ಮುಂಬಯಿ: ಅಜಿತ್ ಅಗರ್ಕರ್(Ajit Agarkar) ನೇತೃತ್ವದ ಭಾರತೀಯ ಆಯ್ಕೆ ಸಮಿತಿ ಸೋಮವಾರ ಏಷ್ಯಾಕಪ್‌ಗೆ(Asia Cup) 17 ಸದಸ್ಯರ ಭಾರತ ತಂಡವನ್ನು(17-member squad) ಆಯ್ಕೆ ಮಾಡುವ ಸಾಧ್ಯತೆಯಿದೆ. ಆಗಸ್ಟ್ 27 ತಂಡ ಪ್ರಕಟಕ್ಕೆ ಅಂತಿಮ ದಿನವಾಗಿದೆ. ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡವನ್ನು ಪ್ರಕಟಿಸಿದೆ. ಆದರೆ ಬಿಸಿಸಿಐ(BCCI) ಮಾತ್ರ ಶ್ರೇಯಸ್ ಅಯ್ಯರ್(Shreyas Iyer) ಹಾಗೂ ಕೆ.ಎಲ್ ರಾಹುಲ್(KL Rahul) ಅವರ ಫಿಟ್ನೆಸ್ ವರದಿಗಾಗಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿತ್ತು. ಇದೀಗ ಸೋಮವಾರ ಪ್ರಕಟಗೊಳ್ಳುವ ಸಂಭಾವ್ಯ ಆಟಗಾರರ ಪಟ್ಟಿಯೊಂದು ಸೋರಿಕೆಯಾಗಿದೆ.
ಬಿಸಿಸಿಐ ಮೂಲಗಳಿಂದ ಬಂದ ವರದಿಯ ಪ್ರಕಾರ 17 ಸದಸ್ಯರ ಪಟ್ಟಿ ಅಂತಿಮಗೊಂಡಿದ್ದು ಇದೇ ತಂಡ ವಿಶ್ವಕಪ್ ಟೂರ್ನಿಗೂ ಮುಂದುವರಿಯಲಿದೆ ಎನ್ನಲಾಗಿದೆ. 17 ಸದಸ್ಯರ ಸಂಭಾವ್ಯ ತಂಡದಲ್ಲಿ ನಿರೀಕ್ಷೆಯಂತೆ ಶ್ರೇಯಸ್ ಅಯ್ಯರ್ ಮತ್ತು ಮತ್ತು ರಾಹುಲ್ ಅವರ ಹೆಸರು ಕಂಡುಬಂದಿದೆ. ರಾಹುಲ್ ಮತ್ತು ಅಯ್ಯರ್ ಅವರ ಫಿಟ್ನೆಸ್ ವರದಿ ಬುಧವಾರ ಎನ್ಸಿಎ ಬಿಸಿಸಿಐಗೆ ಒಪ್ಪಿಸಿತ್ತು. ಹೀಗಾಗಿ ಉಭಯ ಆಟಗಾರರು ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅಚ್ಚರಿ ಎಂದರೆ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಹಲ್ ಹೆಸರು ಮಾಯವಾಗಿದೆ.
ಸ್ಥಾನ ಪಡೆದ ತಿಲಕ್ ವರ್ಮಾ
ವಿಂಡೀಸ್ ವಿರುದ್ಧ ಆಡಿದ ಟಿ20 ಸರಣಿಯಲ್ಲಿ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ತೋರಿದ ತಿಲಕ್ ವರ್ಮಾ(Tilak Varma) ಅವರು ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ವಿಂಡೀಸ್ ಸರಣಿಯಲ್ಲಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿ ಪ್ರಯೋಗ ನಡೆಸಿದ್ದರು. ಅಯ್ಯರ್ ಅಲಭ್ಯರಾದರೆ ಅವರ ಸ್ಥಾನಕ್ಕೆ ತಿಲಕ್ ಆಯ್ಕೆಯಾಗಿದ್ದಾರೆ. ಆದರೆ ಬಿಸಿಸಿಐ ಈ ಪಟ್ಟಿಯನ್ನು ಅಧಿಕೃತಗೊಳಿಸದಿದ್ದರೂ ಸದ್ಯ ಬಿಸಿಸಿಐ ಮೂಲಗಳಿಂದ ತಿಳಿದು ಬಂದಿರುವ ಸಂಭಾವ್ಯ 17 ಆಟಗಾರರ ಪಟ್ಟಿ ಇಲ್ಲಿದೆ.
ಬಿಸಿಸಿಐ ಮೂಲಗಳ ಸಂಭಾವ್ಯ 17 ಸದಸ್ಯರ ತಂಡ
ರೋಹಿತ್ ಶರ್ಮ (ನಾಯಕ), ಕೆ.ಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ,ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್ (ವಿಕೆಟ್ ಕೀಪರ್),ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಸೂರ್ಯಕುಮಾರ್ ಯಾದವ್,ತಿಲಕ್ ವರ್ಮಾ, ರವಿಚಂದ್ರನ್ ಅಶ್ವಿನ್.
ಇದನ್ನೂ ಓದಿ Asia Cup: ಸ್ಟಾರ್ ಆಟಗಾರರನ್ನು ಹೊರಗಿಟ್ಟು ಏಷ್ಯಾ ಕಪ್‌ಗೆ ತಂಡ ಪ್ರಕಟಿಸಿದ ರವಿಶ್ರಾಸ್ತ್ರಿ
ಜಯ್ ಶಾಗೆ ಪಾಕ್ ಆಮಂತ್ರಣ
ಜಯ್ ಶಾ ಅವರಿಗೆ ಏಷ್ಯಾ ಕಪ್ ಟೂರ್ನಿಯ ಸಲುವಾಗಿ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನ ಕಳುಹಿಸಲಾಗಿದೆ. ಏಕೆಂದರೆ ಅವರು ಏಷ್ಯನ್ ಕ್ರಿಕೆಟ್ ಕೌನಿಲ್ಸ್ನ ಅಧ್ಯಕ್ಷರಾಗಿದ್ದಾರೆ. ನಮ್ಮ ಆಹ್ವಾನದಂತೆ ಜೈ ಶಾ ಪಾಕ್ಗೆ ಬರುವು ನಿರೀಕ್ಷೆ ಇದೆ” ಎಂದು ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ತಿಳಿಸಿದ್ದಾರೆ. ಈ ಹಿಂದೆ ಡರ್ಬನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಜಯ್ ಶಾ ಮತ್ತು ಝಾಕಾ ಅಶ್ರಫ್ ಭೇಟಿಯಾಗಿದ್ದರು. ಇಲ್ಲಿ ಅಶ್ರಫ್ ಅವರು ಜಯ್ ಶಾಗೆ ಮೌಖಿಕವಾಗಿ ಪಾಕ್ಗೆ ಬರುವಂತೆ ಕರೆದಿದ್ದರು. ಆದರೆ ಈಗ ಔಪಚಾರಿಕವಾಗಿ ಆಹ್ವಾನವನ್ನು ಕಳುಹಿಸಲಾಗಿದೆ ಎಂದು ಪಿಸಿಬಿ ಮೂಲಗಳು ಮಾಹಿತಿ ನೀಡಿದೆ. ಆದರೆ ಜಯ್ ಶಾ ಅವರು ಪಾಕಿಸ್ತಾನಕ್ಕೆ ತೆರಳಲಿದ್ದಾರಾ ಎಂದು ಕಾದು ನೋಡಬೇಕಿದೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 30 ರಿಂದ ಆರಂಭಗೊಳ್ಳಲಿದೆ.