Site icon Vistara News

Ashes 2023: ಮೂರನೇ ಟೆಸ್ಟ್​ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್​

England Team

ಲಂಡನ್​: ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಆ್ಯಶಸ್​ ಟೆಸ್ಟ್(Ashes 2023)​ ಸರಣಿಯಲ್ಲಿ ಇಂಗ್ಲೆಂಡ್​ ಈಗಾಗಲೇ 2 ಪಂದ್ಯಗಳನ್ನು ಸೋತಿದೆ. ಸರಣಿ ಜೀವಂತವಿರಿಸಿಕೊಳ್ಳಬೇಕಿದ್ದರೆ ಬೆನ್​ ಸ್ಟೋಕ್ಸ್​ ಪಡೆ ಮುಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಪಂದ್ಯವನ್ನು ಗೆಲ್ಲುವ ಪಣ ತೊಟ್ಟಿರುವ ಇಂಗ್ಲೆಂಡ್​ ಮೂರನೇ ಟೆಸ್ಟ್​ ಪಂದ್ಯಕ್ಕೆ(england cricket team 3rd test) ಕೆಲ ಬದಲಾವಣೆ ಮಾಡಿ ಬಲಿಷ್ಠ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ಮೂರನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ಸ್ಪಿನ್ ಆಲ್‌ರೌಂಡರ್ ಮೊಯಿನ್ ಮತ್ತೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಮೂರನೇ ಟೆಸ್​ಗೆ ಇಂಗ್ಲೆಂಡ್​ ತಂಡ

ಬೆನ್​ ಸ್ಟೋಕ್ಸ್​(ನಾಯಕ), ಜೇಮ್ಸ್​ ಆ್ಯಂಡರ್ಸನ್‌, ಜಾನಿ ಬೇರ್​ಸ್ಟೋ, ಸ್ಟುವರ್ಟ್​ ಬ್ರಾಡ್​, ಹ್ಯಾರಿ ಬ್ರೂಕ್, ಜಾಕ್​ ಕ್ರಾಲಿ, ಬೆನ್​ ಡಂಕೆಟ್​, ಮೊಯಿನ್​ ಅಲಿ, ಓಲಿ ಪೋಪ್​, ಓಲಿ ರಾಬಿನ್ಸನ್​, ಜೋ ರೂಟ್​, ಜೋಶ್​ ಟಾಂಗ್​, ಡ್ಯಾನ್​ ಲಾರೆನ್ಸ್​, ಕ್ರಿಸ್​ ವೋಕ್ಸ್​, ಮಾರ್ಕ್​ ವುಡ್​.

ಎರಡನೇ ಟೆಸ್ಟ್​ನಲ್ಲಿ ಸೋಲು ಕಂಡ ಇಂಗ್ಲೆಂಡ್​

ಆ್ಯಶಸ್​ ಸರಣಿಯ (Ashes 2023) ಎರಡನೇ ಪಂದ್ಯದಲ್ಲೂ ಆತಿಥೇಯ ಇಂಗ್ಲೆಂಡ್ ತಂಡ 43 ರನ್​ಗಳ ಸೋಲು ಕಂಡಿದೆ. ಸರಣಿಗೆ ಗೆಲ್ಲುವುದಕ್ಕಾಗಿ ಇಂಗ್ಲೆಂಡ್​ ತಂಡ ಮಾಡಿದ್ದ ಬಜ್​ಬಾಲ್​ ತಂತ್ರ ಎರಡನೇ ಬಾರಿಯೂ ಕೈಕೊಟ್ಟಿತು. ಬೆನ್​ಸ್ಟೋಕ್ಸ್ ಅವರ ವಿರೋಚಿತ ಶತಕದ (155 ರನ್​) ನಡುವೆಯೂ ಉಳಿದ ಆಟಗಾರರ ನೆರವು ಸಿಗದ ಕಾರಣ ತಂಡ ಸೋಲಿನ ಸುಳಿಗೆ ಸಿಲುಕಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 2-0 ಮುನ್ನಡೆಯನ್ನು ಪಡೆದುಕೊಂಡಿದೆ. ಎರಡನೇ ಪಂದ್ಯದ ಕೊನೇ ದಿನವಾದ ಭಾನುವಾರ ಇಂಗ್ಲೆಂಡ್ ಬಳಗದ ಗೆಲುವಿಗೆ 257 ರನ್​ಗಳ ಅವಶ್ಯಕತೆ ಇತ್ತು. ಆದರೆ, ಗುರಿ ಮೀರಲು ಇಂಗ್ಲೆಂಡ್​ ತಂಡಕ್ಕೆ ಸಾಧ್ಯವಾಗಲಿಲ್ಲ.

ಇದನ್ನೂ ಓದಿ Viral Video: ನೆಲಕ್ಕೆ ಬಿದ್ದ ಚ್ಯೂಯಿಂಗ್​ ಗಮ್ ಹೆಕ್ಕಿ ತಿಂದ ಆಸೀಸ್​ ಆಟಗಾರ; ವಿಡಿಯೊ ವೈರಲ್​

ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಎರಡನೇ ಇನಿಂಗ್ಸ್​ನಲ್ಲಿ 371 ರನ್​ಗಳ ಅಗತ್ಯವಿತ್ತು. ಆದರೆ, 81 ಓವರ್​ಗಳನ್ನು ಎದುರಿಸಿದ ಆಂಗ್ಲರ ಪಡೆ 327 ರನ್​ಗೆ ಆಲ್ಔಟ್​ ಅಯಿತು. ಬೆನ್​ಸ್ಟೋಕ್ಸ್ ಹಾಗೂ ಬೆನ್​ ಡೆಕೆಟ್​ (83) ಉತ್ತಮ ಜತೆಯಾಟ ನೀಡುವ ಮೂಲಕ ಗೆಲುವಿನ ಅವಕಾಶ ಸೃಷ್ಟಿಸಿದ್ದರೂ ಉಳಿದ ಆಟಗಾರರಿಗೆ ಅಗತ್ಯ ನೆರವು ದೊರೆಯಲಿಲ್ಲ. ಹೀಗಾಗಿ ಮತ್ತೊಂದು ಪರಾಭವಕ್ಕೆ ಒಳಗಾಗಬೇಕಾಯಿತು.

ಬರ್ಮಿಂಗ್ಹಮ್​ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿಯೂ ಇಂಗ್ಲೆಂಡ್​ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತ್ತು. ಅತ್ಯಂತ ವಿರೋಚಿತವಾಗಿ ನಡೆದಿದ್ದ ಆ ಹಣಾಹಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 2 ವಿಕೆಟ್​ ಗೆಲುವು ಸಾಧಿಸಿತ್ತು.

Exit mobile version