ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಮತ್ತು ಪತ್ನಿ ಅನುಷ್ಕಾ ಶರ್ಮಾ(Anushka Sharma) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವರದಿಗಳು ಬಹಳ ಸಮಯದಿಂದ ಸುದ್ದಿ ಮಾಡುತ್ತಿವೆ. ದಂಪತಿಗಳು ತಮ್ಮ ಎರಡನೇ ಗರ್ಭಧಾರಣೆಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, ನಟಿ ಲಂಡನ್‌ನಲ್ಲಿ ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ವಿರಾಟ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿದ್ದರು.
ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಇತ್ತೀಚೆಗೆ ತಮ್ಮ ಟ್ವಿಟರ್ ಎಕ್ಸ್ನಲ್ಲಿ ವಿರಾಟ್ ಮತ್ತು ಅನುಷ್ಕಾ 2ನೇ ಮಗುವಿನ ನಿರೀಕ್ಷೆ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದರು. “ಮುಂದಿನ ದಿನಗಳಲ್ಲಿ ಹೊಸ ಮಗು ಜನಿಸಲಿದೆ! ಮಗು ತಂದೆಯಂತೆ ಭಾರತ ಕ್ರಿಕೆಟ್ ಅನ್ನು ಶ್ರೇಷ್ಠ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಭಾವಿಸುತ್ತೇವೆ. ಅಥವಾ ಅದು ತಾಯಿಯನ್ನು ಅನುಸರಿಸಿ ಚಲನಚಿತ್ರ ತಾರೆಯಾಗಬಹುದೇ? ಎಂದು ” ಗೋಯೆಂಕಾ ಅವರು ‘ಮೇಡ್ ಇನ್ ಇಂಡಿಯಾ’ ಮತ್ತು ‘ಟು ಬಿ ಬಾರ್ನ್ ಇನ್ ಲಂಡನ್’ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ IND vs ENG: ಕಪ್ಪು ಪಟ್ಟಿ ಧರಿಸಿ ಆಡಲಿಳಿದ ಟೀಮ್ ಇಂಡಿಯಾ ಆಟಗಾರರು
A new baby is to be born in the next few days! Hope the baby takes India to great heights like the greatest cricketing father. Or will it follow the mother and be a film star? #MadeInIndia #ToBeBornInLondon
— Harsh Goenka (@hvgoenka) February 13, 2024
ಆನ್ಲೈನ್ ಸಂದರ್ಶನದಲ್ಲಿ ಮಾತನಾಡಿದ್ದ ಎಬಿ ಡಿ ವಿಲಿಯರ್ಸ್, ‘ನನಗೆ ತಿಳಿದಿರುವಂತೆ ವಿರಾಟ್ ಕೊಹ್ಲಿ ಕುಟುಂಬದ ಜತೆ ಸಮಯ ಕಳೆಯಲು ಬಯಸಿದ್ದಾರೆ. ಇದರಿಂದ ಕೊಹ್ಲಿ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿದ್ದಾರೆ. ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕೊಹ್ಲಿಯ ನಿರ್ಧಾರವನ್ನು ಗೌರವಿಸಲೇ ಬೇಕು” ಎಂದು ಡಿ ವಿಲಿಯರ್ಸ್ ಹೇಳಿದ್ದರು. ಆದರೆ ಡಿ ವಿಲಿಯರ್ಸ್ ಈ ಹೇಳಿಕೆ ನೀಡಿದ ಮರು ದಿನವೇ ತಮ್ಮ ಹೇಳಿಕೆ ಸುಳ್ಳು ಎಂದು ಹೇಳಿದ್ದರು.
AB De Villiers said, "Virat Kohli and Anushka Sharma are expecting their 2nd child, so Virat is spending time with his family". (AB YT). pic.twitter.com/qurRKnFK1q
— Virat Kohli Fan Club (@Trend_VKohli) February 3, 2024
ಅನುಷ್ಕಾಗೆ ಪ್ರೆಗ್ನೆನ್ಸಿಯಲ್ಲಿ ಸಮಸ್ಯೆ?
ಅಭಿಷೇಕ್ ತ್ರಿಪಾಠಿ ಎಂಬವರು ಅನುಷ್ಕಾಗೆ ಪ್ರೆಗ್ನೆನ್ಸಿಯಲ್ಲಿ ಸಮಸ್ಯೆಯಿದೆ. ಇದೇ ಕಾರಣಕ್ಕೆ ಕೊಹ್ಲಿ ಕುಟುಂಬದ ಜತೆಗಿರಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಅನುಷ್ಕಾ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಸುದ್ದಿ ಎಷ್ಟರಮಟ್ಟಿಗೆ ಅಧಿಕೃತ ಎಂದು ತಿಳಿದುಬಂದಿಲ್ಲ.