ಮೆಲ್ಬೋರ್ನ್: ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ನ (Australian Open) ಮಹಿಳೆಯ ಸಿಂಗಲ್ಸ್ ವಿಭಾಗದ ಚಾಂಪಿಯನ್ ಪಟ್ಟವನ್ನು ಬೆಲಾರಸ್ನ ಅರಿನಾ ಸಬಲೆಂಕಾ (aryna sablenka) ಅಲಂಕರಿಸಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು 4-6, 6-3,6-4 ಸೆಟ್ಗಳ ಅಂತರದಿಂದ ಕಜಕಸ್ತಾನದ ಎಲೆನಾ ರಿಬಕಿನಾ (Elena Rybakina) ಅವರನ್ನು ಮಣಿಸಿ ಟ್ರೋಫಿ ಮುಡಿಗೇರಿಸಿಕೊಂಡರು. ಇದು ಅರಿನಾ ಪಾಲಿನ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದೆ.
ಅತ್ಯಂತ ರೋಚಕವಾಗಿ ನಡೆದ ಹಣಾಹಣಿಯಲ್ಲಿ ಮೊದಲ ಸೆಟ್ ಗೆದ್ದ ಕಜಕಸ್ತಾನದ ಅಟಗಾರ್ತಿ ಮುಂದೆನೆರಡು ಸುತ್ತಿನಲ್ಲಿ ಬೆಲಾರಸ್ನ ಆಟಗಾರ್ತಿಯ ಪೈಪೋಟಿ ಎದುರಿಸಲು ವಿಫಲಗೊಂಡರು. ಇವರಿಬ್ಬರ ನಡುವಿನ ಕಾದಾಟ 2 ಗಂಟೆ 28 ನಿಮಿಷಗಳ ತನಕ ನಡೆಯಿತು. ಗ್ರೌಂಡ್ ಸ್ಟ್ರೋಕ್ಗಳು ಹಾಗೂ ನಿರಂತರ ರ್ಯಾಲಿಗಳು ರಾಡ್ಲೇವರ್ ಅರೆನಾದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಟೆನಿಸ್ ಅಭಿಮಾನಿಗಳಿಗೆ ರಸದೌತಣ ನೀಡಿದವು.
ಇದನ್ನೂ ಓದಿ : Australian Open 2023: ಆಸ್ಟ್ರೇಲಿಯಾ ಓಪನ್; ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ ರನ್ನರ್ ಅಪ್
ಮೊದಲ ಸೆಟ್ 34 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಆ ಸೆಟ್ ಗೆದ್ದ ರಿಬಕಿನಾ ಪ್ರಶಸ್ತಿ ಗೆಲ್ಲುವ ಮುನ್ಸೂಚನೆ ನೀಡಿದರು. ಆದರೆ, 57 ನಿಮಿಷಗಳ ಮುಂದಿನ ಸೆಟ್ನಲ ಹೋರಾಟದಲ್ಲಿ ಸಬಲೆಂಕಾ ಗೆಲುವು ಸಾಧಿಸಿದರು. ನಿರ್ಣಾಯ ಸೆಟ್ ಹೆಚ್ಚು ಪೈಪೋಟಿಯಿಂದ ಕೂಡಿತ್ತು. ಈ ಗೆಲುವಿನೊಂದಿಗೆ ಸಬಲಂಕಾ ವಿಶ್ವ ರ್ಯಾಂಕ್ನಲ್ಲಿ ಬಡ್ತಿ ಡೆಯಲಿದ್ದಾರೆ.