ದುಬೈ : ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸುಲಭ ಕ್ಯಾಚ್ ಬಿಟ್ಟ ಭಾರತ ತಂಡದ ಯುವ ಬೌಲರ್ ಅರ್ಶ್‌ದೀಪ್ ಸಿಂಗ್ ಅವರನ್ನು ಖಲಿಸ್ತಾನಿ ಪ್ರೇರಿತ ವ್ಯಕ್ತಿ ಎಂದು ಟ್ರೋಲ್ ಮಾಡಿದವರ ಬಗ್ಗೆ ಅವರ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಈ ರೀತಿಯ ನಿಂದನೆಗಳಿಂದ ಅವರು ಇನ್ನಷ್ಟು ಆತ್ಮ ವಿಶ್ವಾಸ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ದಿನ ಅರ್ಶ್‌ದೀಪ್ ಅವರ ಪೋಷಕರಾದ ದರ್ಶನ್ ಸಿಂಗ್ ಹಾಗೂ ಬಲ್ಜೀತ್ ಸಿಂಗ್ ಸ್ಟೇಡಿಯಮ್‌ನಲ್ಲಿಯೇ ಪಂದ್ಯ ವೀಕ್ಷಿಸಿದ್ದರು. ಪುತ್ರ ಆಡುವುದನ್ನು ಅದೇ ಮೊದಲ ಬಾರಿ ಸ್ಟೇಡಿಯಮ್‌ನಲ್ಲಿ ಕುಳಿತು ವೀಕ್ಷಿಸಿದ್ದರು. ಅರ್ಶದೀಪ್ ಕ್ಯಾಚ್ ಬಿಟ್ಟಿರುವುದು ಅವರಿಗೆ ನಿರಾಸೆ ತಂದಿರುವುದು ಹೌದು. ಆದರೆ, ಟ್ರೋಲಿಗರ ಕುಕೃತ್ಯಕ್ಕೆ ಅವರು ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.
“ಪೋಷಕರಾಗಿ ನಮಗೆ ಟ್ರೋಲಿಗರ ಕೃತ್ಯದ ಬಗ್ಗೆ ಬೇಸರವಿದೆ. ಆತನಿಗಿನ್ನೂ ೨೩ ವರ್ಷ. ನಮಗೆ ಟ್ರೋಲಿಗರ ಬಗ್ಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನಾನು ಟ್ವೀಟ್ ಹಾಗೂ ಮೆಸೇಜ್‌ಗಳನ್ನು ನೋಡಿ ನಗುತ್ತಿದ್ದೇನೆ. ಒಳ್ಳೆಯ ಸಂಗತಿಯನ್ನು ಮಾತ್ರ ತೆಗೆದುಕೊಳ್ಳುತ್ತೇನೆ. ಇಂಥ ಘಟನೆಗಳಿಂದ ಅರ್ಶ್‌ದೀಪ್ ಇನ್ನಷ್ಟು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲಿದ್ದಾರೆ,” ಎಂದು ಅವರು ಹೇಳಿದರು.
ಟೀಮ್ ಇಂಡಿಯಾ ನನಗೆ ಬೆಂಬಲ ನೀಡುತ್ತಿದೆ ಎಂದು ಅರ್ಶ್‌ದೀಪ್ ಹೇಳಿದ್ದಾರೆ ಎಂಬುದಾಗಿಯೂ ಪೋಷಕರು ಚಂಡಿಗಢಕ್ಕೆ ವಾಪಸಾಗುವ ಮೊದಲು ಹೇಳಿದ್ದಾರೆ.
ಇದನ್ನೂ ಓದಿ | IND vs PAK | ಅರ್ಶ್‌ದೀಪ್‌ಗೆ ಖಲಿಸ್ತಾನಿ ಎಂದು ಪಟ್ಟಕಟ್ಟಿದ ಪಾಕಿಸ್ತಾನಿಗಳು, ಭಾರತೀಯರ ವಿರೋಧ