Site icon Vistara News

Australian Open: ಗಾಫ್​ಗೆ ಸೋಲಿನ ಆಘಾತವಿಕ್ಕಿ ಫೈನಲ್​ಗೆ ಲಗ್ಗೆಯಿಟ್ಟ ಸಬಲೆಂಕಾ

Aryna Sabalenka

ಮೆಲ್ಬೊರ್ನ್​: ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಅರಿನಾ ಸಬಲೆಂಕಾ(Aryna Sabalenka) ಆಸ್ಟ್ರೇಲಿಯನ್ ಓಪನ್(Australian Open) ಫೈನಲ್‌ ತಲುಪಿದ್ದಾರೆ. ಸೆಮಿಫೈನಲ್​​ ಪಂದ್ಯದಲ್ಲಿ ಯುವ ಆಟಗಾರ್ತಿ ಕೊಕೊ ಗಾಫ್(Coco Gauff) ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದ್ದಾರೆ.

ಕಳೆದ ವರ್ಷದ ಯುಎಸ್ ಓಪನ್ ಫೈನಲ್‌ನಲ್ಲಿ ಅಮೆರಿಕದ ಕೊಕೊ ಗಾಫ್ ಅವರು​ ಬೆಲರೂಸ್‌ನ ಅರಿನಾ ಸಬಲೆಂಕಾಗೆ ಸೋಲಿನ ಆಘಾತವಿಕ್ಕಿ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಅಂದಿನ ಫೈನಲ್​ ಸೋಲಿಗೆ ಈ ಬಾರಿ ಆಸ್ಟ್ರೇಲಿಯಾ ಓಪನ್​ ಟೂರ್ನಿಯಲ್ಲಿ ಸಬಲೆಂಕಾ ಸೇಡು ತೀರಿಸಿಕೊಂಡಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್​ನ ಸೆಮಿ ಫೈನಲ್​ ಕಾದಾಟದಲ್ಲಿ 7-6, 4-6 ನೇರ ಸೆಟ್​ಗಳಿಂದ ಮಣಿಸಿದ್ದಾರೆ.

ಸೇಡಿನ ಪಂದ್ಯದಲ್ಲಿ ಕಣಕ್ಕಿಳಿದ್ದ ಬೆಲರೂಸ್‌ನ ಅರಿನಾ ಸಬಲೆಂಕಾ ಬಲಿಷ್ಠ ಹೊಡೆತಗಳ ಮೂಲಕ ಆರಂಭದಿಂದಲೇ ಗಾಫ್​ ಮೇಲೆ ಸವಾರಿ ನಡೆಸಿದಿದರು. ಎರಡೇ ಸೆಟ್​ನಲ್ಲಿ ಪಂದ್ಯವನ್ನು ಮುಗಿಸಿದರು. ಈ ಹೋರಾಟ ಒಂದು ಗಂಟೆ 46 ನಿಮಿಷದಲ್ಲಿ ಅಂತ್ಯ ಕಂಡಿತ್ತು. ಈ ಟೂರ್ನಿಯ ಹಾಲಿ ಚಾಂಪಿಯನ್​ ಆಗಿರುವ ಸಬಲೆಂಕಾ ಈ ಬಾರಿಯೂ ಫೈನಲ್​ನಲ್ಲಿ ಗೆದ್ದು ಪ್ರಶಸ್ತಿ ಉಳಿಸಿಕೊಳ್ಳವ ವಿಶ್ವಾಸದಲ್ಲಿದ್ದಾರೆ. ಸಬಲೆಂಕಾ ಫೈನಲ್​ ಪಂದ್ಯದಲ್ಲಿ ದಯಾನಾ ಯಾಸ್ಟ್ರೆಮ್ಸ್ಕಾ-ಕಿನ್ವೆನ್ ಝೆಂಗ್ ನಡುವಣ ವಿಜೇತರನ್ನು ಎದುರಿಸಲಿದ್ದಾರೆ.

ಫೈನಲ್​​ ಪ್ರವೇಶಿಸಿದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್‌ ಜೋಡಿ


ಭಾರತದ ಹಿರಿಯ ಟೆನಿಸ್‌ ತಾರೆ ರೋಹನ್ ಬೋಪಣ್ಣ(Rohan Bopanna) ಅವರು ಆಸ್ಟ್ರೇಲಿಯನ್ ಓಪನ್(Australian Open) ಟೆನಿಸ್‌ 2024 ರ ಪುರುಷರ ಡಬಲ್ಸ್​ನಲ್ಲಿ ಫೈನಲ್‌ ತಲುಪಿದ್ದಾರೆ. ಮೂಲಕ ಗ್ರ್ಯಾಂಡ್‌ಸ್ಲಾಮ್​ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಬೋಪಣ್ಣ ಮತ್ತು ಅವರ ಜತೆಗಾರ ಮ್ಯಾಥ್ಯೂ ಎಬ್ಡೆನ್(Matthew Ebden) ಗುರುವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಅಧಿಕಾರಯುತ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದ್ದಾರೆ.

