Site icon Vistara News

Ashes 2023: ಆ್ಯಶಸ್​​ ಟೆಸ್ಟ್​ ಸರಣಿಯಿಂದ ಹೊರಬಿದ್ದ ನಥಾನ್​ ಲಿಯೋನ್​

nathan lyon walk on stick

ಲಂಡನ್​: ಸತತ ನೂರನೇ ಟೆಸ್ಟ್​ ಪಂದ್ಯದಲ್ಲಿ ಆಡಲಿಳಿದಿದ್ದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್​ ನಥಾನ್​ ಲಿಯೋನ್​ (nathan lyon)ಅವರು ಮುಂದಿನ ಆ್ಯಶಸ್​ ಟೆಸ್ಟ್(Ashes 2023) ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅವರು ಟೆಸ್ಟ್​ ಸರಣಿಯಿಂದ ಹೊರ ಬಿದ್ದ ಸುದ್ದಿಯನ್ನು ಕ್ರಿಕೆಟ್​ ಆಸ್ಟ್ರೇಲಿಯಾ ತನ್ನ ಅಧಿಕೃತ ಟ್ವಿಟರ್​ನಲ್ಲಿ ಪ್ರಕಟಿಸಿದೆ. ಶೀಘ್ರದಲ್ಲೇ ಗುಣಮುಖರಾಗಿ ತಂಡ ಸೇರಿಕೊಳ್ಳುವಂತಾಗಲಿ ಎಂದು ಹಾರೈಸಿದೆ.

ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ ಕಣಕ್ಕಿಳಿಯುವ ಮೂಲಕ ನಥಾನ್​ ಲಿಯೋನ್​ ಸತತ ನೂರನೇ ಟೆಸ್ಟ್​ ಪಂದ್ಯ ಆಡಿದ ವಿಶ್ವದ ಮೊದಲ ಬೌಲರ್​ ಎಂಬ ನೂತನ ದಾಖಲೆ ಬರೆದಿದ್ದರು. ಆದರೆ ಪಂದ್ಯ ಆರಂಭಗೊಂಡ ಮೊದಲ ದಿನವೇ ಅವರು ಕಾಲಿನ ಗಾಯಕ್ಕೆ ತುತ್ತಾಗಿದ್ದರು.

ಕ್ಯಾಚ್​ ಒಂದನ್ನು ಪಡೆಯುವ ವೇಳೆ ಲಿಯೋನ್​ ಕಾಲಿಗೆ ಗಾಯಮಾಡಿಕೊಂಡಿದ್ದರು. ಕಾಲಿನ ಹಿಮ್ಮಡಿಯ ಮೇಲಿನ ಮಾಂಸಖಂಡಕ್ಕೆ ಒತ್ತಡ ಬಿದ್ದು ತೀವ್ರ ನೋವಿಗೊಳದ ಅವರು ಮೈದಾನದಲ್ಲೇ ಕುಸಿದು ಬಿದ್ದದ್ದರು. ಬಳಿಕ ಊರುಗೋಲಿನ ಸಹಾಯದಿಂದ ಅವರು ಮೈದಾನದಿಂದ ಹೊರನಡೆದಿದ್ದರು. ಬೌಲಿಂಗ್​ ನಡೆಸದ ಅವರು ದ್ವಿತೀಯ ಇನಿಂಗ್ಸ್​ನಲ್ಲಿ ನೋವಿನ ಮಧ್ಯೆಯೂ ಅಚ್ಚರಿ ಎಂಬಂತೆ ತಂಡದ ಗೆಲುವಿಗಾಗಿ ಪ್ಯಾಡ್​ ಕಟ್ಟಿ ಬ್ಯಾಟಿಂಗ್​ ನಡೆಸಿದ್ದರು. ಕುಂಟುತ್ತಲೇ ಬ್ಯಾಟಿಂಗ್​ ನಡೆಸಿದ ವಿಡಿಯೊ ಎಲ್ಲಡೆ ವೈರಲ್​ ಆಗಿತ್ತು. ಜತೆಗೆ ಅವರ ಈ ನಡೆಗೆ ಎಲ್ಲಡೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.

