Site icon Vistara News

Asia Cup 2023: ಐಪಿಎಲ್​ ಫೈನಲ್​ ಬಳಿಕ ಏಷ್ಯಾಕಪ್ ಭವಿಷ್ಯ ನಿರ್ಧಾರ; ಜಯ್​ ಶಾ

Asia Cup 2023

#image_title

ಅಹಮದಾಬಾದ್​: ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗಳ ನಡುವಿನ ಏಷ್ಯಾ ಕಪ್(Asia Cup 2023)​ ಆತಿಥ್ಯದ ತಿಕ್ಕಾಟ ಇನ್ನೂ ಕೊನೆಗೊಂಡಿಲ್ಲ. ಇದೇ ವಿಚಾರವಾಗಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಐಪಿಎಲ್​ ಫೈನಲ್​ ಬಳಿಕ ಏಷ್ಯಾ ಕಪ್​ನ ಅಂತಿಮ ನಿರ್ಧಾರ ಪ್ರಕಟಗೊಳ್ಳಲಿದೆ ಎಂದು ಹೇಳಿದ್ದಾರೆ.

ಭದ್ರತಾ ಕಾರಣಗಳಿಂದಾಗಿ ಭಾರತ ತಂಡ ಪಾಕಿಸ್ತಾನದಲ್ಲಿ ಪಂದ್ಯ ಆಡಲು ಸಿದ್ಧರಿಲ್ಲ ಎಂಬುದು ಬಿಸಿಸಿಐನ ವಾದವಾಗಿದೆ. ಇದಕ್ಕೆ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸುವಂತೆ ಬಿಸಿಸಿಐ ಬೇಡಿಕೆ ಇರಿಸಿತ್ತು. ಆದರೆ ಟೂರ್ನಿ ನಡೆದರೆ ಅದು ನಮ್ಮಲ್ಲೇ ನಡೆಯಬೇಕು, ಇತರ ತಂಡಗಳಿಗೆ ಇಲ್ಲದ ಭಯ ಭಾರತ ತಂಡಕ್ಕೆ ಮಾತ್ರ ಏಕೆ ಎಂಬುದು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಹಠವಾಗಿದೆ. ಇದರ ಜತೆಗೆ ಒಂದೊಮ್ಮೆ ಭಾರತ ತಂಡ ಪಾಕಿಸ್ತಾದಲ್ಲಿ ಈ ಟೂರ್ನಿ ಆಡದಿದ್ದರೆ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್​ನಲ್ಲಿ ಆಡುವುದಿಲ್ಲ ಎಂಬ ಬೆದರಿಕೆಯನ್ನು ಹಾಕಿದೆ. ಇದೇ ವಿಚಾರವಾಗಿ ಮತನಾಡಿರುವ ಜಯ್​ ಶಾ ಅವರು ಏನೇ ಆದರೂ ಐಪಿಎಲ್​ ಫೈನಲ್​ ಮುಗಿದ ತಕ್ಷಣ ಅಂತಿಮ ನಿರ್ಣಯ ಪ್ರಕಟಗೊಳ್ಳಲಿದೆ ಎಂದು ಹೇಳಿದ್ದಾರೆ.

ಟೂರ್ನಿ ಆಯೋಜನೆ ಬಗ್ಗೆ ಎಸಿಸಿಯಿಂದ ಇನ್ನೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಮುಂದಿನ ವಾರದಲ್ಲಿ ಅಂತಿಮ ನಿರ್ಧಾರವೊಂದು ಪ್ರಕಟವಾಗಬಹುದು ಎಂದು ಹೇಳಲಾಗಿತ್ತು. ಈ ಚರ್ಚೆಗಳು ನಡೆಯುತ್ತಿರುವಾಗಲೇ ಜಯ್​ ಶಾ ಅವರು ಈ ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸುವಾಗ ಮುಂದಿನ ವಾರ ಟೂರ್ನಿಯ ಆತಿಥ್ಯದ ನಿರ್ಧಾರ ಪ್ರಕಟಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲದಂತೆ ತೋರುತ್ತಿದೆ.

ಇದನ್ನೂ ಓದಿ Asia Cup 2023: ಏಷ್ಯಾ ಕಪ್​ ಆತಿಥ್ಯ ಕೈ ತಪ್ಪಿದರೆ ಟೂರ್ನಿಗೆ ಬಹಿಷ್ಕಾರ; ಪಾಕ್​ ಎಚ್ಚರಿಕೆ

ಪಾಕ್​ ಮಂಡಳಿಯ ನಿಲುವೇನು?

ಸದ್ಯ ಮಾಹಿತಿ ಪ್ರಕಾರ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿದೆ. ಪಿಸಿಬಿ ಮುಖ್ಯಸ್ಥ ನಜಾಮ್ ಸೇಥಿ ಅವರ ಪ್ರಕಾರ ಒಂದು ಸರಳ ಪರಿಹಾರವೆಂದರೆ ಪಾಕಿಸ್ತಾನವು ತನ್ನ ಏಷ್ಯಾ ಕಪ್ ಪಂದ್ಯಗಳನ್ನು ತವರಿನಲ್ಲಿ ಆಡಲು ಅವಕಾಶ ನೀಡುತ್ತದೆ ಮತ್ತು ಭಾರತವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುವುದು. ಆದರೆ, ಬಿಸಿಸಿಐ ಈ ಪ್ರಸ್ತಾಪವನ್ನು ಸಾರಾಸಗಟವಾಗಿ ತಳ್ಳಿ ಹಾಕಿದೆ.

Exit mobile version