ದುಬೈ : ಹಾಂಕಾಂಗ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಎ ಗುಂಪಿನಿಂದ ಭಾರತ ತಂಡ ಸೂಪರ್‌೪ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಬಿ ಗುಂಪಿನಿಂದ ಅಫಘಾನಿಸ್ತಾನ ತಂಡ ಎಂಟ್ರಿಯಾಗಿದೆ. ಸೆಪ್ಟೆಂಬರ್ ೩ರಂದು ಸೂಪರ್ ೪ ಹಂತ ಆರಂಭಗೊಳ್ಳಲಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಒಂದು ವೇಳೆ ಶುಕ್ರವಾರ ನಡೆಯುವ ಹಾಂಕಾಂಗ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದರೆ, ಸೂಪರ್ ೪ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ (IND vs PAK) ನಡುವೆ ಸೆ.೪ರಂದು ಮತ್ತೊಂದು ಏಷ್ಯಾ ಕಪ್ ಪಂದ್ಯ ನಡೆಯಲಿದೆ.
ಸೆಪ್ಟೆಂಬರ್ ೨೮ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ೫ ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಅಂತೆಯೇ ಹಾಂಕಾಂಗ್ ವಿರುದ್ಧ ೪೦ ರನ್‌ಗಳಿಂದ ಗೆಲುವು ಕಂಡಿತ್ತು. ಹೀಗಾಗಿ ನೇರವಾಗಿ ಸೂಪರ್‌೪ ಹಂತಕ್ಕೇರಿದೆ. ಒಂದು ಗುಂಪಿನಿಂದ ಎರಡು ತಂಡಗಳು ಸೂಪರ್‌೪ ಹಂತಕ್ಕೆ ಪ್ರವೇಶ ಪಡೆಯುತ್ತದೆ. ಹೀಗಾಗಿ ಹಾಂಕಾಂಗ್ ತಂಡವನ್ನು ಶುಕ್ರವಾರ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮಣಿಸಿದರೆ ಸೂಪರ್-೪ ಹಂತಕ್ಕೆ ಪ್ರವೇಶ ಪಡೆಯಲಿರುವ ಎರಡನೇ ತಂಡ ಎನಿಸಿಕೊಳ್ಳಲಿದೆ. ಸೂಪರ್- ಹಂತದ ಮೊದಲ ಪಂದ್ಯದಲ್ಲಿ ಬಿ೧ ಮತ್ತು ಬಿ೨ ಪಂದ್ಯಗಳ ಪಂದ್ಯ ನಡೆದರೆ, ಸೆಪ್ಟೆಂಬರ್ ೪ರಂದು ಎ೧ ಮತ್ತು ಎ೨ ನಡುವೆ ಹಣಾಹಣಿ ನಿಗದಿಯಾಗಿದೆ. ಹಾಗಾದರೆ, ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುವುದ ಖಾತರಿ. ಎರಡನೇ ಪಂದ್ಯದಲ್ಲಿ ಎ೧ ಭಾರತ ಹಾಗೂ ಬಿ೧ ಅಫಘಾನಿಸ್ತಾನ ತಂಡದ ನಡುವೆ ಪಂದ್ಯ ಆಯೋಜನೆಗೊಳ್ಳಲಿದೆ. ಈ ಹಂತದ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಆಡಲಿವೆ. ಸೂಪರ್‌೪ ಹಂತದಲ್ಲೂ ಭಾರತ ಹಾಗೂ ಪಾಕಿಸ್ತಾನ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡರೆ ಮತ್ತೆ ಫೈನಲ್‌ನಲ್ಲಿಯೂ ಮುಖಾಮುಖಿಯಾಗುವುದು ಗ್ಯಾರಂಟಿ.
ಸೂಪರ್-೪ ವೇಳಾಪಟ್ಟಿ ಇಂತಿದೆ
ಬಿ೧ vs ಬಿ೨- ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್ (ಸೆಪ್ಟೆಂಬರ್ ೩)
ಎ೧ vs ಎ೨- ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ (ಸೆಪ್ಟೆಂಬರ್ ೪)
ಎ೧ vs ಬಿ೧- ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ (ಸೆಪ್ಟೆಂಬರ್ ೬)
ಎ೨ vs ಬಿ೨- ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ (ಸೆಪ್ಟೆಂಬರ್ ೭)
ಎ೧ vs ಬಿ೨- ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಮ್ (ಸೆಪ್ಟೆಂಬರ್ ೮)
ಇದನ್ನೂ ಓದಿ | IND vs PAK | ಜಗಳವಾಡಿಲ್ಲ, ಗುರಾಯಿಸಿಲ್ಲ ಆದರೂ ಭಾರತ, ಪಾಕಿಸ್ತಾನ ತಂಡಗಳಿಗೆ ಬಿತ್ತು ದಂಡ