Site icon Vistara News

Asia Cup 2022 | ಇಂಡೊನೇಷ್ಯಾವನ್ನು 16-0 ಅಂತರದಲ್ಲಿ ಸೋಲಿಸಿದ ಭಾರತ, ನಾಕ್‌ ಔಟ್‌ ಆಸೆ ಜೀವಂತ

Asia Cup 2022

Asia Cup 2022: ಭಾರತ ಹಾಗೂ ಇಂಡೊನೇಷ್ಯಾ ನಡುವಿನ ಹಾಕಿ ಪಂದ್ಯದಲ್ಲಿ ಭಾರತ 16-0 ಅಂತರದ ಭಾರಿ ಗೆಲುವು ಸಾಧಿಸಿದೆ. ಈ ಬಾರಿಯ ಏಷಿಯಾ ಕಪ್‌ ಹೋಸ್ಟ್‌ ಮಾಡಿರುವ ಇಂಡೊನೆಷಿಯ ವಿರುದ್ಧ ಭಾರತ ಗೆದ್ದಿರುವುದರಿಂದ ನಾಕ್‌ ಔಟ್‌ ಹಂತ ತಲುಪಲು ಅನುಕೂಲವಾಗಿದೆ.

ಕಳೆದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿರುವ ಕಾರಣದಿಂದ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೂ ನಾಕ್‌ ಔಟ್‌ ತಲುಪುವುದು ಅನುಮಾನವಾಗಿತ್ತು. ಹೀಗಾಗಿ ಭಾರತದ ಭವಿಷ್ಯ ಭಾರತ ತಂಡದವರ ಕೈಯ್ಯಲ್ಲೇ ಇತ್ತು. ಇಂದು ಇಂಡೊನೆಷಿಯ ವಿರುದ್ಧ ದಿಸ್ಪನ್‌ ತಿರ್ಕೆ ಹಾಗೂ ಸುದೇವ್‌ ಆಟವನ್ನು ಸಂಪೂರ್ಣ ಚೇಂಜ್‌ ಮಾಡಿದ್ದಾರೆ. ಮೊದಲ ಹಾಫ್‌ ಟೈಂ ಹೊತ್ತಿಗೆ ಭಾರತ 6-0 ಲೀಡ್‌ ಪಡೆದದ್ದರಿಂದ ಗೇಮ್‌ನ ದಿಕ್ಕೇ ಬದಲಾಯಿತು.

ಸುದೇವ್‌ 54ನೇ ನಿಮಿಷದಲ್ಲಿ ಒಂದು ಗೋಲ್‌ ಹೊಡೆದು ಗಮನ ಸೆಳೆದರೆ, ದಿಪ್ಸನ್‌ ಪೆನಾಲ್ಟಿಯಲ್ಲಿ ಹಾಟ್‌-ಟ್ರಿಕ್‌ ಗೋಲ್‌ ಬಾರಿಸಿ ಮಿಂಚಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಡ್ರಾ ಆಗಿತ್ತು.ಜಪಾನ್‌ ವಿರುದ್ಧ ಸೋತಿತ್ತು. ಹಾಗಾಗಿ ಭಾರತ ನಾಕ್‌ ಔಟ್‌ ತಲುಪಲು ಈ ಪಂದ್ಯದಲ್ಲಿ 15-0 ಲೀಡ್‌ ಪಡೆಯಬೇಕಿತ್ತು. ಈಗ 16-0 ಲೀಡ್‌ ಪಡೆದಿರುವ ಕಾರಣದಿಂದ ನಾಕ್‌ ಔಟ್‌ ತಲುಪು ಆಸೆ ಜೀವಂತವಾಗಿದೆ.

ಇದನ್ನೂ ಓದಿ: Asia Cup 2022 | ಜಪಾನ್‌ ವಿರುದ್ಧ ಭಾರತ ಹಾಕಿ ತಂಡಕ್ಕೆ ಸೋಲು

Exit mobile version