Site icon Vistara News

Asia Cup 2023: ಏಷ್ಯಾಕಪ್​ಗೂ ಮುನ್ನ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಅಯ್ಯರ್

shreyas iyer Practice Match In Bangalore

ಬೆಂಗಳೂರು: ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ ಭಾರತ ತಂಡದಿಂದ ಹೊರಗುಳಿದಿದ್ದ ಶ್ರೇಯಸ್​ ಅಯ್ಯರ್(Shreyas Iyer)​ ಅವರನ್ನು ಏಷ್ಯಾ ಕಪ್​ಗೆ(Asia Cup 2023) ಆಯ್ಕೆ ಮಾಡಿದ ಕುರಿತು ಅನೇಕ ಮಾಜಿ ಆಟಗಾರರು ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಗಾಯದಿಂದ ಚೇತರಿಕೊಂಡ ಅವರನ್ನು ಮಹತ್ವದ ಸರಣಿಯಲ್ಲಿ ಆಡಿಸುವುದು ಸರಯಲ್ಲ ಎಂದು ಹೇಳಿದ್ದರು. ಆದರೆ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಅಯ್ಯರ್​ ಮೇಲೆ ನಂಬಿಕೆ ಇರಿಸಿ 17 ಸದಸ್ಯರ ತಂಡದಲ್ಲಿ ಸ್ಥಾನ ನೀಡಿತ್ತು. ಇದೀಗ ಅಭ್ಯಾಸ ಪಂದ್ಯದಲ್ಲಿ(Practice Match In Bangalore) ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಫೋಟಕ ಬ್ಯಾಟಿಂಗ್​ ನಡೆಸಿದ ಅಯ್ಯರ್​

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(NCA)ಯಲ್ಲಿ ನಡೆಯುತ್ತಿರುವ ಆಟಗಾರರ ಫಿಟ್​ನೆಸ್​ ಶಿಬಿರದ ಭಾಗವಾಗಿ ಗುರುವಾರ ಅಭ್ಯಾಸ ಪಂದ್ಯವೊಂದನ್ನು ನಡೆಸಲಾಯಿತು. ಈ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಅಯ್ಯರ್​ ಬರೋಬ್ಬರಿ 199 ರನ್ ಬಾರಿಸಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಮೂಲಗಳು ತಿಳಿಸಿವೆ. 50 ಓವರ್​ ಪಂದ್ಯ ಇದಾಗಿತ್ತು.

ಶ್ರೇಯಸ್ ಅಯ್ಯರ್ ಅವರ ಈ ಪುನರಾಗಮನದ ಸುದ್ದಿ ಕೇಳಿ ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಏಷ್ಯಾಕಪ್​ಗೆ ಬಲಿಷ್ಠ ತಂಡ ಸಿದ್ಧವಾಗಿದೆ. ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ರಾಹುಲ್​ ಕೂಡ ಸಂಪೂರ್ಣ ಚೇತರಿಕೆ ಕಂಡು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯಲಿ ಎನ್ನುವುದು ರಾಹುಲ್​ ಅಭಿಮಾನಿಗಳ ಆಶಯವಾಗಿದೆ.

38 ಓವರ್​ ತನಕ್ ಬ್ಯಾಟಿಂಗ್​

ವರದಿಯ ಪ್ರಕಾರ ಗುರುವಾರ ನಡೆದ ಈ ಅಭ್ಯಾಸ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಒಟ್ಟು 38 ಓವರ್‌ಗಳವರೆಗೆ ಬ್ಯಾಟ್ ಬೀಸಿದ್ಮದಾರೆ ಎಂದು ತಿಳಿದುಬಂದಿದೆ. ಅಯ್ಯರ್​ ಅವರ ಈ ಕಮ್​ಬ್ಯಾಕ್​ ನಾಲ್ಕನೇ ಕ್ರಮಾಂಕದಲ್ಲಿದ್ದ ಕೊರತೆಯನ್ನು ನೀಗಿಸಿದಂತೆ ತೋರುತ್ತಿದೆ. ಆಗಸ್ಟ್ 29ರ ವರೆಗೆ ಶಿಬಿರ ನಡೆಯಲಿದ್ದು ಇದು ಮುಕ್ತಾಯ ಕಂಡ ಬೆನ್ನಲ್ಲೇ ಆಟಗಾರರು ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ. ಕೊಹ್ಲಿ ಇಂದು ಯೋ-ಯೋ ಟೆಸ್ಟ್​ಗೆ ಒಳಪಟ್ಟು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅವರು 17.02 ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ. ಈ ವಿಚಾರವನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ Asia Cup 2023: ಏಷ್ಯಾಕಪ್​ಗೆ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ

ಆರಂಭಿಕ ಸ್ಥಾನದ ಆಟಗಾರ ಆಯ್ಕೆಗೆ ಯಾವುದೇ ಗೊಂದಲವಿಲ್ಲ. ಈಗಾಗಲೇ ಯಶಸ್ಸು ಕಂಡಿರುವ ನಾಯಕ ರೋಹಿತ್​ ಮತ್ತು ಯುವ ಆಟಗಾರ ಶುಭಮನ್​ ಗಿಲ್​ ಇನಿಂಗ್ಸ್​ ಆರಂಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂರನೇ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ ಆಡಲಿದ್ದಾರೆ. ಇದೀಗ ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಅಯ್ಯರ್​ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಖಚಿತವಾಗಿದೆ.

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).  ​

Exit mobile version