ಬೆಲ್ಜಿಯಂ: 25 ವರ್ಷದ ಬೆಲ್ಜಿಯಂ ಮೂಲದ ಗೋಲ್ ಕೀಪರ್ ಆರ್ನೆ ಎಸ್ಪೀಲ್(Arne Espeel) ಅವರು ಟೂರ್ನಿಯೊಂದರಲ್ಲಿ ವಿಂಕಲ್ ಸ್ಪೋರ್ಟ್ಸ್ ಬಿ ತಂಡದ ಪರವಾಗಿ ಆಡುವಾಗಲೇ ಕೊನೆಯುಸಿರೆಳೆದಿದ್ದಾರೆ. ಕೊನೆಯುಸಿರೆಳೆಯುವ ಮುನ್ನ ಅವರು ಎದುರಾಳಿ ತಂಡದ ಪೆನಾಲ್ಟಿ ಗೋಲು ತಡೆಯುವಲ್ಲಿ ಯಶಸ್ವಿಯಾಗಿದ್ದರು.
‘ಎದುರಾಳಿ ತಂಡದ ಆಟಗಾರ ಹೊಡೆದ ಪೆನಾಲ್ಟಿ ಕಿಕ್ ತಡೆಯುವಲ್ಲಿ ಯಶಸ್ವಿಯಾದ ಎಸ್ಪೀಲ್ ನೆಲಕ್ಕೆ ಕುಸಿದು ಬಿದ್ದರು. ತಕ್ಷಣ ತುರ್ತು ವೈದ್ಯಕೀಯ ತಂಡದ ಸಿಬ್ಬಂದಿ ಧಾವಿಸಿ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅವರು ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು’ ಎಂದು ಬೆಲ್ಜಿಯಂ ಮಾಧ್ಯಮಗಳು ವರದಿ ಮಾಡಿವೆ.
“ಆರ್ನೆ ಎಸ್ಪೀಲ್ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ” ಎಂದು ಫಿಫಾ ಕಂಬನಿ ಮಿಡಿದಿದೆ.
ಇದನ್ನೂ ಓದಿ Football Viral Video| ಫುಟ್ಬಾಲ್ ಮೈದಾನದಲ್ಲೇ ಆಟಗಾರರ ಫೈಟಿಂಗ್; ವಿಡಿಯೊ ವೈರಲ್
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಅವರ ಸಾವಿನ ಕಾರಣ ತಿಳಿಯಲಿದೆ ಎಂದು ಮೂಲಗಳು ಹೇಳಿವೆ. ಆರ್ನೆ ಎಸ್ಪಿಲ್ ಹಠಾತ್ ಅಗಲಿಕೆಯು ಆಘಾತ ತಂದಿದೆ ಎಂದು ಕ್ಲಬ್ ಪ್ರಕಟಣೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.