Site icon Vistara News

Asia Cup: ಮಾರ್ಗದರ್ಶನ ಕೊರತೆಯಿಂದ ಸೋಲು ಕಂಡ ಅಫಘಾನಿಸ್ತಾನ

Rashid Khan sinks to his knees after Afghanistan crashed out of the Asia Cup

ಲಾಹೋರ್​: ಮಂಗಳವಾರ ನಡೆದ ಶ್ರೀಲಂಕಾ(Afghanistan vs Sri Lanka) ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿಯೂ 2 ರನ್‌ ಅಂತರದ ಸೋಲು ಕಾಣುವ ಮೂಲಕ ಅಫಘಾನಿಸ್ತಾನ ಏಷ್ಯಾಕಪ್‌(Asia Cup 2023) ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಈ ಸೋಲಿಗೆ ತಂಡದ ತರಬೇತುದಾರರು ಸರಿಯಾದ ಮಾರ್ಗದರ್ಶನ ನೀಡದ್ದೇ ಪ್ರಮುಖ ಕಾರಣ ಎಂದು ಅಫ್ಘಾನ್​ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಲಾಹೋರ್‌ನಲ್ಲಿ(Gaddafi Stadium, Lahore) ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 8 ವಿಕೆಟಿಗೆ 291 ರನ್‌ ಗಳಿಸಿತು. ಸೂಪರ್​ 4 ಪ್ರವೇಶ ಪಡೆಯಬೇಕಾದರೆ ಅಫಘಾನಿಸ್ತಾನ ತಂಡ ಈ ಮೊತ್ತವನ್ನು 37.1 ಓವರ್‌ಗಳಲ್ಲಿ ಬಾರಿಸಬೇಕಿತ್ತು. ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಅಫಘಾನಿಸ್ತಾ ಪಡೆ 37.4 ಓವರ್‌ಗಳಲ್ಲಿ 289ರನ್​ ಗಳಿಸಿ ಆಲೌಟ್‌ ಆಯಿತು. 2 ರನ್​ ಅಂತರದಿಂದ ಗೆದ್ದ ಲಂಕಾ ಸೂಪರ್​​-4 ಟಿಕೆಟ್​ ಪಡೆಯಿತು.

ಪಂದ್ಯ ಗೆಲ್ಲುವ ಅವಕಾಶ ಅಫಘಾನಿಸ್ತಾನಕ್ಕೆ ಇತ್ತು. ಇದು ಸೂಪರ್​ 4 ಲೆಕ್ಕಾಚಾರದಲ್ಲೇ ಬ್ಯಾಟ್​ ಬೀಸಿದ ಕಾರಣ ಅಂತಿಮ ಹಂತದಲ್ಲಿ ವಿಕೆಟ್​ ಕೈಚೆಲ್ಲಿ ಸೋಲು ಕಾಣುವಂತಾಯಿತು. ಅಂತಿಮವಾಗಿ 36ನೇ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಸಿಡಿಸಿದ ರಶೀದ್ ಖಾನ್ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಡುವ ಸೂಚನೆ ನೀಡಿದರು. ಆದರೆ ಮುಂದಿನ ಓವರ್​ನಲ್ಲಿ 2 ವಿಕೆಟ್​ ಬಿದ್ದ ಕಾರಣ ಅಫಫಾನಿಸ್ತಾನ ಆಲೌಟ್​ ಆಯಿತು.

