ನವದೆಹಲಿ: ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಸ್ಪೆಶಲಿಷ್ಟ್ ಚೇತೇಶ್ವರ್ ಪೂಜಾರ ಅವರು ಬರೋಬ್ಬರಿ ಐದು ವರ್ಷಗಳ ಬಳಿಕ ಅರ್ಜುನ(Arjuna Award) ಪ್ರಶಸ್ತಿ ಸ್ವೀಕರಿಸಿದ್ದಾರೆ. 2017ರಲ್ಲಿಯೇ ಅವರಿಗೆ ಈ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಕ್ರಿಕೆಟ್ ಪ್ರವಾಸಗಳ ಕಾರಣದಿಂದಾಗಿ ಪೂಜಾರಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದೀಗ ಕೊನೆಗೂ ಶನಿವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
‘ನನಗೆ ಅರ್ಜುನ ಪ್ರಶಸ್ತಿ ಹಸ್ತಾಂತರಿಸಲು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಕ್ರೀಡಾ ಇಲಾಖೆ, ಬಿಸಿಸಿಐ ಹಾಗೂ ಸಚಿವ ಅನುರಾಗ್ ಠಾಕೂರ್ ಅವರಿಗೆ ಧನ್ಯವಾದಗಳು. ಘೋಷಣೆಯಾದ ವರ್ಷದಲ್ಲಿ ಕ್ರಿಕೆಟ್ ಸರಣಿಗಳಲ್ಲಿ ಆಡಲು ತೆರಳಿದ್ದೆ. ಆದ್ದರಿಂದ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಪೂಜಾರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Team India | ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ ಬಳಿಕ ಭಾರತ ತಂಡ ಸುಧಾರಿಸಲಿಲ್ಲ ಎಂದ ಪಾಕ್ ಬ್ಯಾಟರ್