Site icon Vistara News

Asia Cup 2023: ಇಂದಿನಿಂದ ಏಷ್ಯಾಕಪ್​ ಸೂಪರ್​-4 ಕದನ; ಪಾಕ್​ಗೆ ಬಾಂಗ್ಲಾ ಸವಾಲು

asia cup 2023

ಪಲ್ಲೆಕೆಲೆ: ಪ್ರಸಕ್ತ ನಡೆಯುತ್ತಿರುವ ಏಷ್ಯಾಕಪ್(Asia Cup 2023)​ ಕ್ರಿಕೆಟ್​ ಟೂರ್ನಿಯಲ್ಲಿ ಲೀಗ್​ ಪಂದ್ಯಗಳು ಮುಕ್ತಾಯ ಕಂಡಿದೆ. ನಾಲ್ಕು ತಂಡಗಳು ಸೂಪರ್​-4(Super Fours) ಪ್ರವೇಶಿಸಿದ್ದು. ಈ ತಂಡಗಳ ಮಧ್ಯೆ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಆತಿಥೇಯ ಪಾಕಿಸ್ತಾನ, ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೂಪರ್​-4 ಪ್ರವೇಶಿಸಿದ ತಂಡಗಳು. ಇಂದು ನಡೆಯುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ(Pakistan vs Bangladesh) ಮುಖಾಮುಖಿಯಾಗಲಿವೆ.

6 ಪಂದ್ಯಗಳು​

ಸೂಪರ್-4ನಲ್ಲಿ ಒಟ್ಟು ಆರು ಪಂದ್ಯಗಳು ನಡೆಯಲಿವೆ. ಇಲ್ಲಿ ಅಗ್ರ ಎರಡು ಸ್ಥಾನ ಗಳಿಸಿದ ತಂಡಗಳು ನೇರವಾಗಿ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದೆ. ಸಿಮಿಫೈನಲ್​ ಪಂದ್ಯಗಳು ಇರುವುದಿಲ್ಲ. ಫೈನಲ್​ ಪಂದ್ಯ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಿಗದಿಯಾಗಿದೆ.

ಒಂದು ಪಂದ್ಯ ಪಾಕ್​ನಲ್ಲಿ

ಸೂಪರ್​-4ನ ಒಂದು ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಇಂದು ಲಾಹೋರ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ-ಪಾಕ್​ ಫೈಟ್​

ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಪಂದ್ಯ ಸೆಪ್ಟೆಂಬರ್​ 10ರಂದು ನಡೆಯಲಿದೆ. ಉಭಯ ತಂಡಗಳ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಹೀಗಾಗಿ ಅಭಿಮಾನಿಗಳು ನಿರಾಸೆಗೊಂಡಿದ್ದರು. ಆದರೆ ಈ ಬಾರಿ ಮಳೆ ಬಾರದ ಪ್ರದೇಶದಲ್ಲಿ ಪಂದ್ಯವನ್ನು ಆಯೋಜಿಸಲಾಗಿದೆ. ಹೀಗಾಗಿ ಈ ಪಂದ್ಯವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಈವರೆಗಿನ 15 ಏಷ್ಯಾ ಕಪ್‌ ಕೂಟಗಳಲ್ಲಿ ಒಮ್ಮೆಯೂ ಭಾರತ-ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖೀ ಆಗಿಲ್ಲ. ಭಾರತ ಅತ್ಯಧಿಕ 7 ಸಲ, ಪಾಕಿಸ್ತಾನ 2 ಸಲ ಚಾಂಪಿಯನ್‌ ಆಗಿದಿದ್ದರೂ ಎರಡೂ ತಂಡಗಳು ಫೈನಲ್‌ನಲ್ಲಿ ಎದುರಿಸಿದ್ದು ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು! ಈ ಸಲವಾದರೂ ಭಾರತ-ಪಾಕಿಸ್ತಾನ ಪ್ರಶಸ್ತಿ ಸಮರದಲ್ಲಿ ಎದುರಾಗಬಹುದೇ ಎಂಬುದು ಅಭಿಮಾನಿಗಳ ಕುತೂಹಲ.

ಇದನ್ನೂ ಓದಿ Asia Cup 2023 : ಅಫ್ಘಾನಿಸ್ತಾನ ಭೀತಿಯಿಂದ ಪಾರಾದ ಶ್ರೀಲಂಕಾ, ಸೂಪರ್ 4 ಸ್ಥಾನ ಭದ್ರ

ಏಷ್ಯಾಕಪ್ ಸೂಪರ್-4 ಹಂತದ ವೇಳಾಪಟ್ಟಿ

ಸೆಪ್ಟೆಂಬರ್ 6- ಪಾಕಿಸ್ತಾನ Vs ಬಾಂಗ್ಲಾದೇಶ (ಲಾಹೋರ್)

ಸೆಪ್ಟೆಂಬರ್ 9- ಶ್ರೀಲಂಕಾ Vs ಬಾಂಗ್ಲಾದೇಶ (ಕೊಲಂಬೊ)

ಸೆಪ್ಟೆಂಬರ್ 10- ಭಾರತ Vs ಪಾಕಿಸ್ತಾನ (ಕೊಲಂಬೊ)

ಸೆಪ್ಟೆಂಬರ್ 12- ಭಾರತ Vs ಶ್ರೀಲಂಕಾ (ಕೊಲಂಬೊ)

ಸೆಪ್ಟೆಂಬರ್ 14- ಪಾಕಿಸ್ತಾನ Vs ಶ್ರೀಲಂಕಾ (ಕೊಲಂಬೊ)

ಸೆಪ್ಟೆಂಬರ್ 15- ಭಾರತ Vs ಬಾಂಗ್ಲಾದೇಶ (ಕೊಲಂಬೊ)

ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)

Exit mobile version