ಸೂಪರ್​ 4 ಪ್ರವೇಶಕ್ಕೆ ಒಂದು ಎಸೆತದಲ್ಲಿ ಮೂರು ರನ್​ ಬೇಕಿದ್ದಾಗ ವಿಕೆಟ್​ ಕೈಚೆಲ್ಲಿದರೂ ಮುಂದಿನ ಎಸೆತದಲ್ಲಿ ಸಿಕ್ಸರ್​ ಬಾರಿಸಿದರೆ ಅಫಘಾನಿಸ್ತಾನ ಸೂಪರ್​4 ಪ್ರವೇಶ ಪಡೆಯಬಹುದಿತ್ತು. ಆದರೆ ಈ ವಿಚಾರ ಅಘಫಾನಿಸ್ತಾನ ಆಟಗಾರರಿಗೆ ತಿಳಿದೆ ಇರಲಿಲ್ಲ. ಹೀಗಾಗಿ ಸ್ಟ್ರೈಕ್​ನಲ್ಲಿದ್ದ ಫಾರೂಕಿ ತಂಡ ಹೇಗೂ ಹೊರಬಿದ್ದಿದೆ ಎಂದು ರನ್​ ಗಳಿಸುವ ಪ್ರಯತ್ನವೇ ಮಾಡಲಿಲ್ಲ. ಆದರೆ ದೊಡ್ಡ ಪರೆದೆಯಲ್ಲಿ ಸಿಕ್ಸರ್​ ಬಾರಿಸಿದರೆ ಸೂಪರ್​-4 ಅವಕಾಶವಿತ್ತು ಎಂದು ತಿಳಿದಾಗ ಅಫಘಾನಿಸ್ತಾನ ಆಟಗಾರರು ಬೇಸರಗೊಂಡರು. ಮಾರ್ಗದರ್ಶಕರಿಂದ ಈ ವಿಚಾರ ಗಮನಕ್ಕೆ ಬರುತ್ತಿದ್ದರೆ ಸಿಕ್ಸರ್​ ಬಾರಿಸುವ ಪ್ರಯತ್ನ ಮಾಡಬಹುದಿತ್ತು ಎಂದು ಕೊರಗಿದರು.

ಇದನ್ನೂ ಓದಿ Asia Cup 2023: ಇಂದಿನಿಂದ ಏಷ್ಯಾಕಪ್​ ಸೂಪರ್​-4 ಕದನ; ಪಾಕ್​ಗೆ ಬಾಂಗ್ಲಾ ಸವಾಲು

NRR ಲೆಕ್ಕಾಚಾರಗಳನ್ನು ಸಾಮಾನ್ಯವಾಗಿ ತಂಡದ ವಿಶ್ಲೇಷಕರಿಂದ ಮಾಡಲಾಗುತ್ತದೆ ಆದರೆ ಅಫಫ್ಘಾನಿಸ್ತಾನದ ವಿಚಾರದಲ್ಲಿ ಇದು ಕೈಕೊಟ್ಟಿತು. ಇದೇ ವಿಚಾರವಾಗಿ ತಂಡದ ತರಬೇತುದಾರ ಜೊನಾಥನ್ ಟ್ರಾಟ್ ಅರ್ಹತಾ ಸನ್ನಿವೇಶದ ಪ್ರಮಾದದ ಬಗ್ಗೆ ಪಂದ್ಯದ ಅಧಿಕಾರಿಗಳು ಉತ್ತಮವಾದ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.

ಲಂಕಾ ಪರ ಕಸುನ್ ರಜಿತ 4 ವಿಕೆಟ್​ ಪಡದರೆ, ದುನಿತ್ ವೆಲ್ಲಲಾಗೆ ಮತ್ತು ಧನಂಜಯ ಡಿ ಸಿಲ್ವಾ ತಲಾ 2 ವಿಕೆಟ್​ ಕಬಳಿಸಿದರು. ಮತೀಶ ಪತಿರಣ ಮತ್ತು ಮಹೀಶ್ ತೀಕ್ಷಣ ತಲಾ ಒಂದು ವಿಕೆಟ್​ ಉರುಳಿಸಿದರು. ಅಫಘಾನಿಸ್ತಾನದ ಹಿರಿಯ ಅನುಭವಿ ಆಲ್​ರೌಂಡರ್ ಮೊಹಮ್ಮದ್​​ ನಬಿ ಲಂಕಾ ಬೌಲರ್​ಗಳನ್ನು ಸರಿಯಾಗಿ ದಂಡಿಸಿ ಕೇವಲ 32 ಎಸೆತ​ ಎದುರಿಸಿ 5 ಸಿಕ್ಸರ್​​ ಮತ್ತು 6 ಬೌಂಡರಿ ನೆರವಿನಿಂದ 65 ರನ್​ ಬಾರಿಸಿದರು.

Exit mobile version