Site icon Vistara News

Asia Cup 2023: ಹೈಬ್ರಿಡ್ ಮಾಡೆಲ್​ನಲ್ಲಿ​ ಏಷ್ಯಾ ಕಪ್​; ಪಾಕ್​ ಕ್ರಿಕೆಟ್​ ಮಂಡಳಿ ಶಿಫಾರಸು

Asia Cup 2023: Asia Cup in hybrid model; Recommended by Pakistan Cricket Board

Asia Cup 2023: Asia Cup in hybrid model; Recommended by Pakistan Cricket Board

ಲಾಹೋರ್: 2023ರ ಏಷ್ಯಾ ಕಪ್‌ ಕ್ರಿಕೆಟ್(Asia Cup 2023)​ ಟೂರ್ನಿಯನ್ನು ಹೈಬ್ರಿಡ್ ಮಾಡೆಲ್​ನಲ್ಲಿ ನಡೆಸುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)ಗೆ ಶಿಫಾರಸು ಮಾಡಿದೆ. ಟೂರ್ನಿಯಲ್ಲಿ ಪಾಕಿಸ್ತಾನವು ತನ್ನ ಪಂದ್ಯಗಳನ್ನು ತವರಿನಲ್ಲಿ ಆಡಲಿದ್ದು, ಭಾರತವು ತಮ್ಮ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರು ಹೇಳಿದ್ದಾರೆ.

“2025 ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುವಾಗ ಭಾರತ ಪಾಕಿಸ್ತಾನಕ್ಕೆ ಬರುವ ನಿರೀಕ್ಷೆ ಇದೆ. ಏಷ್ಯಾ ಕಪ್ ಟೂರ್ನಿಯನ್ನು ತಟಸ್ಥ ತಾಣದಲ್ಲಿ ಆಡಲು ನಮಗೆ ಸಲಹೆ ನೀಡಲಾಗಿದೆ. ಆದರೆ ನಾವು ಕೂಡ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಹೋಗುವ ವೇಳೆ ಇದೇ ರೀತಿಯ ಬೇಡಿಕೆ ಇಡುತ್ತೇವೆ” ಎಂದು ಸೇಥಿ ಹೇಳಿದ್ದಾರೆ.

“ನಮ್ಮ ಸರ್ಕಾರವು ಭಾರತದ ವಿರುದ್ಧ ಆಡುವ ಬಗ್ಗೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಆದರೆ ಭಾರತ ಸರ್ಕಾರ ನಮ್ಮ ಜತೆ ಕ್ರಿಕೆಟ್​ ಆಡಲು ಟೀಮ್​ ಇಂಡಿಯಾಕ್ಕೆ ನಿರ್ಬಂಧ ಹೇರುತ್ತಿದೆ. ಇದು ಎಲ್ಲರಿಗೂ ತಿಳಿದ ವಿಚಾರ. ನನಗೆ ಇಲ್ಲಿ ಒಂದು ಅರ್ಧವಾಗುತ್ತಿಲ್ಲ. ಬೇರೆ ಕ್ರೀಡೆಗಳನ್ನು ಆಡುವಾಗ ಈ ನಿರ್ಬಂಧಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಕ್ರಿಕೆಟ್​ ವಿಚಾರದಲ್ಲಿ ಮಾತ್ರ ಹೀಗೆ ಏಕೆ” ಎಂದು ಸೇಥಿ ಹೇಳಿದರು.

ಇದನ್ನೂ ಓದಿ Asia Cup 2023 : ಪಾಕ್​​ನಲ್ಲೇ ಏಷ್ಯಾ ಕಪ್​; ಭಾರತ, ಪಾಕಿಸ್ತಾನ ಪಂದ್ಯ ತಟಸ್ಥ ತಾಣದಲ್ಲಿ

“ನಾವು ನಿರ್ಗತಿಕರಲ್ಲ, ನಮ್ಮ ಆರ್ಥಿಕತೆಯೂ ಉತ್ತಮವಾಗಿದೆ. ನಾವು ಭಾರತದೊಂದಿಗೆ ಗೌರವಯುತವಾಗಿ ಕ್ರಿಕೆಟ್ ಆಡಲು ಬಯಸುತ್ತೇವೆ. ಇದೇ ವಿಚಾರವಾಗಿ ಎಸಿಸಿ ಜತೆ ಮಾತುಕತೆ ನಡೆಸುತ್ತಿದ್ದೇವೆ. ಒಂದೊಮ್ಮೆ ಏಷ್ಯಾ ಕಪ್‌ನಲ್ಲಿ ಭಾರತದ ಎಲ್ಲ ಪಂದ್ಯಗಳನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಲು ಪಾಕಿಸ್ತಾನ ನಿರ್ಧರಿಸಿದರೆ, ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ​ ಭಾರತವು ಇದೇ ಹೈಬ್ರಿಡ್ ಪ್ರಯೋಗವನ್ನು ಬಳಸಬೇಕು” ಎಂದು ಸೇಥಿ ಒತ್ತಾಯಿಸಿದ್ದಾರೆ.

ಪಾಕಿಸ್ತಾನದಲ್ಲಿ ಈ ಹಿಂದೆ ಭದ್ರತಾ ಸಮಸ್ಯೆಗಳು ಇದ್ದವು, ಇದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಆದರೂ ಭಾರತ ಪಾಕಿಸ್ತಾನದಲ್ಲಿ ಭಾರತಕ್ಕೆ ಆಡಲು ಏನು ಸಮಸ್ಯೆ? ಎಂದು ತಿಳಿಯುತ್ತಿಲ್ಲ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಶ್ರೀಲಂಕಾ, ಅಫಘಾನಿಸ್ತಾನ, ಬಾಂಗ್ಲಾದೇಶ ತಂಡಗಳಿಗೆ ಇಲ್ಲಿ ಆಡಲು ಯಾವುದೇ ಸಮಸಯೆ ಇಲ್ಲ. ಭಾರತಕ್ಕೆ ಮಾತ್ರ ಏಕೆ ಎಂದು ಸೇಥಿ ಪ್ರಶ್ನಿಸಿದ್ದಾರೆ.

Exit mobile version