Site icon Vistara News

Asia Cup 2023: ಲಂಕಾ-ಬಾಂಗ್ಲಾ ಮುಖಾಮುಖಿ; ಉಭಯ ತಂಡಗಳಿಗೂ ಗಾಯದ್ದೇ ಚಿಂತೆ

Bangladesh vs Sri Lanka, 2nd Match

ಪಲ್ಲೆಕೆಲೆ: ಏಷ್ಯಾಕಪ್​ನ(Asia Cup 2023) ಗುರುವಾರದ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ(Bangladesh vs Sri Lanka, 2nd Match) ತಂಡಗಳು ಮುಖಾಮುಖಿಯಾಗಲಿದೆ. ಆದರೆ ಇತ್ತಂಡಗಳಿಗೂ ಗಾಯದ್ದೇ ಚಿಂತೆಯಾಗಿದೆ. ಸ್ಟಾರ್​ ಆಟಗಾರರೆಲ್ಲ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದಾರೆ. ಯುವ ಪಡೆಯನ್ನೇ ನೆಚ್ಚಿಕೊಂಡಿರುವ ಉಭಯ ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯ ಲಂಕಾದ ಪಲ್ಲೆಕೆಲೆಯಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​ ಆಗಿರುವ ಲಂಕಾ ತವರಿನ ಲಾಭ ಪಡೆದು ಗೆಲುವಿನ ಖಾತೆ ತೆರೆದೀತೇ ಎಂಬುದು ಈ ಪಂದ್ಯದ ಕುತೂಹಲ.

ಬಾಂಗ್ಲಾಗೆ ಗಾಯದ ಬರೆ

ತಮಿಮ್‌ ಇಕ್ಬಾಲ್‌, ಇಬಾದತ್‌ ಹುಸೇನ್‌ ಅಲಭ್ಯತೆಯ ಮಧ್ಯೆ ಪಂದ್ಯ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗ ಅನುಭವಿ ಆಟಗಾರ ಲಿಟ್ಟನ್​ ದಾಸ್​ ಅವರು ವೈರಲ್​ ಜ್ವರದಿಂದ ಗುಣಮುಖರಾಗದೆ ಟೂರ್ನಿಯಿಂದ ಹೊರಬಿದ್ದಿರುದು ಬಾಂಗ್ಲಾಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಮೊದಲ ಸಲ ಚಾಂಪಿಯನ್‌ ಆಗುವ ಬಾಂಗ್ಲಾ ಕನಸಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಹಿರಿಯ ಆಲ್​ರೌಂಡರ್​ ಶಕೀಬ್‌ ಅಲ್‌ ಹಸನ್‌ 6 ವರ್ಷಗಳ ಬಳಿಕ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ಅನುಭವ ತಂಡದ ಗೆಲುವಿಗೆ ಸಹಕರಿಸಲಿದೆಯಾ ಎಂದು ಕಾದು ನೋಡಬೇಕಿದೆ.

ಲಂಕಾ ತಂಡಕ್ಕೂ ಗಾಯದ್ದೇ ಚಿಂತೆ

ತಂಡದ ಸ್ಟಾರ್​ ಆಟಗಾರರಾದ ದುಷ್ಮಂತ ಚಮೀರ, ವನಿಂದು ಹಸರಂಗ, ಲಹಿರು ಕುಮಾರ, ದಿಲ್ಶನ್‌ ಮಧುಶಂಕ ಗಾಯಾಳಾಗಿ ಬೇರ್ಪಟ್ಟಿರುವ ಕಾರಣ ಶ್ರೀಲಂಕಾ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿಲ್ಲ. ಹೀಗಾಗಿ ಈ ಬಾರಿ ಕಪ್​ ಉಳಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ. ಕೀಪರ್‌ ಕುಸಲ್‌ ಪೆರೆರ ಕೊರೊನಾ ಕ್ವಾರಂಟೈನ್‌ನಲ್ಲಿದ್ದಾರೆ. ಒಟ್ಟಾರೆ ಬಾಂಗ್ಲಾ ತಂಡದಂತೆ ಲಂಕಾಗೂ ಗಾಯದ್ದೇ ಚಿಂತೆಯಾಗಿದೆ.

ಇದನ್ನೂ ಓದಿ Asia Cup 2023: ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ಬಾಂಗ್ಲಾ ತಂಡಕ್ಕೆ ಆಘಾತ; ಸ್ಟಾರ್​ ಆಟಗಾರ ಟೂರ್ನಿಯಿಂದ ಔಟ್​

ಶ್ರೀಲಂಕಾ ತಂಡ

ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.

ಬಾಂಗ್ಲಾದೇಶ ತಂಡ

ಶಾಕಿಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್ ಬಿಜಾಯ್, ನಜ್ಮುಲ್ ಹೊಸೈನ್ ಶಾಂಟೊ, ತೌಹೀದ್ ಹೃದಯೋಯ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್ ಧ್ರುಬೋ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರಹಮಾನ್, ಶೋರ್ಫುಲ್ ಇಸ್ಲಾಂ, ಶಾರ್ಫುಲ್ ಇಸ್ಲಾಂ, ನಸುಮ್. ನಯೀಮ್ ಶೇಖ್, ಶಮೀಮ್ ಹುಸೇನ್, ತಂಜೀದ್ ಹಸನ್ ತಮೀಮ್, ತಂಜಿಮ್ ಹಸನ್ ಸಾಕಿಬ್.

Exit mobile version