನಲ್ಲಿ ಮುಂಬಯಿ ಸುತ್ತಿದ್ದಾರೆ. ಅವರಿಬ್ಬರು ಎಲ್ಲಿಗೆ ಹೊರಟವರು ಎಂಬುದು ಯಾರಿಗೂ ಗೊತ್ತಿಲ್ಲ.

ವಿರಾಟ್‌ ಕೊಹ್ಲಿ ನೀಲಿ ಬಣ್ಣದ ಶರ್ಟ್‌ ಧರಿಸಿದ್ದರೆ, ಅನುಷ್ಕಾ ಶರ್ಮ ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದರು. ಅವರಿಬ್ಬರೂ ಹೆಲ್ಮೆಟ್‌ ಧರಿಸಿ ಮುಖ ಕಾಣದಂತೆ ಮಾಡಿದ್ದರು.

ಶೂಟಿಂಗ್‌ಗೆ ತೆರಳಿದ್ದರು

ಅವರಿಬ್ಬರು ಶೂಟಿಂಗ್ ಒಂದಕ್ಕೆ ತೆರಳುವಾಗ ಸ್ಕೂಟರ್‌ನಲ್ಲಿ ಪ್ರಯಾಣಿಸಿದ್ದರು ಎಂದು ಹೇಳಲಾಗುತ್ತಿದೆ. ಯಾಕೆಂದರೆ ವಿರಾಟ್‌ ಮತ್ತು ಶೂಟಿಂಗ್ ಒಂದು ಮುಗಿದ ಬಳಿಕ ಕ್ಯಾರವಾನ್‌ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೊದಲ್ಲಿ ಧರಿಸಿದ್ದ ಬಟ್ಟೆಯನ್ನೇ ಸ್ಕೂಟರ್‌ನಲ್ಲಿ ಪ್ರಯಾಣಿಸುವಾಗ ಹಾಕಿದ್ದರು. ಹೀಗಾಗಿ ಅವರು ಶೂಟಿಂಗ್‌ಗೆ ಸ್ಕೂಟರ್‌ನಲ್ಲಿ ತೆರಳಿದ್ದರು ಎನ್ನಲಾಗಿದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ| ಟೈಮಿಂಗ್‌ ಅಂತೀವಲ್ಲಾ.. ಏನಿದು? ಜಿಂಕೆಗೂ, ವಿರಾಟ್‌ ಕೊಹ್ಲಿಗೂ ಏನು ಸಂಬಂಧ?

Exit mobile version