Asia Cup 2022 : ಭಾರತದ ಹಾಕಿ ಪ್ರಿಯರಿಗೆ ಬೇಸರದ ಸಂಗತಿ. ಭಾರತದ ಹಾಕಿ ತಂಡ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಸೋತಿರುವ ಕಾರಣ ಏಷಿಯಾ ಕಪ್ ಚಾಂಪಿಯನ್ ಪಟ್ಟಕ್ಕೇರುವ ಅವಕಾಶ ಕೈತಪ್ಪಿದೆ. ಭಾರತದ ಯುವ ಹಾಕಿ ತಂಡ ಈವರೆಗೆ ಪ್ರಬಲವಾದ ಆಟವನ್ನು ಪ್ರದರ್ಶಿಸಿತ್ತು. ಆದರೆ ದಕ್ಷಿಣ ಕೊರಿಯಾ ವಿರುದ್ಧ 4-4- ಅಂಕಗಳಿಂದ ಡ್ರಾ ಆಗಿದೆ.
ಡ್ರಾ ಆದರೂ ಭಾರತ ಔಟಾಗಿದ್ದು ಹೇಗೆ?
ಮಲೇಷಿಯಾ ಹಾಗೂ ಜಪಾನ್ ನಡುವಿನ ಪಂದ್ಯದಲ್ಲಿ ಮಲೇಷಿಯಾ 5-0 ಅಂತರದಲ್ಲಿ ಗೆಲುವು ಸಾಧಿಸಿದೆ. ಇದರಿಂದ ದಕ್ಷಿಣ ಕೊರಿಯಾ ಹಾಗೂ ಮಲೇಷಿಯಾ ಎರಡೂ ತಂಡಗಳು ಸೂಪರ್ 4 ಹಂತದಲ್ಲಿ 5 ಅಂಕಗಳನ್ನು ಪಡೆದಿದೆ. ಈ ಕಾರಣದಿಂದ ಭಾರತ ತಂಡ ಫೈನಲ್ ತಲುಪುವ ಅವಕಾಶದಿಂದ ಔಟಾಗಿದೆ.
ವೀರೋಚಿತ ಹೋರಾಟ…
ಈ ಬಾರಿಯ ಭಾರತದ ಹಾಕಿ ತಂಡ ಹೊಸತು. ಆದರೂ ಮೈದಾನದಲ್ಲಿ ಆಡುವಾಗ ಸಾಮರ್ಥ್ಯಕ್ಕೂ ಮೀರಿದ ಆಟವನ್ನು ಪ್ರದರ್ಶಿಸಿದ್ದಾರೆ. ದಕ್ಷಿಣ ಕೊರಿಯಾ ವಿರುದ್ಧವೂ ಕೊನೆಕ್ಷಣದವರೆಗೂ ಗೆಲುವಿಗಾಗಿ ಹೋರಾಡಿದ್ದರು. ಭಾರತದ ಪರ ನೀಲಮ್ ಸಂಜೀಪ್ ಕ್ಸೆಸ್ (9ನೇ ನಿಮಿಷ), ದೀಪ್ಸನ್ ತಿರ್ಕೆ(21), ಮಹೇಶ್ ಶೇಶೆ ಗೌಡ(27) ಹಾಗೂ ಶಕ್ತಿವೇಲ್ ಮರೀಸ್ವಾರನ್ ಗೋಲ್ ಹೊಡೆಯುವ ಮೂಲಕ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದಿನ ಪಂದ್ಯದಲ್ಲಿ ಭಾರತ ಸೋಲುವ ಮೂಲಕ ಏಷಿಯಾ ಕಪ್‌ನಿಂದ ಹೊರ ಬಂದಿದ್ದು ಅಭಿಮಾನಿಗಳ ಎದೆ ಭಾರವಾಗಿಸಿದೆ. ಆದರೆ, ಈ ಯುವ ತಂಡವು ಹೆಮ್ಮೆ ಪಡುವಂತೆ ಆಟವಾಡಿದ್ದು ಖುಷಿಯ ವಿಚಾರವಾಗಿದೆ. ಇವರ ಪರಿಶ್ರಮಕ್ಕೆ ದೇಶದ ಜನತೆ ಸಮಾಧಾನ ಪಟ್ಟಿದೆ ಹಾಗೂ ಮುಂಬರುವ ಸರಣಿಯಲ್ಲಿ ಕಪ್ ಗೆಲ್ಲುವ ಭರವಸೆ ಮೂಡಿಸಿದೆ.
ಮುಂದಿನ ಪಂದ್ಯಗಳು ಹೇಗಿರಲಿವೆ?
ಈ ಮುಂದೆ ದಕ್ಷಿಣ ಕೊರಿಯಾ ಹಾಗೂ ಮಲೆಷಿಯಾ ತಂಡವು ಏಷಿಯಾ ಕಪ್ ಚಾಮಪಿಯನ್ ಪಟ್ಟಕ್ಕೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವು ಬುಧವಾರ ನಡೆಯಲಿದೆ.
ಮೂರು ಹಾಗೂ ನಾಲ್ಕನೇ ಸ್ಥಾನಕ್ಕೆ ಭಾರತ ಹಾಗೂ ಜಪಾನ್ ನಡುವೆ ಸೆಣೆಸಾಟ ನಡೆಯಲಿದೆ.
ಇದನ್ನೂ ಓದಿ: Asia cup 2022 | ಸೇಡು ತೀರಿಸಿಕೊಂಡ ಭಾರತ: Super 4ನಲ್ಲಿ ಜಪಾನ್ ವಿರುದ್ಧ ಗೆಲುವು!