Site icon Vistara News

ಐರ್ಲೆಂಡ್‌ ಸರಣಿಯಲ್ಲಿ ಬುಮ್ರಾ ದಾಖಲೆ ಮುರಿಯಲಿದ್ದಾರೆ ಅರ್ಶ್‌ದೀಪ್‌ ಸಿಂಗ್‌

Arshdeep Singh appeals during India's T20 World Cup 2022 campaign

ಡಬ್ಲಿನ್‌: ಐರ್ಲೆಂಡ್‌(India tour of Ireland) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ(Ireland vs India, 1st T20I) ನಾಯಕನಾಗಿರುವ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರ ದಾಖಲೆಯೊಂದನ್ನು ಮುರಿಯಲು ಅರ್ಶ್‌ದೀಪ್‌ ಸಿಂಗ್‌(Arshdeep Singh) ಅವರು ಸಜ್ಜಾಗಿದ್ದಾರೆ. ಎರಡು ವಿಕೆಟ್‌ ಕಬಳಿಸಿದರೆ ಅತಿ ಕಡಿಮೆ ಪಂದ್ಯಗಳಲ್ಲಿ 50 ವಿಕೆಟ್‌ ಪೂರ್ತಿಗೊಳಿಸಿದ ಆಟಗಾರನಾಗಿ ಮೂಡಿಬರಲಿದ್ದಾರೆ.

ಬುಮ್ರಾ ದಾಖಲೆ ಪತನ

ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳನ್ನು ಆಡಿ 50 ವಿಕೆಟ್‌ಗಳನ್ನು ಪಡೆದ ದಾಖಲೆ ಸದ್ಯ ಜಸ್‌ಪ್ರೀತ್‌ ಬುಮ್ರಾ ಹೆಸರಿನಲ್ಲಿದೆ. ಬುಮ್ರಾ ಅವರು ಈ ಮೈಲುಗಲ್ಲನ್ನು 41 ಪಂದ್ಯಗಳಲ್ಲಿ ಸಾಧಿಸಿದ್ದರು. ಸದ್ಯ ಅರ್ಶ್‌ದೀಪ್‌ ಅವರು 31 ಪಂದ್ಯಗಳನ್ನು ಆಡಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನೆರಡು ವಿಕೆಟ್‌ ಪಡೆದರೆ ಬುಮ್ರಾ ದಾಖಲೆ ಪತನಗೊಳ್ಳಲಿದೆ.

5ನೇ ಭಾರತೀಯ ಆಟಗಾರ…

ಎರಡು ವಿಕೆಟ್‌ ಪಡೆಯುವುದರೊಂದಿಗೆ ಬುಮ್ರಾ ದಾಖಲೆ ಮುರಿಯುವುದರ ಜತೆಗೆ 50 ವಿಕೆಟ್‌ಗಳನ್ನು ಪೂರ್ತಿಗೊಳಿಸಿದ 5ನೇ ಭಾರತೀಯ ಆಟಗಾರ(Team India Cricket Player) ಎನಿಸಿಕೊಳ್ಳಲಿದ್ದಾರೆ.ಭುವನೇಶ್ವರ್ ಕುಮಾರ್, ಜಸ್​ಪ್ರೀತ್​ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಜೂಲನ್ ಗೋಸ್ವಾಮಿ ಉಳಿದ ನಾಲ್ವರು ಈ ಸಾಧನೆ ಮಾಡಿದ ಭಾರತೀಯ ಆಟಗಾರರಾಗಿದ್ದಾರೆ. ವಿಂಡೀಸ್‌ ವಿರುದ್ಧದ ಟಿ20 ಸರಣಿಯಲ್ಲಿಯೇ ಅರ್ಶ್‌ದೀಪ್‌ಗೆ ಎಲ್ಲ ದಾಖಲೆಯನ್ನು ಬರೆಯುವ ಅವಕಾಶ ಲಭಿಸಿತ್ತು, 9 ವಿಕೆಟ್‌ಗಳ ಅಗತ್ಯವಿತ್ತು. ಆದರೆ ಅಲ್ಲಿ 7 ವಿಕೆಟ್‌ಗಳನ್ನು ಮಾತ್ರ ಕೀಳುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಎರಡು ವಿಕೆಟ್‌ಗಳ ಅಂತರವಿದೆ. ಸರಣಿಯಲ್ಲಿ ಆಡಿದರೆ ಈ ಸಾಧನೆ ಮಾಡುವುದು ಕಷ್ಟದ ಮಾತಲ್ಲ.

