ಮುಂಬಯಿ: ಪ್ರಸಕ್ತ ಸಾಲಿನ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಗೋವಾ ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್(Arjun Tendulkar) ಮಂಕಡಿಂಗ್ ರನೌಟ್ಗೆ ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅರ್ಜುನ್, ಮಂಕಡಿಂಗ್ ಔಟ್ಗೆ ನನ್ನ ಬೆಂಬವಿದೆ. ಏಕೆಂದರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಹೀಗಿರುವಾಗ ಈ ಅವಕಾಶವನ್ನು ಎಲ್ಲ ಆಟಗಾರರು ಬಳಿಸಿಕೊಳ್ಳಬೇಕು. ಇದು ಕೂಡ ಆಟದ ಒಂದು ಭಾಗ ಎಂದು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಹೇಳಿದ್ದಾರೆ.
“ಮಂಕಡಿಂಗ್ ಔಟ್ ಆಟದ ಕ್ರಮಕ್ಕೆ ವಿರುದ್ಧವಾಗಿದೆ ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ಈ ರೀತಿ ಔಟ್ ಮಾಡಿದ ಆಟಗಾರನಿಗೆ ನಾನು ಬೆಂಬಲಿಸುತ್ತೇನೆ. ಒಂದೊಮ್ಮೆ ಈ ನಿಯಮಕ್ಕೆ ಮಾನ್ಯತೆ ಇರದಿದ್ದರೆ ಆಗ ಇದನ್ನು ವಿರೋಧಿಸುತ್ತಿದ್ದೆ” ಎಂದು ತಿಳಿಸಿದರು.
ಈ ಹಿಂದೆ ಮಂಕಡಿಂಗ್ ಮೂಲಕ ರನೌಟ್ ಮಾಡಿದರೆ ಇದನ್ನು ಕ್ರೀಡಾಸ್ಪೂರ್ತಿಗೆ ವಿರುದ್ಧ ಎನ್ನಲಾಗುತ್ತಿತ್ತು. ಆದರೆ ಎಂಸಿಸಿಯು ಕಳೆದ ವರ್ಷ ಈ ನಿಯಮ ತಿದ್ದುಪಡಿ ಮಾಡಿ ಈ ರೀತಿ ಔಟ್ ಮಾಡುವುದು ನಿಯಮಬದ್ಧ ಹಾಗೂ ರನೌಟ್ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿತ್ತು. ಅದರಂತೆ ಈ ನಿಯಮ ಇದೀಗ ಕ್ರಿಕೆಟ್ನಲ್ಲಿ ಚಾಲ್ತಿಯಲ್ಲಿದೆ. ಆದರೂ ಈ ಕ್ರಮವನ್ನು ಬಳಸಿದಾಗ ಆಟಗಾರರನ್ನು ಟೀಕಿಸುವುದು ಕಂಡುಬಂದಿದೆ. ಇದೇ ವಿಚಾರವಾಗಿ ಅರ್ಜುನ್ ತೆಂಡೂಲ್ಕರ್ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ವಿಸ್ತಾರ Explainer | ದೇಶಿ ಕ್ರಿಕೆಟ್ನ ರಾಜ ರಣಜಿ ಟ್ರೋಫಿಯ ಆರಂಭ ಎಲ್ಲಿಂದ? ಕರ್ನಾಟಕದ ಸಾಧನೆಯೇನು? ಇಲ್ಲಿದೆ ಮಾಹಿತಿ