Site icon Vistara News

Lionel Messi | ಪ್ರಧಾನಿ ಮೋದಿಗೆ ಲಿಯೋನೆಲ್ ಮೆಸ್ಸಿಯ ಜೆರ್ಸಿ ಗಿಫ್ಟ್ ಕೊಟ್ಟ ಅರ್ಜೆಂಟೀನಾದ ಗಣ್ಯರು

modi

#image_title

ನವ ದೆಹಲಿ: ಲಿಯೋನೆಲ್​ ಮೆಸ್ಸಿ (Lionel Messi) ನೇತೃತ್ವದ ಅರ್ಜೆಂಟೀನಾ ತಂಡ ಫುಟ್ಬಾಲ್​ ವಿಶ್ವ ಕಪ್​ ಗೆದ್ದ ತಕ್ಷಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ಶುಭಾಶಯ ಕೋರಿದ್ದರು. ಇದೀಗ ಅವರಿಗೆ ಮೆಸ್ಸಿಯ ಫುಟ್ಬಾಲ್​ ಜೆರ್ಸಿ ಉಡುಗೊರೆಯಾಗಿ ಸಿಕ್ಕಿದೆ. ಅರ್ಜೆಂಟೀನಾದ ಸರಕಾರಿ ಇಂಧನ ಸಂಸ್ಥೆಯ ವೈಪಿಎಫ್​ನ ಮುಖ್ಯಸ್ಥರಾದ ಪ್ಯಾಬ್ಲೊ ಗೊನ್ಜಾಲೆಜ್​ ಅವರು ಪ್ರಧಾನಿ ಮೋದಿಯನ್ನು ಭೇಟಿಯಾದ ಸಂದರ್ಭದಲ್ಲಿ ಸ್ಮರಣಿಕೆಯಾಗಿ ಜೆರ್ಸಿಯನ್ನು ನೀಡಿದ್ದಾರೆ. ಗೊನ್ಜಾಲೆಜ್​ ಭಾರತದಲ್ಲಿ ನಡೆಯುತ್ತಿರುವ ಇಂಧನ ಸಪ್ತಾಹಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಅವರು ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿಯಾಗಿ ಜೆರ್ಸಿ ಕೊಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕ್ರೀಡಾ ಕ್ಷೇತ್ರದ ಬೆಳವಣಿಗೆಗೂ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ನಮ್ಮ ದೇಶದ ಆಟಗಾರರು ಉತ್ತಮ ಸಾಧನೆ ತೋರಿದಾಗ ಅವರ ಜತೆ ಸಂಭಾಷಣೆ ನಡೆಸುವುದು ಹಾಗೂ ಅವರ ಜತೆ ಚಹಾ ಕೂಟ ಏರ್ಪಡಿಸುವುದೆಲ್ಲ ಮಾಡುತ್ತಾರೆ. ಅಂತೆಯೇ ಅವರು ಜಾಗತಿಕ ಕ್ರೀಡಾ ಕ್ಷೇತ್ರದ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ. ಅದೇ ಕಾರಣಕ್ಕೆ ಅವರು ಅರ್ಜೆಂಟೀನಾ ತಂಡ ಚಾಂಪಿಯನ್​ಪಟ್ಟ ಅಲಂಕರಿಸಿದಾಗ ಅಭಿನಂದನೆ ಸಲ್ಲಿಸಿದ್ದರು.

ಇದನ್ನೂ ಓದಿ : Lionel Messi: ವೃತ್ತಿಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ; ನಿವೃತ್ತಿಯ ಸುಳಿವು ಬಿಟ್ಟುಕೊಟ್ಟ ಲಿಯೋನೆಲ್​ ಮೆಸ್ಸಿ

ಭಾರತದಲ್ಲಿ ನಡೆಯುತ್ತಿರುವ ಇಂಧನ ಸಪ್ತಾಹಕ್ಕೆ ಬಂದಿರುವ ಅರ್ಜೆಂಟೀನಾದ ಕಂಪನಿ ಇಲ್ಲಿ ಹೂಡಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಪ್ರಮುಖವಾಗಿ ಅಣುಶಕ್ತಿಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡುವುದು ಆ ದೇಶದ ಚಿಂತನೆಯಾಗಿದೆ. ಭಾರತವೂ ಅರ್ಜೆಂಟೀನಾದ ಜತೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಉತ್ಸುಕವಾಗಿದೆ.

Exit mobile version