ಐಪಿಎಲ್‌ನಲ್ಲಿ 50 ವಿಕೆಟ್‌ ಪೂರ್ತಿ

ಪಂಜಾಬ್‌ ಕಿಂಗ್ಸ್‌ ಪರ ಆಡುತ್ತಿರುವ ಅರ್ಶ್‌ದೀಪ್‌ ಸಿಂಗ್‌ ಅವರು ತಮ್ಮ ಯಾರ್ಕರ್‌ ಮೂಲಕ ಹಲವು ಬ್ಯಾಟರ್‌ಗಳಿಗೆ ಕಾಡಿದ್ದಾರೆ. 51 ಪಂದ್ಯಗಳನ್ನು ಆಡಿ 57 ವಿಕೆಟ್‌ ಪಡೆದಿದ್ದಾರೆ. ಇದರಲ್ಲಿ 5/32 ಅವರ ವೈಯಕ್ತಿ ಬೌಲಿಂಗ್‌ ಸಾಧನೆಯಾಗಿದೆ. ಇದೇ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಸತತ ಎರಡು ಸ್ಟಂಪ್ಸ್‌ಗಳನ್ನು ಮುರಿದಿದ್ದರು.

ಅತಿಯಾದ ನೋ-ಬಾಲ್‌ ಎಸೆತ

ಘಾತಕ ಬೌಲಿಂಗ್‌ ದಾಳಿ ಸಂಘಟಿಸಿದರೂ ಅರ್ಶ್‌ದೀಪ್‌ ಹಲವು ಪಂದ್ಯಗಳಲ್ಲಿ ದುಬಾರಿಯಾಗಿ ಪರಿಣಮಿಸಿದ್ದರು. ಅದರಲ್ಲೂ ಸತತ ನೋಬಾಲ್‌ ಎಸೆಯುತ್ತಿರುವ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಏಷ್ಯಾ ಕಪ್‌ಗೆ ಆಯ್ಕೆಯಾಗಬಹುದು ಇಲ್ಲವಾದಲ್ಲಿ ಅವರ ಸ್ಥಾನಕ್ಕೆ ಉತ್ತಮ ಪ್ರದರ್ಶನ ತೋರುತ್ತಿರುವ ಮುಖೇಶ್‌ ಕುಮಾರ್‌ ಪಾಲಾದರೂ ಅಚ್ಚರಿಯಿಲ್ಲ.

ಇದನ್ನೂ ಓದಿ INDvsWI : ನೋಬಾಲ್‌ಗಳೇ ಮುಳುವಾಯಿತೇ? ವಿಶ್ವ ಕಪ್‌ ತಂಡದಲ್ಲಿ ಅರ್ಶ್‌ದೀಪ್‌ಗೆ ಚಾನ್ಸ್‌ ಸಿಗೋದು ಡೌಟ್‌!

ಏಷ್ಯಾಕಪ್​ ಮತ್ತು ವಿಶ್ವಕಪ್​ಗೆ ಆಯ್ಕೆ ಮಾಡಲು ಬುಮ್ರಾ ಅವರಿಗೆ ಈ ಸರಣಿ ಅಗ್ನಿಪರೀಕ್ಷೆಯಾಗಿದೆ. ಒಂದೊಮ್ಮೆ ಅವರು ಮತ್ತೆ ಗಾಯಕ್ಕೆ ತುತ್ತಾದರೆ ಭಾರತ ತಂಡಕ್ಕೆ ವಿಶ್ವಕಪ್​ನಲ್ಲಿ ಹಿನ್ನಡೆಯಾಗುವುದ ಜತೆಗೆ ಬುಮ್ರಾ ಅವರ ಕ್ರಿಕೆಟ್​ ಬಾಳ್ವೆಯೂ ಅಂತ್ಯ ಕಾಣುವು ಸಾಧ್ಯತೆ ಅಧಿಕವಾಗಿದೆ. ಈ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಸೇರಿ ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಹೊರತು ಪಡಿಸಿ ಉಳಿದ ಎಲ್ಲ ಆಟಗಾರರು ಕೂಡ ಐಪಿಎಲ್​ ಸ್ಟಾರ್​ಗಳಾಗಿದ್ದಾರೆ.

Exit mobile version