Site icon Vistara News

RAJ CUP- 6 : ಜೆರ್ಸಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

Raj cup 2023

ಬೆಂಗಳೂರು: ಡಾ.ರಾಜ್ ಕಪ್ ಸೀಸನ್ 6ಗೆ (RAJ CUP- 6) ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ಚಂದನವನದ ತಾರೆಯರು ತಯಾರಿ ನಡೆಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಇತ್ತೀಚೆಗೆಷ್ಟೇ ಬೆಂಗಳೂರಿನ ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ಜರ್ಸಿ ಬಿಡುಗಡೆ ಮಾಡಲಾಯಿತು. ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಆಯೋಜಕರಾದ ರಾಜೇಶ್ ಬ್ರಹ್ಮಾವರ, ರಾಜ್ ಕಪ್ ಆರನೇ ಸೀಸನ್ ವಿದೇಶದಲ್ಲಿ ಮಾಡ್ತಾ ಮಾಡಲಾಗುತ್ತಿದೆ . ಉತ್ತಮ ಕ್ಯಾಪ್ಟನ್ಸ್, ಓನರ್ ಹಾಗೂ ಆಟಗಾರರು ಸಿಕ್ಕಿರುವುದರಿಂದ ಎಲ್ಲವೂ ಸುಲಭವಾಗಿದೆ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮುಂದಿನ ವರ್ಷ ಎಷ್ಟು ದೇಶಗಳಲ್ಲಿ ಮಾಡುತ್ತೇನೆ ಗೊತ್ತಿಲ್ಲ. ದುಬೈನಲ್ಲಿ ಲೈವ್ ಸಿಗಲ್ಲ ಎಂಬ ಅಭಿಪ್ರಾಯವಿತ್ತು. ಕೊನೆಗೂ ಅನುಮತಿ ಪಡೆದುಕೊಂಡು ಬಂದಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : Ravindra Jadeja : ಪತ್ನಿ ರಿವಾಬಾಗೆ ಕತ್ತಿ ವರಸೆ ಕಲಿಸಿದ ರವೀಂದ್ರ ಜಡೇಜಾ

ಈ ಬಾರಿಯ ಡಾ.ರಾಜ್ ಕಪ್ ನವೆಂಬರ್ 28 ರಿಂದ ಡಿಸೆಂಬರ್ 10ರ ವರೆಗೆ ನಡೆಯಲಿದೆ. ವಿಶ್ವದ ಹಲವು ಭಾಗಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ. ನವೆಂಬರ್ 28 ಮತ್ತು 29ರಂದು ಶ್ರೀಲಂಕಾ, ಡಿಸೆಂಬರ್ 1 ಮತ್ತು 2ರಂದು ಮಲೇಷಿಯಾ, ಡಿಸೆಂಬರ್ 3 ಮತ್ತು 4ರಂದು ಸಿಂಗಾಪುರ, ಡಿಸೆಂಬರ್ 7 ಮತ್ತು 8ರಂದು ಮಸ್ಕತ್ ನಲ್ಲಿ ಪಂದ್ಯಗಳು ನಡೆಯಲಿವೆ. ರಾಜ್ ಕಪ್ ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಲಿವೆ.

12 ತಂಡಗಳು ಭಾಗಿ

ಈ ಬಾರಿಯ ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಪಂದ್ಯಗಳು ನಡೆಯಲಿವೆ.

  1. ಸಮೃದ್ದಿ ಫೈಟರ್ಸ್ ತಂಡ: ಮಾಲೀಕರು- ಮಂಜುನಾಥ್
  2. ಮ್ಯಾಕ್ಸ್ ಲೈನ್ಸ್ ತಂಡ: ಮಾಲೀಕರು- ದಯಾನಂದ್
  3. ರಾಮನಗರ ರಾಕರ್ಸ್ ತಂಡ: ಮಾಲೀಕರು- ಮಹೇಶ್ ಗೌಡ
  4. ELV ಲಯನ್ ಕಿಂಗ್ಸ್ ತಂಡ: ಮಾಲೀಕರು- ಪುರುಷೋತ್ತಮ್ ಭಾಸ್ಕರ್
  5. AVR ಟಸ್ಕರ್ಸ್ ತಂಡ : ಮಾಲೀಕರು- ಅರವಿಂದ್ ರೆಡ್ಡಿ
  6. KKR ಕಿಂಗ್ಸ್ ತಂಡ: ಮಾಲೀಕರು- ಲಕ್ಷ್ಮೀ ಕಾಂತ್ ರೆಡ್ಡಿ
  7. Rabit ರೇಸರ್ಸ್ ತಂಡ: ಮಾಲೀಕರು: ಅರು ಗೌಡ
  8. ಮಯೂರ ರಾಯಲ್ಸ್ ತಂಡ: ಮಾಲೀಕರು- ಸೆಂಥಿಲ್
  9. ರಾಯಲ್ ಕಿಂಗ್ಸ್ ತಂಡ: ಮಾಲೀಕರು- ಶ್ರೀರಾಮ್ ಮತ್ತು ಮುಖೇಶ್
  10. ಕ್ರಿಕೆಟ್ ನಕ್ಷತ್ರ ತಂಡ: ಮಾಲೀಕರು- ನಕ್ಷತ್ರ ಮಂಜು
  11. ಅಶು ಸೂರ್ಯ ಸೂಪರ್ ಸ್ಟಾರ್ ತಂಡ: ಮಾಲೀಕರು- ರಂಜಿತ್ ಪಯಾಜ್ ಖಾನ್
  12. ರುಚಿರಾ ರೇಂಜರ್ಸ್ ತಂಡ: ಮಾಲೀಕರು- ಓನರ್ ರಾಮ್

ರಾಜ್ ಕಪ್ ಸೀಸನ್ 6ಕ್ಕೆ ಸಿನಿತಾರೆಯರ ಬೆಂಬಲ

ರಾಜ್ ಕಪ್ ಸೀಸನ್ 6ರಲ್ಲಿ ನಟರಾದ ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಡಾ. ರಾಜ್ ಕಪ್ ಗಾಗಿ ಆನಂದ್ ಆಡಿಯೋ ಹೊಸ ಹೆಜ್ಜೆ ಇಟ್ಟಿದ್ದು, ಈ ಪಂದ್ಯಾವಳಿಗಾಗಿ ಸ್ಪೋರ್ಟ್ ಯೂಟ್ಯೂಬ್ ಪ್ರಾರಂಭ ಮಾಡ್ತಿದೆ. ಲೈವ್ ಮ್ಯಾಚ್‌ಗಳನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.

Exit mobile version