Site icon Vistara News

Asia Cup 2023: ಏಷ್ಯಾಕಪ್​ನಲ್ಲಿ ಒಂದು ಪಂದ್ಯವನ್ನು ಪಾಕ್​ನಲ್ಲೂ ಆಡಲಿದೆ ಭಾರತ ತಂಡ

A

ಬೆಂಗಳೂರು: ಪಾಕಿಸ್ತಾನದ ತಗಾದೆಯಿಂದ ವಿಳಂಬವಾಗುತ್ತಿದ್ದ ಏಷ್ಯಾ ಕಪ್‌ ಟೂರ್ನಿಯ ವೇಳಾಪಟ್ಟಿ (Asia Cup 2023) ಕೊನೆಗೂ ಬುಧವಾರ ಪ್ರಕಟಗೊಂಡಿತು. ಪ್ರತಿಷ್ಠಿತ ಈ ಕ್ರಿಕೆಟ್​ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಂದ್ಯಾವಳಿ ನಡೆಯಲಿದೆ. ಇಡೀ ಕ್ರಿಕೆಟ್‌ ಜಗತ್ತು ಬಹಳಾ ಕಾತರದಿಂದ ಎದುರು ನೋಡುತ್ತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈ-ವೋಲ್ಟೇಜ್ ಪಂದ್ಯ ಸೆಪ್ಟೆಂಬರ್‌ 2ರಂದು ಕ್ಯಾಂಡಿಯಲ್ಲಿ(Kandy) ನಡೆಯಲಿದೆ. ಅಚ್ಚರಿ ಎಂದರೆ ಈಗಿನ ವೇಳಾಪಟ್ಟಿಯ ಪ್ರಕಾರ ಭಾರತ ಒಂದು ಪಂದ್ಯವನ್ನಾಡಲು ಪಾಕ್​ಗೆ ತೆರಳಬೇಕಾದ ಅನಿವಾರ್ಯತೆ ಇದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭದ್ರತಾ ಕಾರಣದಿಂದ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿತ್ತು. ಇದೇ ವಿಚಾರವಾಗಿ ಪಾಕ್​ ಮತ್ತು ಬಿಸಿಸಿಐ ಕ್ರಿಕೆಟ್​ ಮಂಡಳಿ ಮಧ್ಯೆ ಕಿತ್ತಾಡ ನಡೆಯುತ್ತಲೇ ಇತ್ತು. ಅಂತಿಮವಾಗಿ ಟೂರ್ನಿಯನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ನಾಲ್ಕು ಪಂದ್ಯಗಳು ಪಾಕ್​ನಲ್ಲಿ ನಡೆಸಿ ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವ ನಿರ್ಧಾರ ಮಾಡಲಾಯಿತು. ಅದರಂತೆ ವೇಳಾಪಟ್ಟಿಯೂ ಪ್ರಕಟಗೊಂಡಿತು. ಆದರೆ ಇದೀಗ ವೇಳಾಪಟ್ಟಿಯಲ್ಲಿ ಸೂಪರ್​-4ನ ಒಂದು ಪಂದ್ಯ ಲಹೋರ್​ನಲ್ಲಿ ನಡೆಯಲಿದೆ. ಇದು ಭಾರತಕ್ಕೆ ಚಿಂತೆಗೀಡು ಮಾಡಿದೆ.

ಇದನ್ನೂ ಓದಿ Asia Cup 2023 : ಏಷ್ಯಾ ಕಪ್​ನಲ್ಲಿ ಭಾರತ ತಂಡದ ಪಂದ್ಯಗಳ ದಿನಾಂಕ, ಸಮಯ ಇನ್ನಿತರ ಮಾಹಿತಿ ಇಲ್ಲಿದೆ

ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಲೀಗ್​ನಲ್ಲಿ ನಡೆಯುವ ಎಲ್ಲ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದರೆ, ಆಗ ಸೂಪರ್ ಫೋರ್ ಹಂತದಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಭಾರತ ಎದುರಿಸಬೇಕು. ಈ ಪಂದ್ಯ ಪಾಕ್​ನ ಲಾಹೋರ್​ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 6ಕ್ಕೆ ಈ ಪಂದ್ಯ ನಡೆಯಲಿದೆ. ಒಂದೊಮ್ಮೆ ಭಾರತ ಲೀಗ್​ನಲ್ಲಿ ಮೊದಲ ಸ್ಥಾನ ಪಡೆದರೆ ಪಾಕ್​ನಲ್ಲಿ ಪಂದ್ಯ ಆಡಲಿದೆಯಾ ಎನ್ನುವುದು ಇದೀಗ ಎಲ್ಲರ ಕುತೂಹಲವಾಗಿದೆ.

ಭಾರತಕ್ಕೆ ಒಂದು ಉಪಾಯವಿದೆ

ಭಾರತ ತಂಡಕ್ಕೆ ಪಾಕ್​ಗೆ ಹೋಗದೇ ಇರಲು ಒಂದು ಉಪಾಯವಿದೆ. ಸೂಪರ್ ಫೋರ್ ಘಟ್ಟದಲ್ಲಿ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದರೆ, ಆಗ ಭಾರತ ಶ್ರೀಲಂಕಾದಲ್ಲಿ ಪಂದ್ಯವನ್ನು ಆಡಬಹುದಾಗಿದೆ. ಇದಕ್ಕೆ ಭಾರತ ಹಲವು ಲೆಕ್ಕಾಚಾರದ ಮೂಲಕ ಆಡಿ ಕೆಲ ಪಂದ್ಯಗಳನ್ನು ಸೋಲಬೇಕಿದೆ. ಈ ಒಂದು ಉಪಾಯದಿಂದ ಭಾರತ ಪಾಕ್​ಗೆ ಹೋಗುವುದನ್ನು ತಪ್ಪಿಸಬಹುದು. ಇದಲ್ಲೆ ಸದ್ಯ ಬೇರೆ ಯಾವುದೇ ದಾರಿ ಭಾರತದ ಮುಂದಿಲ್ಲ.

Exit mobile version