ಮುಂಬಯಿ : ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರಿಗೆ ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿಲ್ಲ. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಅವರು ಅದಕ್ಕಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್‌ನಿಂದ ಹೊರಕ್ಕೆ ನಡೆದು ಗೋವಾ ಕ್ರಿಕೆಟ್ ತಂಡ ಸೇರಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದರೂ ಎರಡು ಆವೃತ್ತಿಯಲ್ಲೂ ಅವರಿಗೆ ಆಡುವ ಅವಕಾಶ ಲಭಿಸಿಲ್ಲ. ಈ ರೀತಿಯಾಗಿ ನಾನಾ ಸವಾಲುಗಳನ್ನು ಎದುರಿಸುತ್ತಿರುವ ಅರ್ಜುನ್ ತೆಂಡೂಲ್ಕರ್ ಅವರು ಕ್ರಿಕೆಟ್‌ನಲ್ಲಿ ವಿಶೇಷ ತರಬೇತಿ ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಅವರು ಚಂಡಿಗಢದ ಜೆಪಿ ಅಟಾರಿ ಮೆಮೊರಿಯಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆಡುತ್ತಿದ್ದಾರೆ. ಸೆಪ್ಟೆಂಬರ್ ೨೨ರಂದು ಅದು ಆರಂಭಗೊಂಡಿದೆ. ಅದಕ್ಕಿಂತ ಮೊದಲು ಅವರು ಯೋಗರಾಜ್ ಸಿಂಗ್ ಬಳಿ ಅಭ್ಯಾಸ ಆರಂಭಿಸಿದ್ದರು.
೨೩ ವರ್ಷದ ಅರ್ಜುನ್ ತೆಂಡೂಲ್ಕರ್ ಅವರಿಗೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ಪಡೆಯಲು ಸೂಕ್ತ ಸಮಯ. ಅದಕ್ಕಾಗಿ ಅವರು ದೇಶೀ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಪುತ್ರ ಯುವರಾಜ್ ಸಿಂಗ್ ಅವರ ವೃತ್ತಿ ಕ್ರಿಕೆಟ್‌ನ ಯಶಸ್ಸಿನಲ್ಲಿ ಪ್ರಧಾನ ಪಾತ್ರ ವಹಿಸಿರುವ ಯೋಗರಾಜ್ ಸಿಂಗ್ ಅವರು ಕೋಚಿಂಗ್ ವಿಚಾರದಲ್ಲಿ ಕಠಿಣ ಮನಸ್ಥಿತಿ ಹೊಂದಿರುವ ಕಾರಣ ಅವರ ಬಳಿಗೆ ಅರ್ಜುನ್ ಅವರ ಬಳಿಗೆ ತೆರಳಿದ್ದಾರೆ.
ಇದನ್ನೂ ಓದಿ | IND vs ZIM ODI | ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಶುಬ್ಮನ್ ಗಿಲ್