ಮುಂಬಯಿ: ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಬುಧವಾರ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವುದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಸತತ ಅಭ್ಯಾಸ ನಡೆಸಿದ್ದಾರೆ. ಪಂದ್ಯ ಆಯೋಜನೆಗೊಂಡಿರುವ ಚಿತ್ತಗಾಂಗ್ ಪಿಚ್ನಲ್ಲಿ ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ನೆರವು ಲಭಿಸಲಿದೆ. ಹೀಗಾಗಿ ಭಾರತ ತಂಡದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ನೂತನ ದಾಖಲೆ ಸೃಷ್ಟಿ ಮಾಡುವ ಅವಕಾಶ ಲಭಿಸಿದೆ.
ಬಾಂಗ್ಲಾದೇಶ ವಿರುದ್ಧದ ಹಣಾಹಣಿಯಲ್ಲಿ ಅವರು ಎಂಟು ವಿಕೆಟ್ ಕಬಳಿಸಿದರೆ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್ನಲ್ಲಿ 450 ವಿಕೆಟ್ಗಳ ಸರದಾರ ಎನಿಸಿಕೊಳ್ಳಲಿದ್ದಾರೆ. ಅವರ ಖಾತೆಯಲ್ಲಿ ಈಗ 442 ವಿಕೆಟ್ಗಳು ಇವೆ. ಈ ಮೂಲಕ ಅವರು 450 ಟೆಸ್ಟ್ ವಿಕೆಟ್ಗಳ ಗಡಿ ದಾಟಿದ ಭಾರತದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. 619 ವಿಕೆಟ್ಗಳನ್ನು ಪಡೆದಿರುವ ಕನ್ನಡಿಗ ಅನಿಲ್ ಕುಂಬ್ಳೆ ಅವರು ಈ ಸಾಲಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಏಕ ದಿನ ಸರಣಿಯಲ್ಲಿ ಸೋಲು ಕಂಡಿರುವ ಭಾರತ ತಂಡಕ್ಕೆ ಟೆಸ್ಟ್ ಸರಣಿ ಪ್ರಮುಖವಾಗಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಭಾಗವಾಗಿರುವ ಹಿನ್ನೆಲೆಯಲ್ಲಿ ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡರೆ ಫೈನಲ್ಗೇರುವ ಅವಕಾಶ ಸಿಗಲಿದೆ.
ಇದನ್ನೂ ಓದಿ | Team India | ಆರ್ ಅಶ್ವಿನ್ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾರ್ಮಿಕ ಹೇಳಿಕೆ ನೀಡಿದ ಲೆಜೆಂಡ್ ಕಪಿಲ್ ದೇವ್