ಇದನ್ನೂ ಓದಿ Australian Open 2024: ಇತಿಹಾಸ ಸೃಷ್ಟಿಸಿದ ರೋಹನ್‌ ಬೋಪಣ್ಣ; ನಂ.1 ಹಿರಿಯ ಟೆನಿಸ್‌ ಆಟಗಾರ

ಗುರುವಾರ ನಡೆದ ಪುರುಷರ ಡಬಲ್ಸ್​ನ ಸೆಮಿಫೈನಲ್​ ಪಂದ್ಯದಲ್ಲಿ ವಿಶ್ವ ನಂ.2 ಇಂಡೋ-ಆಸೀಸ್​ ಜೋಡಿ ರೋಚಕ 3 ಸೆಟ್‌ಗಳ ಸೆಮಿ ಕಾದಾಟದಲ್ಲಿ ಥಾಮಸ್ ಮಚಾಕ್ ಮತ್ತು ಜಾಂಗ್ ಝಿಶೆನ್ ಜೋಡಿಯನ್ನು ಸೋಲಿಸಿದರು. ಬೋಪಣ್ಣ-ಎಬ್ಡೆನ್ ಜೋಡಿಯು ಮೊದಲ ಸೆಟ್ ಅನ್ನು 6-3 ರಿಂದ ಆರಾಮವಾಗಿ ಗೆದ್ದುಕೊಂಡರು. ನಂತರ ಎರಡನೇ ಸೆಟ್​ನಲ್ಲಿ 3-6 ರಲ್ಲಿ ಸೋತರು. ಮೂರನೇ ಸೆಟ್‌ನಲ್ಲಿ ಎರಡೂ ಜೋಡಿಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಟೈ ಬ್ರೇಕರ್‌ಗೆ ಕೊಂಡೊಯ್ದರು. ಬೋಪಣ್ಣ ಮತ್ತು ಎಬ್ಡೆನ್ ಅವರು ಟೈ ಬ್ರೇಕರನ್ನು 10-7 ರಿಂದ ಗೆದ್ದು ಫೈನಲ್ ಟಿಕೆಟ್​ ಪಡೆದರು. ಇದೇ ವೇಳೆ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ ಫೈನಲ್‌ ತಲುಪಿದ ಅತ್ಯಂತ ಹಿರಿಯ ಆಟಗಾರ ಎನ್ನುವ ತಮ್ಮದೇ ದಾಖಲೆಯನ್ನು ಮುರಿದರು.

ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು. 2023ರಲ್ಲಿ ನಡೆದಿದ್ದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಫೈನಲ್​ನಲ್ಲಿ ಸೋತು ರನ್ನರ್​ ಅಪ್​ಗೆ ತೃಪ್ತಿಪಟ್ಟಿದ್ದರು. ಈ ಬಾರಿಯ ಆಟವನ್ನು ನೋಡುವಾಗ ಬೋಪಣ್ಣ-ಎಬ್ಡೆನ್ ಜೋಡಿ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕುವ ನಿರೀಕ್ಷೆಯಲ್ಲಿದ್ದಾರೆ.

ಎರಡನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಮೂರನೇ ಸೆಟ್‌ನಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಂದ ಕೆಲವು ತೀವ್ರ ಪ್ರತಿರೋಧವನ್ನು ಎದುರಿಸಿತು. ಆದರೆ ಅಂತಿಮವಾಗಿ ಸೂಪರ್ ಟೈ ಬ್ರೇಕರ್ಸ್​ನಲ್ಲಿ ಮೇಲುಗೈ ಸಾಧಿಸಿದ ಬೋಪಣ್ಣ-ಎಬ್ಡೆನ್ ಜೋಡಿ 6-3 3-6 7-6 (10-7) ಅಂಕಗಳೊಂದಿಗೆ ಹೆದ್ದು ಫೈನಲ್​ಗೆ ಮುನ್ನಡೆದರು. ಈ ಹೋರಾಟ ಎರಡು ಗಂಟೆ ಎರಡು ನಿಮಿಷದ ವರೆಗೆ ಸಾಗಿತು.

Exit mobile version