ನಾಗ್ಪುರ: ರವೀಂದ್ರ ಜಡೇಜಾ ಅವರಂಥ ಸ್ಪಿನ್ ಜತೆಗಾರನನ್ನು ಪಡೆದಿರುವುದಕ್ಕೆ ಧನ್ಯವಾದಗಳು. ಅವರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಭಾರತ ತಂಡದ ಸ್ಪಿನ್ ಬೌಲಿಂಗ್ ವಿಭಾಗಕ್ಕೆ ಶಕ್ತಿ ಬಂದಿದೆ ಹಾಗೂ ನನಗೂ ಸಹಾಯವಾಗಿದೆ ಎಂದು ಭಾರತ ತಂಡದ ಹಿರಿಯ ಸ್ಪಿನ್ ಬೌಲರ್ ಆರ್. ಅಶ್ವಿನ್ (R Ashwin) ಹೇಳಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಜಯಸಿದ ಸಂತೋಷದಲ್ಲಿದ್ದ ಅವರು ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡುತ್ತಾ ಅವರು ಈ ಮಾತು ಹೇಳಿದ್ದಾರೆ.
ಭಾರತ ತಂಡ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 132 ರನ್ಗಳ ವಿಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿದ್ದರೆ ಎರಡನೇ ಇನಿಂಗ್ಸ್ನಲ್ಲಿ ಆರ್ ಅಶ್ವಿನ್ 5 ವಿಕೆಟ್ ಪಡೆದಿದ್ದರು. ಮೊದಲ ಇನಿಂಗ್ನಲ್ಲಿ ಅಶ್ವಿನ್ ಮೂರು ಹಾಗೂ ಎರಡನೇ ಇನಿಂಗ್ಸ್ನಲ್ಲಿ ಜಡೇಜಾ 2 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಪ್ರವಾಸಿ ತಂಡದ ಒಟ್ಟು 20 ವಿಕೆಟ್ಗಳಲ್ಲೀ ಈ ಇಬ್ಬರು ಸ್ಪಿನ್ನರ್ಗಳು 15 ವಿಕೆಟ್ ಕಬಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಶ್ವಿನ್ ಅವರು ಸ್ಪಿನ್ ವಿಭಾಗಕ್ಕೆ ಅತ್ಯುತ್ತಮ ಜತೆಗಾರ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ : Border- Gavaskar Trophy : ನಮ್ಮ ತಂಡಕ್ಕೆ ಆರ್ ಅಶ್ವಿನ್ ಭಯ ಎಂದ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್
ಜಡೇಜಾ ಅವರು ಅತ್ಯುತ್ತಮ ವಿಕೆಟ್ಗಳನ್ನು ಕಬಳಿಸಿದ್ದಾರೆ. ಅವರು ಮೊದಲ ಇನಿಂಗ್ಸ್ನಲ್ಲಿ ಉತ್ತಮ ಸಾಥ್ ಕೊಟ್ಟಿದ್ದಾರೆ. ಅದೇ ರೀತಿ ಎರಡನೇ ಇನಿಂಗ್ಸ್ನಲ್ಲೂ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದ್ದಾರೆ. ನಮ್ಮ ತಂಡದ ಬ್ಯಾಟಿಂಗ್ ವಿಭಾಗಕ್ಕೂ ಗೆಲುವಿನ ಶ್ರೇಯಸ್ಸು ಸಲ್ಲಬೇಕು. ಹೆಚ್ಚು ಹೊತ್ತು ಆಸ್ಟ್ರೇಲಿಯಾ ತಂಡದ ಫೀಲ್ಡಿಂಗ್ ಮಾಡುವಂತೆ ಮಾಡಿರುವ ಅವರು ಪಿಚ್ ತಿರುವು ಪಡೆಯುತ್ತಿದ್ದಂತೆ ಅವರಿಗೆ ಬ್ಯಾಟಿಂಗ್ ಸಿಗುವಂತೆ ಮಾಡಿದರು ಎಂದು ಅಶ್ವಿನ್ ಹೇಳಿದ್ದಾರೆ.