Site icon Vistara News

Asia Cup 2023: ಏಷ್ಯಾಕಪ್​ ಪಂದ್ಯಗಳ ಸಮಯ ನಿಗದಿಪಡಿಸಿದ ಏಷ್ಯನ್ ಕೌನ್ಸಿಲ್

asia cup trophy

ಮುಂಬಯಿ: ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯುವ ಹೈಬ್ರಿಡ್​ ಮಾದರಿಯ ಏಷ್ಯಾಕಪ್​ಗೆ(Asia Cup 2023) ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿವೆ. ಈ ಮಹತ್ವದ ಟೂರ್ನಿ ಆಗಸ್ಟ್​ 31ರಿಂದ ಆರಂಭವಾಗಲಿದೆ. ಟೂರ್ನಿಯ ವೇಳಾಪಟ್ಟಿ ಮತ್ತು ತಾಣಗಳು ಈಗಾಗಲೇ ಪ್ರಕಟಗೊಂಡಿದೆ. ಇದೀಗ ಪಂದ್ಯಗಳ ಸಮಯವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿಗದಿ ಮಾಡಿದೆ. ಪ್ರತಿ ಪಂದ್ಯವು ಸಂಜೆ 3 ಗಂಟೆಗೆ(asia cup 2023 match time) ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಇಡೀ ಕ್ರಿಕೆಟ್‌ ಜಗತ್ತು ಬಹಳಾ ಕಾತರದಿಂದ ಎದುರು ನೋಡುತ್ತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈ-ವೋಲ್ಟೇಜ್ ಪಂದ್ಯ ಸೆಪ್ಟೆಂಬರ್‌ 2ರಂದು ಕ್ಯಾಂಡಿಯಲ್ಲಿ(Kandy) ನಡೆಯಲಿದೆ. ಪಾಕಿಸ್ತಾನದ ತಗಾದೆಯಿಂದಾಗಿ ಈ ಟೂರ್ನಿಯ ವೇಳಾಪಟ್ಟಿ ಪ್ರಕಟ ವಿಳಬಂವಾಗಿತ್ತು ಹೀಗಾಗಿ ಪಂದ್ಯಗಳ ತಾಣ ಮತ್ತು ಸಮಯವನ್ನು ತಡವಾಗಿ ಪ್ರಕಟಿಸಲಾಗಿದೆ. 50 ಓವರ್​ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

ಇದನ್ನೂ ಓದಿ Asia Cup 2023: ಏಷ್ಯಾಕಪ್​ನಲ್ಲಿ ಒಂದು ಪಂದ್ಯವನ್ನು ಪಾಕ್​ನಲ್ಲೂ ಆಡಲಿದೆ ಭಾರತ ತಂಡ

ಏಷ್ಯಾಕಪ್​ನಲ್ಲಿ 7 ಬಾರಿಯ ಚಾಂಪಿಯನ್ ಆಗಿರುವ ಭಾರತ 2023ರ ನಿರ್ಣಾಯಕ ವಿಶ್ವಕಪ್​ಗೆ ಮುಂಚಿತವಾಗಿ ಮತ್ತೊಂದು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎದುರು ನೋಡುತ್ತಿದೆ. ರೋಹಿತ್ ಶರ್ಮಾ ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್​​ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಚೊಚ್ಚಲ ಆವೃ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯೂ ಭಾರತ ತಂಡದ್ದಾಗಿದೆ.

ಒಂದು ಪಂದ್ಯ ಪಾಕ್​ನಲ್ಲಿಯೂ ಆಡಲಿದೆ ಭಾರತ

ಸೂಪರ್​-4ನ ಒಂದು ಪಂದ್ಯ ಲಹೋರ್​ನಲ್ಲಿ ನಡೆಯಲಿದೆ. ಇದು ಭಾರತಕ್ಕೆ ಚಿಂತೆಗೀಡು ಮಾಡಿದೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಲೀಗ್​ನಲ್ಲಿ ನಡೆಯುವ ಎಲ್ಲ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದರೆ, ಆಗ ಸೂಪರ್ ಫೋರ್ ಹಂತದಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಭಾರತ ಎದುರಿಸಬೇಕು. ಈ ಪಂದ್ಯ ಪಾಕ್​ನ ಲಾಹೋರ್​ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 6ಕ್ಕೆ ಈ ಪಂದ್ಯ ನಡೆಯಲಿದೆ. ಒಂದೊಮ್ಮೆ ಭಾರತ ಲೀಗ್​ನಲ್ಲಿ ಮೊದಲ ಸ್ಥಾನ ಪಡೆದರೆ ಪಾಕ್​ನಲ್ಲಿ ಪಂದ್ಯ ಆಡಲಿದೆಯಾ ಎನ್ನುವುದು ಇದೀಗ ಎಲ್ಲರ ಕುತೂಹಲವಾಗಿದೆ.

ಭಾರತದ ಸಾಧನೆ

1984 ಚಾಂಪಿಯನ್​
1988 ಚಾಂಪಿಯನ್
1991 ಚಾಂಪಿಯನ್
1995 ಚಾಂಪಿಯನ್
2010 ಚಾಂಪಿಯನ್
2016 ಚಾಂಪಿಯನ್
2018 ಚಾಂಪಿಯನ್
1986 ಪಾಲ್ಗೊಂಡಿಲ್ಲ
1997 ರನ್ನರ್ಸ್ ಅಪ್
2000 3ನೇ ಸ್ಥಾನ
2004 ರನ್ನರ್ಸ್ ಅಪ್
2008 ರನ್ನರ್ಸ್ ಅಪ್
2012 3ನೇ ಸ್ಥಾನ
2014 3ನೇ ಸ್ಥಾನ

Exit mobile version