Site icon Vistara News

Asia Cup 2023: ಏಷ್ಯಾಕಪ್​ಗೆ ಅಫಘಾನಿಸ್ತಾನ ತಂಡ ಪ್ರಕಟ; ಕೊಹ್ಲಿ ಕೆಣಕಿದ ನವೀನ್​ ಉಲ್​ ಹಕ್​ಗೆ ಕೊಕ್​

asia cup afghanistan squad 2023

ಕೊಲೊಂಬೊ: ಆಗಸ್ಟ್ 30 ರಿಂದ ಆರಂಭಗೊಳ್ಳಲಿರುವ 50 ಓವರ್​ಗಳ ಮಾದರಿಯ ಏಷ್ಯಾಕಪ್​ ಟೂರ್ನಿಗೆ(Asia Cup 2023) ಅಫಘಾನಿಸ್ತಾನ ಕ್ರಿಕೆಟ್​ ಮಂಡಳಿ ಭಾನುವಾರ 17 ಮಂದಿ ಆಟಗಾರರ ತಂಡವನ್ನು(afghanistan cricket team) ಪ್ರಕಟಿಸಿದೆ. ಈ ಬಾರಿಯ ಐಪಿಎಲ್​ ವೇಳೆ ವಿರಾಟ್​ ಕೊಹ್ಲಿಯನ್ನು ಕೆಣಕಿ ಭಾರಿ ಸುದ್ದಿಯಾಗಿದ್ದ ನವೀನ್​ ಉಲ್​ ಹಕ್​ ಅವರು ತಂಡದಲ್ಲಿ(asia cup 2023 afghanistan squad) ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಏಷ್ಯಾಕಪ್​ನಲ್ಲಿ ಉಭಯ ಆಟಗಾರರ ಮುಖಾಮುಖಿ ನೋಡಲು ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವಾಗಿದೆ. ಹಶ್ಮತುಲ್ಲಾ ಶಾಹಿದಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

​ಶನಿವಾರವಷ್ಟೇ ಪಾಕಿಸ್ತಾನ ವಿರುದ್ಧ ಕೊನೆಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ಫರೀದ್ ಅಹ್ಮದ್ ಮಲಿಕ್ ಮತ್ತು ಶಾಹಿದುಲ್ಲಾ ಕಮಾಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಗಾಯಾಳು ಅಜ್ಮತುಲ್ಲಾ ಒಮರ್ಜಾಯ್ ಬದಲಿಗೆ ಗುಲ್ಬದಿನ್ ನೈಬ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಜ್ಮತುಲ್ಲಾ ಅವರು ಪಾಕ್​ ವಿರುದ್ಧದ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು.

6 ವರ್ಷದ ಬಳಿಕ ತಂಡ ಸೇರಿದ ಕರೀಮ್ ಜನತ್

25 ವರ್ಷದ ಮಧ್ಯಮ ವೇಗಿ ಕರೀಮ್ ಜನತ್ ಅವರು 6 ವರ್ಷಗಳ ಬಳಿಕ ತಂಡದಲ್ಲಿ ಅವಕಾಶ ಪಡೆದಿದ್ದಾರೆ.​ 2017 ರಲ್ಲಿ ಜಿಂಬಾಬ್ವೆ ವಿರುದ್ಧ ಅವರು ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದರು. ಇದೀಗ ಮಹತ್ವದ ಟೂರ್ನಿ ಏಷ್ಯಾಕಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಆಟಗಾರ ಮೊಹಮ್ಮದ್​ ನಬೀ, ರಶೀದ್​ ಖಾನ್​ ಹಾಗೂ ಪಾಕಿಸ್ತಾನ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಶತಕ ಬಾರಿಸಿ ಧೋನಿ ದಾಖಲೆ ಮುರಿದಿದ್ದ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜರ್ದಾನ್​ ತಂಡದ ಸ್ಟಾರ್​ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ Asia Cup 2023: ಏಷ್ಯಾಕಪ್​ನಿಂದ ಚಹಲ್​ ಕೈಬಿಟ್ಟಿರುವುದು ನಿರಾಶಾದಾಯಕ; ಎಬಿಡಿ

ಅಫಘಾನಿಸ್ತಾ ತಂಡ

ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಗುಲ್ಬದಿನ್ ನೈಬ್, ಕರೀಮ್ ಜನತ್, ಅಬ್ದುಲ್ ರಹಮಾನ್, ಶರಫುದ್ದೀನ್ ಅಶ್ರಫ್, ಮುಜೀಬ್​ ಉರ್​ ರೆಹಮಾನ್​, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ, ಫಜಲ್ಹಕ್ ಫಾರೂಕಿ.

ಏಷ್ಯಾಕಪ್​ ಟೂರ್ನಿ ಆಗಸ್ಟ್​ 30(asia cup 2023 schedule) ರಿಂದ ಆರಂಭವಾಗಲಿದೆ. ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್‌ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ(asia cup ind vs pak) ಸೆಪ್ಟಂಬರ್​ 2 ರಂದು ಲಂಕಾದ ಕ್ಯಾಂಡಿಯಲ್ಲಿ ಸೆಣಸಾಟ ನಡೆಸಲಿದೆ.

Exit mobile version