ಲಿಯೋನ್​ ಅವರು ತಂಡದಿಂದ ಹೊರಬಿದ್ದ ಕಾರಣ ಅವರ ಬದಲಿಗೆ ಟಾಡ್ ಮರ್ಫಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಒಂದೊಮ್ಮೆ ಅವರಿಗೆ ಆಡುವ ಅವಕಾಶ ಸಿಕ್ಕರೆ ಇದು ಅವರ ಪದಾರ್ಪಣ ಆ್ಯಶಸ್​ ಪಂದ್ಯವಾಗಲಿದೆ. 22 ವರ್ಷದ ಆಫ್-ಸ್ಪಿನ್ನರ್ ಈ ವರ್ಷದ ಆರಂಭದಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಹಮನಾರ್ಹ ಪ್ರದರ್ಶನ ತೋರಿದ್ದರು. ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿಯೇ ಪ್ರಮುಖ ಏಳು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಸದ್ಯ ಆಸೀಸ್​ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವ ಮರ್ಫಿ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್‌ ತಂಡ

ಪ್ಯಾಟ್‌ ಕಮಿನ್ಸ್‌ (ನಾಯಕ), ಸ್ಕಾಟ್‌ ಬೊಲೆಂಡ್‌, ಅಲೆಕ್ಸ್‌ ಕೇರಿ, ಕ್ಯಾಮರೂನ್​ ಗ್ರೀನ್‌, ಮಾರ್ಕಸ್‌ ಹ್ಯಾರಿಸ್‌, ಜೋಶ್​ ಹ್ಯಾಝಲ್​ವುಡ್​, ಟ್ರಾವಿಸ್‌ ಹೆಡ್‌, ಜೋಶ್​ ಇಂಗ್ಲಿಸ್‌, ಉಸ್ಮಾನ್‌ ಖವಾಜ, ಮಾರ್ನಸ್‌ ಲಾಬುಶೇನ್‌, ಮಿಚೆಲ್‌ ಮಾರ್ಷ್‌, ಟಾಡ್‌ ಮರ್ಫಿ, ಮಿಚೆಲ್ ನಾಸೀರ್​,​ ಜಿಮ್ಮಿ ಪೀರ್ಸನ್, ಸ್ಟೀವನ್ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಡೇವಿಡ್‌ ವಾರ್ನರ್‌.

ಇದನ್ನೂ ಓದಿ Nathan Lyon: ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದ ನಥಾನ್​ ಲಿಯೋನ್

ಮೂರನೇ ಟೆಸ್ಟ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್​

ಲಂಡನ್​: ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಆ್ಯಶಸ್​ ಟೆಸ್ಟ್(Ashes 2023)​ ಸರಣಿಯಲ್ಲಿ ಇಂಗ್ಲೆಂಡ್​ ಈಗಾಗಲೇ 2 ಪಂದ್ಯಗಳನ್ನು ಸೋತಿದೆ. ಸರಣಿ ಜೀವಂತವಿರಿಸಿಕೊಳ್ಳಬೇಕಿದ್ದರೆ ಬೆನ್​ ಸ್ಟೋಕ್ಸ್​ ಪಡೆ ಮುಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಪಂದ್ಯವನ್ನು ಗೆಲ್ಲುವ ಪಣ ತೊಟ್ಟಿರುವ ಇಂಗ್ಲೆಂಡ್​ ಮೂರನೇ ಟೆಸ್ಟ್​ ಪಂದ್ಯಕ್ಕೆ(england cricket team 3rd test) ಕೆಲ ಬದಲಾವಣೆ ಮಾಡಿ ಬಲಿಷ್ಠ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ಮೂರನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ಸ್ಪಿನ್ ಆಲ್‌ರೌಂಡರ್ ಮೊಯಿನ್ ಮತ್ತೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಮೂರನೇ ಟೆಸ್​ಗೆ ಇಂಗ್ಲೆಂಡ್​ ತಂಡ

ಬೆನ್​ ಸ್ಟೋಕ್ಸ್​(ನಾಯಕ), ಜೇಮ್ಸ್​ ಆ್ಯಂಡರ್ಸನ್‌, ಜಾನಿ ಬೇರ್​ಸ್ಟೋ, ಸ್ಟುವರ್ಟ್​ ಬ್ರಾಡ್​, ಹ್ಯಾರಿ ಬ್ರೂಕ್, ಜಾಕ್​ ಕ್ರಾಲಿ, ಬೆನ್​ ಡಂಕೆಟ್​, ಮೊಯಿನ್​ ಅಲಿ, ಓಲಿ ಪೋಪ್​, ಓಲಿ ರಾಬಿನ್ಸನ್​, ಜೋ ರೂಟ್​, ಜೋಶ್​ ಟಾಂಗ್​, ಡ್ಯಾನ್​ ಲಾರೆನ್ಸ್​, ಕ್ರಿಸ್​ ವೋಕ್ಸ್​, ಮಾರ್ಕ್​ ವುಡ್​.

Exit mobile version