ದುಬೈ : ಏಷ್ಯಾ ಕಪ್‌ನ (Asia Cup – 2022) ಅರ್ಹತಾ ಸುತ್ತು ಬುಧವಾರ ಮುಕ್ತಾಯಗೊಂಡಿದ್ದು ಹಾಂಕಾಂಗ್ ತಂಡ ಪ್ರಮುಖ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಹೀಗಾಗಿ ಹಾಲಿ ಆವೃತ್ತಿಯಲ್ಲಿ ಆಡುವ ಆರನೇ ತಂಡ ಯಾವುದೆಂಬುದು ಖಚಿತವಾಯಿತು. ಬುಧವಾರ ನಡೆದ ಅರ್ಹತಾ ಸುತ್ತಿನ ಕೊನೇ ಪಂದ್ಯದಲ್ಲಿ ಆತಿಥೇಯ ಯುಎಇ ತಂಡವನ್ನು ಮಣಿಸಿದ ಹಾಂಕಾಂಗ್ ತಂಡ ಪ್ರಮುಖ ಸುತ್ತಿಗೆ ಎಂಟ್ರಿ ಪಡೆದುಕೊಂಡಿತು.
ಒಮನ್‌ನ ಅಲ್ ಅಮೆರತ್ ಸ್ಟೇಡಿಯಮ್‌ನಲ್ಲಿ ನಡೆದ ಅರ್ಹತಾ ಸುತ್ತಿನ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಹಾಂಕಾಂಗ್ ಪ್ರಮುಖ ಸುತ್ತಿಗೆ ಪ್ರವೇಶ ಪಡೆಯಿತು. ಹೀಗಾಗಿ ಎ ಗುಂಪಿನಲ್ಲಿರುವ ಭಾರತ ಹಾಗೂ ಪಾಕಿಸ್ತಾನ ತಂಡದ ವಿರುದ್ಧ ಆಡಬೇಕಾಗಿದೆ. ಭಾರತ ಹಾಗೂ ಹಾಂಕಾಂಗ್ ನಡುವೆ ಆಗಸ್ಟ್ ೩೧ರಂದು ಪಂದ್ಯ ನಡೆದರೆ, ಪಾಕಿಸ್ತಾನ ವಿರುದ್ಧ ಸೆಪ್ಟೆಂಬರ್ ೨ರಂದು ಆಡಲಿದೆ.
ಬುಧವಾರ ನಡೆದ ಅರ್ಹತಾ ಸುತ್ತಿನ ಕೊನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ ತಂಡ ೧೪೭ ರನ್ ಬಾರಿಸಿತು. 148 ರನ್ಗಳ ಸಾಧಾರಣ ಗುರಿಯ ವಿರುದ್ಧ ಆಡಿದ ಹಾಂಕಾಂಗ್ ಆರಂಭಿಕರಾದ ನಿಜಕತ್ ಖಾನ್(39) ಹಾಗೂ ಯಾಸಿಮ್ ಮುರ್ತಾಜ (58) ಅವರ ಅಮೋಘ ಜತೆಯಾಟದ ನೆರವಿನಿಂದ ೧೯ ಓವರ್‌ಗಳಲ್ಲಿ ಗೆಲುವು ಸಾಧಿಸಿತು.
ಯಾವಾಗ ಆರಂಭ
ಏಷ್ಯಾ ಕಪ್ ೨೦೨೨ ಆಗಸ್ಟ್ ೨೭ರಂದು ಆರಂಭವಾಗಲಿದೆ. ಬಿ ಗುಂಪಿನಲ್ಲಿರುವ ಶ್ರೀಲಂಕಾ ಹಾಗೂ ಅಘಫಾನಿಸ್ತಾನ ವಿರುದ್ಧ ಮೊದಲ ಪಂದ್ಯ ನಡೆಯಲಿದೆ. ಮರು ದಿನವೇ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ಅಯೋಜನೆಗೊಂಡಿದೆ.
ಏಷ್ಯಾ ಕಪ್‌ನಲ್ಲಿ ಆಡಲಿರುವ ತಂಡಗಳು
ಎ ಗುಂಪು | ಭಾರತ, ಪಾಕಿಸ್ತಾನ, ಹಾಂಕಾಂಗ್
ಬಿ ಗುಂಪು | ಅಫಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ
ಇದನ್ನೂ ಓದಿ | Asia Cup- 2022 | ಏಷ್ಯಾ ಕಪ್‌ಗೆ ಹೋಗುವ ಭಾರತ ತಂಡದ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