ನವ ದೆಹಲಿ: ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvaraj Singh) ಅವರ ದಾಖಲೆಯನ್ನು ರೈಲ್ವೇಸ್ ತಂಡದ ಅಶುತೋಷ್ ಶರ್ಮಾ ಮುರಿದಿದ್ದಾರೆ. ರಾಂಚಿಯಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಗ್ರೂಪ್ ಸಿ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರರ್ ಈ ಸಾಧನೆ ಮಾಡಿದ್ದಾರೆ. ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ.
ಕೇವಲ ಐದು ಓವರ್ಗಳು ಬಾಕಿ ಇರುವಾಗ ರೈಲ್ವೇಸ್ ತಂಡದ ಸ್ಕೋರ್ 4 ವಿಕೆಟ್ಗೆ 131 ಆಗಿತ್ತು . ಈ ವೇಳೆ ಅಶುತೋಷ್ ಬ್ಯಾಟಿಂಗ್ಗಾಗಿ ಕ್ರೀಸ್ಗೆ ಬಂದಿದ್ದರು. ನಂತರ ಅವರು 12 ಎಸೆತಗಳಲ್ಲಿ 53 ರನ್ ಗಳಿಸಿದರು, ಇದರಲ್ಲಿ ಒಂದು ಬೌಂಡರಿ ಮತ್ತು ಎಂಟು ಸಿಕ್ಸರ್ ಗಳು ಸೇರಿಕೊಂಡಿವೆ. ತಮ್ಮ ದಾಖಲೆಯ ಅರ್ಧಶತಕ ಬಾರಿಸಿದ ನಂತರ, ರೈಲ್ವೇಸ್ ಬ್ಯಾಟರ್ ನಂತರದ ಎಸೆತದಲ್ಲಿ ಔಟ್ ಆದರು. 441.66 ರ ಅದ್ಭುತ ಸ್ಟ್ರೈಕ್ ರೇಟ್ನೊಂದಿಗೆ ಮರಳಿದರು. ಅವರ ನಾಲ್ಕು ಸಿಕ್ಸರ್ ಗಳು ಕವರ್ ಮತ್ತು ಲಾಂಗ್ ಆಫ್ ಪ್ರದೇಶದ ಮೇಲೆ ಹಾರಿದರೆ, ಎರಡು ಲಾಂಗ್ ಆನ್ ಕಡೆಗೆ ಹೋಯಿತು. ಇನ್ನೂ ಎರಡು ಸ್ಕ್ವೇರ್ ಲಗ್ ಸೈಡ್ ಬೌಂಡರಿಗೆ ಹೋದವು. ವಿಶೇಷವೆಂದರೆ, ಅವರ ತಂಡವು ಅಂತಿಮ ಐದು ಓವರ್ಗಳಲ್ಲಿ 115 ರನ್ ಗಳಿಸಿತು. ಅಲ್ಲದೆ, 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತು.
25ರ ಹರೆಯದ ಶರ್ಮಾ ರೈಲ್ವೇಸ್ ಪರ 10ನೇ ಹಾಗೂ 2ನೇ ಟ್ವೆಂಟಿ-20 ಪಂದ್ಯವನ್ನಾಡಿದ್ದರು. ಅವರು ಜನವರಿ 12, 2018 ರಂದು 2017-18 ವಲಯ ಟಿ 20 ಲೀಗ್ನಲ್ಲಿ ಮಧ್ಯಪ್ರದೇಶಕ್ಕಾಗಿ ಟಿ20 ಗೆ ಪಾದಾರ್ಪಣೆ ಮಾಡಿದ್ದರು. ಕೊನೆಯದಾಗಿ 2019ರಲ್ಲಿ ಆಡಿದ್ದರು. ಏತನ್ಮಧ್ಯೆ, ಅವರು 2019ರಲ್ಲಿ ಮಧ್ಯಪ್ರದೇಶ ಪರ ಕೇವಲ 50 ಓವರ್ಗಳ ಪಂದ್ಯವನ್ನು ಆಡಿದ್ದಾರೆ. ಆದರೆ ಇನ್ನೂ ಪ್ರಥಮ ದರ್ಜೆ ಪಂದ್ಯದಲ್ಲಿ ಆಡಿಲ್ಲ.
ಇದನ್ನೂ ಓದಿ : IOC Session: ಮುಂಬೈನಲ್ಲಿ ನಡೆಯಲಿದೆ ಐತಿಹಾಸಿಕ ಒಲಿಂಪಿಕ್ಸ್ ಅಧಿವೇಶನ; ಏನಿದರ ವಿಶೇಷ?
ಕಳೆದ ತಿಂಗಳು ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳದ ದೀಪೇಂದ್ರ ಸಿಂಗ್ ಐರಿ ಅವರ ದಾಖಲೆಯನ್ನು ಮುರಿಯುವ ಮೊದಲು ಯುವರಾಜ್ ಒಟ್ಟಾರೆ 16 ವರ್ಷಗಳ ಕಾಲ ಟಿ 20 ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಹೊಂದಿದ್ದರು. 2007ರಲ್ಲಿ ಪುರುಷರ ಟಿ 20 ವಿಶ್ವಕಪ್ನಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. . ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಅವರ ಓವರ್ನ ಸತತ ಆರು ಸಿಕ್ಸರ್ಗಳನ್ನು ಬಾರಿಸಿದ್ದರು.