ಹೊಸದಿಲ್ಲಿ: 2023ರ ಏಷ್ಯಾ ಕಪ್ (Asia Cup 2023) ಕ್ರಿಕೆಟ್ (Cricket series) ಪಂದ್ಯಾವಳಿಯ ಮೊದಲ ಎರಡು ಪಂದ್ಯಗಳಾದ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಪಂದ್ಯಗಳಿಗೆ ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಕೆಎಲ್ ರಾಹುಲ್ (KL Rahul) ಲಭ್ಯವಿರುವುದಿಲ್ಲ ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul dravid) ಹೇಳಿದ್ದಾರೆ.
ಅಂದರೆ, ಭಾರತ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ ರಾಹುಲ್ ಸೂಪರ್ 4 ಹಂತದಿಂದ ಲಭ್ಯವಿರುತ್ತಾರೆ. ಇಶಾನ್ ಕಿಶನ್ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ ಕೀಪರ್ ಕಂ ಬ್ಯಾಟರ್ ಆಗಿ ಆಡಲಿದ್ದಾರೆ. ಭಾರತವು ಸೆಪ್ಟೆಂಬರ್ 2ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಅದರ ನಂತರದ ಆಟ ನೇಪಾಳ ವಿರುದ್ಧ ಸೆಪ್ಟೆಂಬರ್ 4ರಂದು ನಡೆಯಲಿದೆ.
“ಕೆಎಲ್ ರಾಹುಲ್ ಆರೋಗ್ಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಆದರೆ ಏಷ್ಯಾ ಕಪ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಿರ್ಧಾರದಂತೆ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಭಾರತದ ಮೊದಲ ಎರಡು ಪಂದ್ಯಗಳಿಗೆ ಅವರು ಲಭ್ಯವಿರುವುದಿಲ್ಲ” ಎಂದು ಮುಖ್ಯ ಕೋಚ್ ದ್ರಾವಿಡ್ ಅವರನ್ನು ಉಲ್ಲೇಖಿಸಿ ಬಿಸಿಸಿಐ ಟ್ವೀಟ್ ಮಾಡಿದೆ.
ಮೊದಲೆರಡು ಪಂದ್ಯಗಳಿಗೆ ರಾಹುಲ್ ಲಭ್ಯತೆ ಬಗ್ಗೆ ಅನುಮಾನವಿತ್ತು. ಸುದೀರ್ಘ ಗಾಯದ ನಂತರ ಭಾರತ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ ಬಲಗೈ ಬ್ಯಾಟ್ಸ್‌ಮನ್ ರಾಹುಲ್. ಅವರ ತೊಡೆ ಮತ್ತು ಕಾಲಿಗೆ ಗಾಯವಾಗಿತ್ತು. ಬೆಂಗಳೂರಿನ ಆಲೂರಿನಲ್ಲಿ ನಡೆದ ಆರು ದಿನಗಳ ಫಿಟ್‌ನೆಸ್ ಮತ್ತು ವೈದ್ಯಕೀಯ ಶಿಬಿರದಲ್ಲಿ ಏಷ್ಯಾಕಪ್‌ನ ಇತರ ಆಟಗಾರರೊಂದಿಗೆ ರಾಹುಲ್ ಭಾಗವಹಿಸಿದ್ದರು.
ಇದನ್ನೂ ಓದಿ: Asia Cup 2023 : ಟೀಮ್ ಇಂಡಿಯಾದ ಭಯ; ಏಕಾಏಕಿ ತಂಡವನ್ನು ಬದಲಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