Site icon Vistara News

Ashish Sakharkar: ‘ಮಿಸ್ಟರ್ ಇಂಡಿಯಾ’ ಬಾಡಿ ಬಿಲ್ಡಿರ್​ ಆಶಿಶ್ ನಿಧನ

Four times 'Mr. India's Ashish Sakharkar

ಮುಂಬಯಿ: ನಾಲ್ಕು ಬಾರಿಯ ‘ಮಿಸ್ಟರ್ ಇಂಡಿಯಾ'(4-time ‘Mr India’ bodybuilding champion) ದೇಹದಾರ್ಢ್ಯ ಪ್ರಶಸ್ತಿ ವಿಜೇತ ಆಶಿಶ್ ಸಖರ್ಕರ್(Ashish Sakharkar) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಆಶಿಶ್ ಅವರಿಗೆ 43 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಂದು ಕುಟುಂಬ ಮೂಲಗಳು ತಿಳಿಸಿವೆ.

80 ಕೆ.ಜಿ. ವಿಭಾಗದಲ್ಲಿ ಬಾಡಿ ಬಿಲ್ಡರ್ ಆಗಿದ್ದ ಆಶಿಶ್ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಪ್ರತಿಷ್ಠತ ‘ಶಿವ ಛತ್ರಪತಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು. ಆಶಿಶ್ ಸಖರ್ಕರ್ ನಿಧನಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ, ದೇವೇಂದ್ರ ಫಡ್ನವೀಸ್ ಸೇರಿ ಅನೇಕಕರು ಸಂತಾಪ ಸೂಚಿಸಿದ್ದಾರೆ.

ಅವರು 4 ಬಾರಿ ಮಿಸ್ಟರ್ ಇಂಡಿಯಾ, 4 ಬಾರಿ ಫೆಡರೇಶನ್ ಕಪ್, ಮಿಸ್ಟರ್ ಯೂನಿವರ್ಸ್ ಮತ್ತು ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಇದನ್ನೂ ಓದಿ Heart Attack: ಟ್ಯೂಷನ್​ಗೆ ಹೊರಟಿದ್ದ ಮಗಳ ಕಣ್ಣೆದುರೇ ಹೃದಯಾಘಾತ, ರಸ್ತೆ ಬದಿಯಲ್ಲೇ ಹೋಯ್ತು ಅಪ್ಪನ ಪ್ರಾಣ

ಬ್ಯಾಡ್ಮಿಂಟನ್‌ ಆಡುತ್ತಿದ್ದವನ ಬಾಳಲ್ಲಿ ಆಟವಾಡಿದ ವಿಧಿ

ಒಂದು ತಿಂಗಳ ಹಿಂದೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ಬ್ಯಾಡ್ಮಿಂಟನ್‌ ಆಡುತ್ತಿರುವಾಗಲೇ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸೆಕ್ಟರ್‌ 21 ಎನಲ್ಲಿರುವ ನೊಯ್ಡಾ ಸ್ಟೇಡಿಯಂನಲ್ಲಿ 52 ವರ್ಷದ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್‌ ಆಡುತ್ತಿದ್ದ ವೇಳೆ ಕುಸಿದುಬಿದ್ದು ಸಾವನ್ನಪಿದ್ದರು.

Exit mobile version