Site icon Vistara News

Asia Cup 2023: ಆಗಸ್ಟ್​ 15ಕ್ಕೆ ಪ್ರಕಟಗೊಳ್ಳಲಿದೆ ಭಾರತ ತಂಡ; ಫೈನಲ್​ ಲಿಸ್ಟ್​​ ರೆಡಿ, ಯಾರಿಗೆಲ್ಲ ಅವಕಾಶ

team india

ಬೆಂಗಳೂರು: ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್​ ಮಾದರಿಯಲ್ಲಿ ನಡೆಯುವ ಏಷ್ಯಾಕಪ್​ ಟೂರ್ನಿಗೆ(Asia Cup 2023) ಈಗಾಗಲೇ ಆತಿಥೇಯ ಪಾಕ್​ ಮತ್ತು ಬಾಂಗ್ಲಾ ತಂಡಗಳು ಪ್ರಕಟಗೊಂಡಿದೆ. ಭಾರತ ತನ್ನ ತಂಡವನ್ನು(team india) ಆಗಸ್ಟ್​ 15ರಂದು(August 15)​ ಪ್ರಕಟಿಸಲಿದೆ ಎಂದು ಬಿಸಿಸಿಐ(BCCI) ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.

ಏಷ್ಯಾಕಪ್​ ಆಗಸ್ಟ್​ 31ರಿಂದ ಸೆಪ್ಟಂಬರ್​ 17ರ ತನಕ ನಡೆಯಲಿದೆ. ತಂಡ ಪ್ರಕಟಕ್ಕೆ ಆಗಸ್ಟ್​ 15 ಕೊನೆಯ ದಿನವಾಗಿದೆ. ಇದೇ ದಿನ ಜಸ್​ಪ್ರೀತ್​ ಬುಮ್ರಾ(Jasprit Bumrah) ಸಾರಥ್ಯದ ಭಾರತ ತಂಡ ಟ್ವಿ20 ಸರಣಿಯನ್ನಾಡಲು ಐರ್ಲೆಂಡ್​ಗೆ ತೆರಳಲಿದೆ. ಜತೆಗೆ ಸ್ವಾತಂತ್ರ್ಯದಿನವೂ ಆಗಿರುವುದರಿಂದ ಈ ಮಹತ್ವದ ದಿನದಂದು ಏಷ್ಯಾಕಪ್​ಗೆ ತಂಡ ಪ್ರಕಟಗೊಳ್ಳಲಿದೆ ಎನ್ನಲಾಗಿದೆ.

ಗೊಂದಲದಲ್ಲಿ ಆಯ್ಕೆ ಸಮಿತಿ

ಈ ಟೂರ್ನಿಗೆ ಯಾವ ಆಟಗಾರರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರದಲ್ಲಿ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಇನ್ನೂ ಕೂಡ ಗೊಂದಲದಲ್ಲಿದೆ. ಇದಕ್ಕೆ ಕಾರಣ ಕೆ.ಎಲ್​ ರಾಹುಲ್(KL Rahul)​ ಮತ್ತು ಶ್ರೇಯಸ್​ ಅಯ್ಯರ್(Shreyas Iyer)​ ಅವರ ಗಾಯದ ಸಮಸ್ಯೆ. ಸದ್ಯ ಉಭಯ ಆಟಗಾರರು ಬೆಂಗಳೂರಿನ ಎನ್​ಸಿಎಯಲ್ಲಿ ಪುನಶ್ಚೇತನ ಶಿಭಿರದಲ್ಲಿ ಪಾಲ್ಗೊಂಡು ಬ್ಯಾಟಿಂಗ್​ ಮತ್ತು ಫೀಲಿಂಡ್​ ಅಭ್ಯಾಸ ನಡೆಸುತ್ತಿದ್ದರೆ. ಆದರೆ ಅವರ ಫಿಟ್​ನೆಸ್​ಗೆ ಇನ್ನೂ ಕೆಲ ದಿನಗಳು ಬೇಕು ಎಂದು ಎನ್​ಸಿಎ ಅಧಿಕಾರಿಗಳು ಕಳೆದ ವಾರ ಹೇಳಿದ್ದರು. ಇದರಿಂದ ಈ ಇಬ್ಬರು ಆಟಗಾರರನ್ನು ಆಯ್ಕೆ ಮಾಡುವುದೋ ಅಥವಾ ಈ ಟೂರ್ನಿಯಿಂದ ಕೈಬಿಡಬೇಕೋ ಎನ್ನುವ ಗೊಂದಲದಲ್ಲಿದೆ.

