Site icon Vistara News

Asia Cup 2023: ಏಷ್ಯಾಕಪ್​ನಿಂದ ಚಹಲ್​ ಕೈಬಿಟ್ಟಿರುವುದು ನಿರಾಶಾದಾಯಕ; ಎಬಿಡಿ

yajurveda chahal and Ab de Villiers

ಬೆಂಗಳೂರು: ಆಗಸ್ಟ್​ 30ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯುವ ಹೈಬ್ರಿಡ್​ ಮಾದರಿಯ ಏಷ್ಯಾಕಪ್​ ಟೂರ್ನಿಗೆ(Asia Cup 2023) ಭಾರತ ತಂಡದಿಂದ ಯುಜವೇಂದ್ರ ಚಹಲ್(yajurveda chahal) ಅವರನ್ನು ಕೈಬಿಟ್ಟಿರುವುದು ನಿರಾಶಾದಾಯಕವಾಗಿದೆ ಎಂದು ಎಬಿ ಡಿ ವಿಲಿಯರ್ಸ್(Ab de Villiers)​ ಹೇಳಿದ್ದಾರೆ.

ಏಷ್ಯಾಕಪ್​ ವಿಚಾರದ ಸಂದರ್ಶನವೊಂದರಲ್ಲಿ ಮಾತನಾಡಿದ ಎಬಿಡಿ, ಚಹಲ್ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಅವರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ತಂದಿದೆ. ಇದು ಕೇವಲ ನನಗೆ ಮಾತ್ರವಲ್ಲ ಅನೇಕರಿಗೆ ಆಶ್ಚರ್ಯವನ್ನುಂಟುಮಾಡಿದೆ. ಚಹಲ್ ಅತ್ಯಂತ ಸೂಕ್ತ ಬೌಲರ್. ಈ ಬಾರಿಯ ಐಪಿಎಲ್​ನಲ್ಲಿಯೂ ಅವರು ಉತ್ತಮ ವಿಕೆಟ್​ ಟೇಕಿಂಗ್​ ಮಾಡಿದ್ದರು. ಅವರು ತಂಡದಲ್ಲಿ ಇರುತ್ತಿದ್ದರೆ. ಭಾರತಕ್ಕೆ ಹೆಚ್ಚಿನ ಲಾಭವಿತ್ತು” ಎಂದು ಎಬಿಡಿ ಹೇಳಿದರು.

ಉತ್ತಮ ಬ್ಯಾಟಿಂಗ್​ ಸರದಿ

ಭಾರತದ ಬ್ಯಾಟಿಂಗ್​ ಸರದಿ ಉತ್ತಮವಾಗಿದೆ. ನಾಯಕ ರೋಹಿತ್​ ಶರ್ಮ, ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಗಾಯದಿಂದ ಚೇತರಿಕೆ ಕಂಡು ತಂಡ ಸೇರಿರುವ ರಾಹುಲ್​, ಅಯ್ಯರ್​ ಅವರನ್ನೊಳಗೊಂಡ ಭಾರತ ಬಲಿಷ್ಠವಾಗಿದೆ. ಇನ್ನೊಂದೆಡೆ ಜಸ್​ಪ್ರೀತ್​ ಬುಮ್ರಾ ಪುನರಾಗಮನ ಕೂಡ ತಂಡಕ್ಕೆ ಆನೆ ಬಲ ಬಂದಂತಾಗಿದೆ ಎಂದು ಎಬಿಡಿ ಹೇಳಿದರು.

ತಂಡದ ಸಮತೋಲನ ಮುಖ್ಯ

ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ಅವರು ಚಹಲ್​ ಅವರನ್ನು ಕೈ ಬಿಟ್ಟ ವಿಚಾರವಾಗಿ ಸ್ಪಷ್ಟನೆ ನೀಡಿದ್ದರು. ‘ನಮಗೆ ಒಬ್ಬ ಮಣಿಕಟ್ಟಿನ ಸ್ಪಿನ್ನರ್‌ (Wrist Spinner) ಆಯ್ಕೆಗೆ ಮಾತ್ರ ಅವಕಾಶವಿತ್ತು. ಹೀಗಾಗಿ ಎಡಗೈ ಸ್ಪಿನ್ನರ್​ ಆಗಿರುವ ಚೈನಾಮನ್​ ಖ್ಯಾತಿಯ ಕುಲ್​ದೀಪ್​ ಯಾದವ್​ ಅವರನ್ನು ಆಯ್ಕೆ ಮಾಡಿದ್ದೇವೆ. ಕಳೆದ ವಿಂಡೀಸ್​ ಸರಣಿಯಲ್ಲಿಯೂ ಕುಲ್​ದೀಪ್​ ಶ್ರೇಷ್ಠ ಪ್ರದರ್ಶನ ತೋರಿದ್ದರು. ಚಹಲ್​ ಅದ್ಭುತ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಲವಾರು ಪಂದ್ಯಗಳಲ್ಲಿ ಅವರು ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ನಾವು ತಂಡದ ಸಮತೋಲನವನ್ನು ಮಾಡಬೇಕಾದ ನಿಟ್ಟಿನಲ್ಲಿ ಇಬ್ಬರು ಮಣಿಕಟ್ಟಿನ ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿತ್ತು. ಹೀಗಾಗಿ ಚಹಲ್​ರನ್ನು ಕೈಬಿಡಲಾಯಿತು ಎಂದು ಹೇಳಿದ್ದರು.

ಇದನ್ನೂ ಓದಿ Asia Cup 2023: ಏಷ್ಯಾಕಪ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಟಾಪ್‌ 5 ಭಾರತೀಯ ಆಟಗಾರರು

ಒಂದೇ ಗುಂಪಿನಲ್ಲಿ ಭಾರತ-ಪಾಕ್​

ಏಷ್ಯಾಕಪ್​ ಟೂರ್ನಿ ಆಗಸ್ಟ್​ 30(asia cup 2023 schedule) ರಿಂದ ಆರಂಭವಾಗಲಿದೆ. ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್‌ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ(asia cup ind vs pak) ಸೆಪ್ಟಂಬರ್​ 2 ರಂದು ಲಂಕಾದ ಕ್ಯಾಂಡಿಯಲ್ಲಿ ಸೆಣಸಾಟ ನಡೆಸಲಿದೆ.

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

Exit mobile version