Site icon Vistara News

Asia Cup: ಏಷ್ಯಾ ಕಪ್​ಗೆ ಇಂದು ಭಾರತ ತಂಡ ಪ್ರಕಟ; ಸ್ಟಾರ್​ ಆಟಗಾರರ ಕಮ್​ಬ್ಯಾಕ್​

indian cricket players

ಬೆಂಗಳೂರು: ಏಷ್ಯಾಕ್​ ಟೂರ್ನಿ(Asia Cup 2023) ಆರಂಭಕ್ಕೆ ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿದೆ. ಆಗಸ್ಟ್​ 31ರಿಂದ ಸೆಪ್ಟಂಬರ್​ 17ರ ತನಕ ನಡೆಯಲಿದೆ. ಈ ಮಹತ್ವದ ಕೂಟಕ್ಕೆ ಇಂದು(ಮಂಗಳವಾರ) ಭಾರತ ತಂಡ(team india) ಪ್ರಕಟಗೊಳ್ಳಲಿದೆ ಎಂದು ಬಿಸಿಸಿಐ(BCCI) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದಲ್ಲದೆ ತಂಡ ಪ್ರಕಟಕ್ಕೂ ಇಂದು ಅಂತಿಮ ದಿನವಾಗಿದೆ.

ಈಗಾಗಲೇ ಈ ಟೂರ್ನಿಯ ಆತಿಥೇಯ ಪಾಕಿಸ್ತಾನ ಸೇರಿ ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸಾಂಪ್ರದಾಯಿಯ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕ್​ ನಡುವಣ ಪಂದ್ಯ ಸೆಪ್ಟಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. 50 ಓವರ್​ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

ರಾಹುಲ್​-ಅಯ್ಯರ್​ ಕಮ್​ಬ್ಯಾಕ್​

ಸೋಮವಾರವಷ್ಟೇ ಬೆಂಗಳೂರಿನ ಎನ್​ಸಿಎಯಲ್ಲಿ ದೀರ್ಘ ಕಾಲ ಬ್ಯಾಟಿಂಗ್​ ಅಭ್ಯಾಸ ನಡೆಸಿರುವ ಕೆ.ಎಲ್​ ರಾಹುಲ್​(KL Rahul)​ ಮತ್ತು ಶ್ರೇಯಸ್​ ಅಯ್ಯರ್(Shreyas Iyer)​ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಉಭಯ ಆಟಗಾರರು ಸಂಪೂರ್ಣ ಫಿಟ್​ ಆಗಿಲ್ಲ ಎಂದು ಹೇಳಲಾಗಿತ್ತು. ಆದರೆ ಸೋಮವಾರ ಇವರಿಬ್ಬರ ಬ್ಯಾಟಿಂಗ್​ ಅಭ್ಯಾಸ ಕಂಡ ಆಯ್ಕೆ ಸಮಿತಿ ತೃಪ್ತಿಗೊಂಡಿದೆ ಎನ್ನಲಾಗಿದೆ. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡುವುದು ಖಚಿತವಾಗಿದೆ.

ತಿಲಕ್​ ವರ್ಮಾ ಆಯ್ಕೆ ಸಾಧ್ಯತೆ

ವಿಂಡೀಸ್​ ವಿರುದ್ಧ ಆಡಿದ ಟಿ20 ಸರಣಿಯಲ್ಲಿ ಗಮನಾರ್ಹ ಬ್ಯಾಟಿಂಗ್​ ಪ್ರದರ್ಶನ ತೋರಿದ ತಿಲಕ್​ ವರ್ಮಾ ಅವರ ಮೇಲೂ ಆಯ್ಕೆ ಸಮಿತಿಯೊಂದು ಕಣ್ಣಿಟ್ಟಿದೆ. ಕೋಚ್​ ರಾಹುಲ್​ ದ್ರಾವಿಡ್​ ಕೂಡ ತಿಲಕ್​ ವರ್ಮ(tilak varma) ಅವರನ್ನು ಏಷ್ಯಾಕಪ್​ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯೂ ದಟ್ಟವಾಗಿದೆ. ಈ ಮೂಲಕ ವಿಶ್ವಕಪ್​ಗೂ ಮುನ್ನ ಪ್ರಯೋಗವೊಂದನ್ನು ನಡೆಸಲು ಆಯ್ಕೆ ಸಮಿತಿ ಮುಂದಾಗಿದೆ.

ಇದನ್ನೂ ಓದಿ Asia Cup 2023 : ಏಷ್ಯಾ ಕಪ್ ಆಡುವ ನೇಪಾಳ ಕ್ರಿಕೆಟ್​ ತಂಡಕ್ಕೂ ರೋಹಿತ್ ನಾಯಕ!

ಬುಮ್ರಾ ಫಿಟ್​ನೆಸ್​

ತೀವ್ರ ಸ್ವರೂಪದ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ 11 ತಿಂಗಳ ಬಳಿಕ ಕ್ರಿಕೆಟ್​ ಆಡಲು ಸಿದ್ಧರಾಗಿರುವ ಪ್ರಧಾನ ವೇಗು ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರ ಪ್ರದರ್ಶನ ಮತ್ತು ಫಿಟ್​ನೆಸ್​ ಕೂಡ ಚಿಂತೆಗೀಡು ಮಾಡಿದೆ. ಐರ್ಲೆಂಡ್​ ಸರಣಿಯಲ್ಲಿ ಬುಮ್ರಾ ಆಡಲಿದ್ದರೂ ಇದಕ್ಕು ಮುನ್ನ ತಂಡ ಪ್ರಕಟಿಸಬೇಕಿದೆ. ಒಂದೊಮ್ಮೆ ಬುಮ್ರಾ ಅವರನ್ನು ಆಯ್ಕೆ ಮಾಡಿ ಅವರಿಗೆ ಐರ್ಲೆಂಡ್​ ವಿರುದ್ಧದ ಸರಣಿಯಲ್ಲಿ ಮತ್ತೆ ನೋವಿನ ಸಮಸ್ಯೆ ಕಂಡುಬಂದರೆ ಓರ್ವ ಆಟಗಾರ ಸೇವೆಯನ್ನೂ ಕಳೆದುಕೊಳ್ಳಬೇಕಿದೆ. ಒಟ್ಟಾರೆ ಆಯ್ಕೆ ಸಮಿತಿಗೆ ತಲೆನೋವೊಂದು ತಪ್ಪಿದ್ದಲ್ಲ.

ಭಾರತ ತಂಡಕ್ಕೆ 2023ರ ನಿರ್ಣಾಯಕ ವಿಶ್ವಕಪ್​ಗೆ ಮುಂಚಿತವಾಗಿ ನಡೆಯುವ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದ ಮೇಲೆ ವಿಶ್ವಕಪ್​ ಭವಿಷ್ಯ ನಿರ್ಧರವಾಗಲಿದೆ.ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್​​ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.

Exit mobile version