ಬುಮ್ರಾ ಫಿಟ್​ನೆಸ್​ ಕೂಡ ಮುಖ್ಯ

ತೀವ್ರ ಸ್ವರೂಪದ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ 11 ತಿಂಗಳ ಬಳಿಕ ಕ್ರಿಕೆಟ್​ ಆಡಲು ಸಿದ್ಧರಾಗಿರುವ ಪ್ರಧಾನ ವೇಗು ಜಸ್​ಪ್ರೀತ್​ ಬುಮ್ರಾ ಅವರ ಪ್ರದರ್ಶನ ಮತ್ತು ಫಿಟ್​ನೆಸ್​ ಕೂಡ ಚಿಂತೆಗೀಡು ಮಾಡಿದೆ. ಐರ್ಲೆಂಡ್​ ಸರಣಿಯಲ್ಲಿ ಬುಮ್ರಾ ಆಡಲಿದ್ದರೂ ಇದಕ್ಕು ಮುನ್ನ ತಂಡ ಪ್ರಕಟಿಸಬೇಕಿದೆ. ಒಂದೊಮ್ಮೆ ಬುಮ್ರಾ ಅವರನ್ನು ಆಯ್ಕೆ ಮಾಡಿ ಅವರಿಗೆ ಐರ್ಲೆಂಡ್​ ವಿರುದ್ಧದ ಸರಣಿಯಲ್ಲಿ ಮತ್ತೆ ನೋವಿನ ಸಮಸ್ಯೆ ಕಂಡುಬಂದರೆ ಓರ್ವ ಆಟಗಾರ ಸೇವೆಯನ್ನೂ ಕಳೆದುಕೊಳ್ಳಬೇಕಿದೆ. ಒಟ್ಟಾರೆ ಆಯ್ಕೆ ಸಮಿತಿಗೆ ತಲೆನೋವೊಂದು ತಪ್ಪಿದ್ದಲ್ಲ.

ಇದನ್ನೂ ಓದಿ Asia Cup 2023 : ಏಷ್ಯಾ ಕಪ್​, ವಿಶ್ವ ಕಪ್​ನಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆಸಲಿದ್ದಾರೆ ಸ್ಟಾರ್ ಆಲ್​ರೌಂಡರ್​

ವಿಶ್ವಕಪ್​ಗೂ ಮುನ್ನ ಭಾರತಕ್ಕೆ ಅಗ್ನಿ ಪರೀಕ್ಷೆ

ಏಷ್ಯಾಕಪ್​ನಲ್ಲಿ 7 ಬಾರಿಯ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ 2023ರ ನಿರ್ಣಾಯಕ ವಿಶ್ವಕಪ್​ಗೆ ಮುಂಚಿತವಾಗಿ ನಡೆಯುವ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದ ಮೇಲೆ ವಿಶ್ವಕಪ್​ ಭವಿಷ್ಯ ನಿರ್ಧರವಾಗಲಿದೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್​​ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯೂ ಭಾರತ ತಂಡದ್ದಾಗಿದೆ. ಈ ಬಾರಿಯೂ ಗೆದ್ದರೆ ವಿಶ್ವ ಕಪ್​ನಲ್ಲಿ ಭಾರತ ತಂಡದ ಮೇಲೆ ನಿರಿಕ್ಷೆಯೊಂದನ್ನು ಮಾಡಬಹುದಾಗಿದೆ.

Exit mobile version