ನವದೆಹಲಿ: ಟೀಮ್ ಇಂಡಿಯಾದ ಯುವ ವೇಗಿ ಅರ್ಶ್ದೀಪ್ ಸಿಂಗ್(Arshdeep Singh) ಅವರು ಮುಂಬರುವ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ. ಅವರು ಕೆಂಟ್ ಕೌಂಟಿ(Kent Cricket) ಕ್ಲಬ್ ಪರ ಕಣಕ್ಕಿಳಿಯಲಿದ್ದಾರೆ.
ಅರ್ಶ್ದೀಪ್ ಸಿಂಗ್ ಅವರು ಕೌಂಟಿ ಆಡುವ ವಿಚಾರವನ್ನು ಕೆಂಟ್ ಕೌಂಟಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಕೌಂಟಿ ಆಡುವ ಬಗ್ಗೆ ಮಾಹಿತಿ ನೀಡಿದ ಅರ್ಶ್ದೀಪ್ ಸಿಂಗ್, “ಇಂಗ್ಲಿಷ್ ಕೌಂಟಿಯಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ. ನನ್ನ ಬೌಲಿಂಗ್ ಕೌಶಲ ಹೆಚ್ಚಿಸಲು ಇದೊಂದು ಉತ್ತಮ ಅವಕಾಶ” ಎಂದು ಅವರು ಹೇಳಿದರು.
ಅರ್ಶ್ದೀಪ್ ಸಿಂಗ್ ಅವರು ಕೌಂಟಿ ಆಡಲು ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರ ಸಲಹೆ ಕಾರಣ. ಈ ವಿಚಾರವನ್ನು ಡ್ರಾವಿಡ್ ಈಗಾಗಲೇ ಖಚಿತಪಡಿಸಿದ್ದಾರೆ. ಜತೆಗೆ ಇದೊಂದು ಅಮೋಘ ಇತಿಹಾಸವುಳ್ಳ ಕ್ರಿಕೆಟ್ ಕ್ಲಬ್ ಆಗಿದೆ ಎಂದು ಹೇಳಿದ್ದಾರೆ. ದ್ರಾವಿಡ್ ಕೂಡ ಕೌಂಟಿ ಕ್ರಿಕೆಟ್ ಆಡಿದ್ದರು.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯ ನಡೆಯುವುದು ಅನುಮಾನ; ಕಾರಣ ಏನು?
ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ಚೇತೇಶ್ವರ್ ಪೂಜಾರ ಕಳೆದ ವರ್ಷ ಕೌಂಟಿ ಕ್ರಿಕೆಟ್ ಆಡಿ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಂಡಿದ್ದರು. ವಿಶ್ವದ ಹಲವು ಕ್ರಿಕೆಟ್ ಆಟಗಾರರು ಕೂಡ ತಮ್ಮ ಕ್ರಿಕೆಟ್ ಪ್ರದರ್ಶನ ಕುಂಠಿತಗೊಂಡಾಗ ಕೌಂಟಿ ಆಡಿ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ. ಇದೀಗ ಅರ್ಶ್ದೀಪ್ ಸಿಂಗ್ ಕೂಡ ಈ ಟೂರ್ನಿಯಲ್ಲಿ ಆಡುವ ಮೂಲಕ ತಮ್ಮ ಬೌಲಿಂಗ್ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.