ದುಬೈ : ಏಷ್ಯಾ ಖಂಡದ ಆರು ಕ್ರಿಕೆಟ್ ದೇಶಗಳ ನಡುವೆ ನಡೆಯಲಿರುವ Asia Cup- 2022 ಕ್ರಿಕೆಟ್ ಟೂರ್ನಿ ಆರಂಭಕ್ಕೆ ಇನ್ನು ಎರಡು ದಿನಗಳು ಮಾತ ಬಾಕಿ ಉಳಿದಿವೆ. ಟಿ೨೦ ಮಾದರಿಯಲ್ಲಿ ನಡೆಯುವ ಹಾಲಿ ಆವೃತ್ತಿಯ ಏಷ್ಯಾ ಕಪ್ ಪಂದ್ಯಗಳು ಯುಎಇನ ಎರಡು ಸ್ಟೇಡಿಯಮ್‌ಗಳಲ್ಲಿ ನಡೆಯಲಿವೆ. ಅರ್ಹತಾ ಸುತ್ತಿನ ಪಂದ್ಯಗಳು ಒಮನ್‌ನಲ್ಲಿ ನಡೆದಿದ್ದು, ಪ್ರಮುಖ ಪಂದ್ಯಗಳು ಆಗಸ್ಟ್ ೨೮ರಂದು ಆರಂಭವಾಗಲಿದೆ. ಹಾಗಾದರೆ ಈ ಬಾರಿಯ ಟೂರ್ನಿಯ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಎಷ್ಟು ತಂಡಗಳು?
ಒಟ್ಟು ಆರು ತಂಡಗಳ ನಡುವೆ ಟೂರ್ನಿ ನಡೆಯಲಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನ, ಶ್ರೀಲಂಕಾ ನೇರ ಅರ್ಹತೆ ಪಡೆದುಕೊಂಡಿದ್ದರೆ, ಹಾಂಕಾಂಗ್ ತಂಡ ಅರ್ಹತಾ ಸುತ್ತಿನ ಮೂಲಕ ಹಾಂಕಾಂಗ್ ಪ್ರವೇಶ ಪಡೆದಿದೆ.
ಎಷ್ಟು ಗುಂಪುಗಳು?
ಎ ಮತ್ತು ಬಿ ಗುಂಪಿನ ನಡುವೆ ಪಂದ್ಯಗಳು ನಡೆಯಲಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡವಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಅಫಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡವಿದೆ.
ಎಲ್ಲಿ ನಡೆಯಲಿವೆ ಪಂದ್ಯಗಳು
ದುಬೈನಲ್ಲಿರುವ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ ಹಾಗೂ ಶಾರ್ಜಾದಲ್ಲಿರುವ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಒಟ್ಟು ೧೩ ಪಂದ್ಯಗಳು ನಡೆಯಲಿವೆ.
ವೇಳಾಪಟ್ಟಿ
ದಿನಾಂಕ | ಪಂದ್ಯ | ತಂಡಗಳು | ತಾಣ | ಸಮಯ |
ಆಗಸ್ಟ್ 27 | ಪಂದ್ಯ 1ಗುಂಪು ಬಿ | ಅಫಘಾನಿಸ್ತಾನ v/s ಶ್ರೀಲಂಕಾ | ದುಬೈ | ರಾತ್ತಿ 7:30 |
ಆಗಸ್ಟ್ 28 | ಪಂದ್ಯ2 ಗುಂಪು ಎ | ಭಾರತ v/s ಪಾಕಿಸ್ತಾನ | ದುಬೈ | ರಾತ್ತಿ 7:30 |
ಆಗಸ್ಟ್ 30 | ಪಂದ್ಯ 3 ಗುಂಪು ಬಿ | ಬಾಂಗ್ಲಾದೇಶ v/s ಪಾಕಿಸ್ತಾನ | ಶಾರ್ಜಾ | ರಾತ್ತಿ 7:30 |
ಆಗಸ್ಟ್ 31 | ಪಂದ್ಯ 4 ಗುಂಪು ಎ | ಭಾರತ v/s ಹಾಂಕಾಂಗ್ | ದುಬೈ | ರಾತ್ತಿ 7:30 |
ಸೆಪ್ಟೆಂಬರ್ 1 | ಪಂದ್ಯ 5 ಗುಂಪು ಬಿ | ಶ್ರೀಲಂಕಾ v/s ಬಾಂಗ್ಲಾದೇಶ | ದುಬೈ | ರಾತ್ತಿ 7:30 |
ಸೆಪ್ಟೆಂಬರ್ 2 | ಪಂದ್ಯ 6 ಗುಂಪು ಎ | ಪಾಕಿಸ್ತಾನ v/s ಹಾಂಕಾಂಗ್ | ಶಾರ್ಜಾ | ರಾತ್ತಿ 7:30 |
ಸೆಪ್ಟೆಂಬರ್ 3 | ಸೂಪರ್ 4 ಪಂದ್ಯ1 | ಬಿ1 v/s ಬಿ2 | ಶಾರ್ಜಾ | ರಾತ್ತಿ 7:30 |
ಸೆಪ್ಟೆಂಬರ್ 4 | ಸೂಪರ್ 4 ಪಂದ್ಯ 2 | ಎ1 v/s ಎ2 | ದುಬೈ | ರಾತ್ತಿ 7:30 |
ಸೆಪ್ಟೆಂಬರ್ 6 | ಸೂಪರ್ 4 ಪಂದ್ಯ3 | ಎ1 v/s ಬಿ1 | ದುಬೈ | ರಾತ್ತಿ 7:30 |
ಸೆಪ್ಟೆಂಬರ್ 7 | ಸೂಪರ್ 4 ಪಂದ್ಯ 4 | ಎ2 v/s ಬಿ2 | ದುಬೈ | ರಾತ್ತಿ 7:30 |
ಸೆಪ್ಟೆಂಬರ್ 8 | ಸೂಪರ್ 4 ಪಂದ್ಯ5 | ಎ1 v/s ಬಿ2 | ದುಬೈ | ರಾತ್ತಿ 7:30 |
ಸೆಪ್ಟೆಂಬರ್ 9 | ಸೂಪರ್ 4 ಪಂದ್ಯ 6 | ಬಿ 1v/s ಎ2 | ದುಬೈ | ರಾತ್ತಿ 7:30 |
ಸೆಪ್ಟೆಂಬರ್ 11 | ಫೈನಲ್ ಪಂದ್ಯ | ದುಬೈ | ರಾತ್ತಿ 7:30 |
ನೇರ ಪ್ರಸಾರ ಎಲ್ಲಿ ?
ಭಾರತದಲ್ಲಿ ಏಷ್ಯಾ ಕಪ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಅಂತೆಯೇ ಲೈವ್ ಡಿಸ್ನಿ- ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಇದನ್ನೂ ಓದಿ | Asia Cup- 2022 | ಏಷ್ಯಾ ಕಪ್‌ಗೆ ಹೋಗುವ ಭಾರತ ತಂಡದ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