ನವ ದೆಹಲಿ : ಜಾಗತಿಕ ಕ್ರಿಕೆಟ್ ಕ್ಷೇತ್ರಕ್ಕೆ ಸಿಡಿಲಬ್ಬರದ ಬ್ಯಾಟಿಂಗ್‌ನ ಥ್ರಿಲ್ ಏನೆಂಬುದನ್ನು ತೋರಿಸಿಕೊಟ್ಟ ಬ್ಯಾಟರ್ ವೀರೇಂದ್ರ ಸೆಹ್ವಾಗ್. ಅವರ ಪುತ್ರ ಆರ್ಯವೀರ್ ವೃತ್ತಿಪರ ಕ್ರಿಕೆಟ್ ಕ್ಷೇತ್ರಕ್ಕೆ ಧುಮುಕಿದ್ದು, ಅಪ್ಪನಂತೆ ಶ್ರೇಷ್ಠ ಕ್ರಿಕೆಟಿಗನಾಗಲು ಮುಂದಾಗಿದ್ದಾರೆ. ಇದೀಗ ನಡೆಯುತ್ತಿರುವ ೧೬ ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಹೊಡೆಬಡಿ ದಾಂಡಿಗನ ಪುತ್ರ.
ಭಾರತ ಕ್ರಿಕೆಟ್ ತಂಡದಲ್ಲಿ ಡೆಲ್ಲಿಯ ಹಲವಾರು ಪ್ರತಿಭಾವಂತ ಕ್ರಿಕೆಟಿಗರು ಆಡಿದ್ದಾರೆ. ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಆಶೀಶ್ ನೆಹ್ರಾ ಈ ಪಟ್ಟಿಯಲ್ಲಿದ್ದಾರೆ. ಆರ್ಯವೀರ್ ಸೆಹ್ವಾಗ್ ಅವರ ಪಟ್ಟಿಗೆ ಸೇರುವ ಉತ್ಸಾಹದೊಂದಿಗೆ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಆಡಲಿದ್ದಾರೆ.
ಎರಡು ವಾರಗಳ ಹಿಂದೆ ಡೆಲ್ಲಿ ಕ್ರಿಕೆಟ್ ಸಂಸ್ಥೆ ೧೬ ವಯಸ್ಸಿನೊಳಗಿನವರ ಸಂಭಾವ್ಯ ಆಟಗಾರರ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಆರ್ಯವೀರ್ ಸ್ಥಾನ ಪಡೆದುಕೊಂಡಿದ್ದರು. ಆದರೆ, ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಸ್ಥಾನ ಪಡೆದುಕೊಂಡಿರಲಿಲ್ಲ. ಇದೀಗ ಬಿಹಾರ ವಿರುದ್ಧದ ತಂಡದಲ್ಲಿ ಆರ್ಯವೀರ್‌ಗೆ ಸ್ಥಾನ ಲಭಿಸಿದೆ. ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಆರ್ಯವೀರ್ ಸ್ಥಾನ ಪಡೆದಿರುವ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ | Team India | ಸಚಿನ್, ಸೆಹ್ವಾಗ್ ಬೌಲ್ ಮಾಡುತ್ತಿದ್ದರು, ಇವರಿಗೆ ಏನಾಗಿದೆ; ಚೋಪ್ರಾ ಪ್ರಶ್ನಿಸಿದ್ದು ಯಾರಿಗೆ?