ಲಾರ್ಡ್ಸ್: ಸ್ವೀವನ್ ಸ್ಮಿತ್(Steven Smith) ಮತ್ತು ಟ್ರಾವಿಸ್ ಹೆಡ್(Travis Head) ಅವರ ಅರ್ಧಶತಕದ ಆಟದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಆ್ಯಶಸ್ ಟೆಸ್ಟ್ (Ashes 2023)ಸರಣಿಯ ಮೊದಲ ದಿನದಾಟಕ್ಕೆ ಆಸ್ಟ್ರೇಲಿಯಾ(England vs Australia) ತಂಡ ಬೃಹತ್ ಮೊತ್ತ ಕಲೆಹಾಕಿದೆ.
ಐತಿಹಾಸಿಕ ಲಾರ್ಡ್ಸ್ ಸ್ಟೇಡಿಯಂನಲ್ಲಿ ಬುಧವಾರ ಆರಂಭಗೊಂಡ ಈ ಟೆಸ್ಟ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ 5 ವಿಕೆಟ್ನಷ್ಟಕ್ಕೆ 339 ರನ್ ಗಳಿಸಿದೆ. ಆಸೀಸ್ ಪರ ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್(66)(David Warner) ಅರ್ಧಶತಕ ಬಾರಿಸುವು ಮೂಲಕ ಒತ್ತಮ ಆರಂಭ ಒದಗಿಸಿದರು. ಆದರೆ ಇವರ ಜತೆಗಾರ ಹಾಗೂ ಮೊದಲ ಪಂದ್ಯದ ಶತಕ ವೀರ ಉಸ್ಮಾನ್ ಖವಾಜ(Usman Khawaja) 17 ರನ್ಗೆ ಔಟಾಗಿ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಆ ಬಳಿಕ ಕ್ರೀಸ್ಗೆ ಬಂದ ಮಾರ್ನಸ್ ಲುಬುಶೇನ್(Marnus Labuschagne) 47 ರನ್ ಗಳಿಸಿ ಔಟಾದರು. ಈ ಮೂಲಕ ಕೇವಲ ಮೂರು ರನ್ ಅಂತರದಿಂದ ಅರ್ಧಶತಕ ಬಾರಿಸುವ ಅವಕಾಶವೊಂದನ್ನು ಕಳೆದುಕೊಂಡರು.
ಇದನ್ನೂ ಓದಿ AUS VS SA | ಶತಕ ಬಾರಿಸಿ ಡಾನ್ ಬ್ರಾಡ್‌ಮನ್ ದಾಖಲೆ ಮುರಿದ ಸ್ವೀವನ್ ಸ್ಮಿತ್!
ಸ್ಮಿತ್-ಹೆಟ್ ಉತ್ತಮ ಜತೆಯಾಟ
ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ದಾಖಲೆಯ ಜತೆಯಾಟ ನಡೆಸಿದ್ದ ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಇಂಗ್ಲೆಂಡ್ ವಿರುದ್ದವೂ ಉತ್ತಮ ಜತೆಯಾಟ ನಡೆಸಿತು. 4 ವಿಕೆಟ್ಗೆ 118 ರನ್ಗಳ ಅತ್ಯಮೂಲ್ಯ ಕೊಡುಗೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಜೋ ರೂಟ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. 77 ರನ್ ಗಳಿಸಿ ಹೆಟ್ ಆಟ ಮುಗಿಸಿದರು. ಈ ವಿಕೆಟ್ ಪತನದ ಬೆನ್ನಲ್ಲೇ ಕ್ರೀಸ್ಗಿಳಿದ ಕ್ಯಾಮರೂನ್ ಗ್ರೀನ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಒಂದೇ ಓವರ್ನಲ್ಲಿ ರೂಟ್ ಆಸೀಸ್ಗೆ ಅವಳಿ ಆಘಾತವಿಕ್ಕಿದರು. ಸದ್ಯ ಅಲೆಕ್ಸ್ ಕೇರಿ(11*) ಮತ್ತು ಸ್ಟೀವನ್ ಸ್ಮಿತ್(85*)ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಾಖಲೆ ಬರೆದ ಸ್ಮಿತ್
ಅರ್ಧಶತಕ ಬಾರಿಸಿದ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 9 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ದ್ವಿತೀಯ ಆಟಗಾರ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಜತೆಗೆ ಅತಿ ಕಡಿಮೆ ಪಂದ್ಯಗಳನ್ನು ಆಡಿ ಈ ದಾಖಲೆ ಬರೆದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಬರೆದರು. ಇದುವರೆಗೆ ಈ ದಾಖಲೆ ಬ್ರಿಯಾನ್ ಲಾರಾ ಅವರ ಹೆಸರಿನಲ್ಲಿತ್ತು. ಅವರು 101 ಟೆಸ್ಟ್ ಪಂದ್ಯ ಆಡಿ 9 ಸಾವಿರ ರನ್ ಪೂರ್ತಿಗೊಳಿಸಿದ್ದರು. ಆದರೆ ಸ್ಮಿತ್ ಕೇವಲ 99 ಪಂದ್ಯ ಆಡಿ ಈ ದಾಖಲೆಯನ್ನು ಮುರಿದಿದ್ದಾರೆ.
ಅತಿ ಕಡಿಮೆ ಇನಿಂಗ್ಸ್ನಲ್ಲಿ 9 ಸಾವಿರ ರನ್ ಪೂರ್ತಿಗೊಳಿಸಿದ ಸಾಧಕರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ(Kumar Sangakkara) ಅವರಿಗೆ ಅಗ್ರಸ್ಥಾನ. ಅವರು 172 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಮಿತ್ 174 ಇನಿಂಗ್ಸ್ನಲ್ಲಿ 9 ಸಾವಿರ ರನ್ ಬಾರಿಸಿದ್ದಾರೆ. ರಾಹುಲ್ ಡ್ರಾವಿಡ್(Rahul Dravid) ಅವರು 176 ಇನಿಂಗ್ಸ್ನಲ್ಲಿ ಈ ಮೊತ್ತ ಕಲೆಹಾಕಿ ಮೂರನೇ ಸ್ಥಾನ ಪಡೆದಿದ್ದಾರೆ. ಲಾರಾ ಮತ್ತು ರಿಕಿ ಪಾಂಟಿಂಗ್(Ricky Ponting) ಕ್ರಮವಾಗಿ ನಾಲ್ಕು ಮತ್ತು 5ನೇ ಸ್ಥಾನದಲ್ಲಿದ್ದಾರೆ.