ಮುಲ್ತಾನ್: ಏಷ್ಯಾಕಪ್ ಟೂರ್ನಿಯಲ್ಲಿ(Asia Cup 2023) 2 ಪಂದ್ಯಗಳು ಮುಗಿದಿವೆ. ಆದರೆ ಟೂರ್ನಿಯ ಆತಿಥ್ಯ ವಹಿಸಿಕೊಂಡ ಪಾಕಿಸ್ತಾನದ ಹೆಸರು ಜೆರ್ಸಿಯಲ್ಲಿ(Pakistan’s name missing from team jerseys) ಕಾಣೆಯಾದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಪಾಕಿಸ್ತಾನ ತಂಡದ ಜೆರ್ಸಿಯಲ್ಲೂ ಪಾಕ್ ಹೆಸರು ಮಾಯವಾಗಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ಮುಜುಗರ ತಂದಿದೆ.
ಪಾಕ್ ತಂಡದ ಹೆಸರು ಏಕೆ ಬೇಕು?
ಪಾಕಿಸ್ತಾನದ ಹೆಸರು ಏಕೆ ಅಗತ್ಯವೆಂದರೆ, ಈ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವುದು ಪಾಕಿಸ್ತಾನ. ಹೀಗಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ದೇಶದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಇರಬೇಕಿತ್ತು. ಯಾವುದೇ ಮಹತ್ವದ ಟೂರ್ನಿ ನಡೆದರೂ ಅದರ ಆತಿಥ್ಯ ವಹಿಸಿಕೊಂಡ ದೇಶದ ಹೆಸರು ಪಾಲ್ಗೊಳ್ಳುವ ಎಲ್ಲ ದೇಶಗಳ ತಂಡ ಜೆರ್ಸಿ ಮೇಲೆ ಮುದ್ರಿತವಾಗಿರುತ್ತದೆ. ಆದರೆ ಪಾಕ್ ಕ್ರಿಕೆಟ್ ಮಂಡಳಿಯ ಎಡವಟ್ಟಿನಿಂದ ಈ ಬಾರಿ ತನ್ನ ದೇಶದ ಹೆಸರನ್ನೇ ಮರೆತಿರುವುದು ಇದೀಗ ದೊಡ್ಡ ಪ್ರಮಾದವಾಗಿದೆ. ಕೇವಲ ಏಷ್ಯಾ ಕಪ್ ಎಂದು ಮಾತ್ರ ಪ್ರಕಟಗೊಂಡಿದೆ. ಅದೂ ಕೂಟ ಈ ವಿಚಾರ ಬೆಳಕಿಗೆ ಬಂದಿರುವುದು 2 ಪಂದ್ಯ ನಡೆದ ಬಳಿಕ. ಪಂದ್ಯವಾಳಿಗಳು ನಡೆಯುತ್ತಿರುವುದರಿಂದ ಇನ್ನು ತರಾತುರಿಯಲ್ಲಿ ಜೆರ್ಸಿ ಬದಲಿಸುವುದು ಕಷ್ಟ ಸಾಧ್ಯ ಹೀಗಾಗಿ ಈಗ ಇರುವ ಜೆರ್ಸಿತಯಲ್ಲೇ ಟೂರ್ನಿ ನಡೆಯಲಿದೆ.
ಟ್ರೋಲ್ ಆದ ಪಾಕ್
ಟೂರ್ನಿಯ ಆತಿಥ್ಯವಹಿಸಿಕೊಂಡ ಪಾಕ್ ಈ ಹಿಂದೆ ಸಂಪೂರ್ಣ ಪಂದ್ಯವಾಳಿಗಳು ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಪಟ್ಟುಹಿಡಿದು, ಒಂದೊಮ್ಮೆ ಪಾಕ್ ನೆಲದಲ್ಲಿ ಪಂದ್ಯ ನಡೆಯದಿದ್ದರೆ ಏಷ್ಯಾಕಪ್ ಟೂರ್ನಿಯಿಂದ ಹಿಂದೆಸರಿಯುದಾಗಿ ಎಚ್ಚರಿಕೆ ನೀಡಿತ್ತು. ಬಳಿಕ ಐಸಿಸಿ ಮತ್ತು ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ ಮಧ್ಯ ಪ್ರವೇಶದದಿಂದ ಸಮಸ್ಯೆ ಬಹೆಹರಿದು ಹೈಬ್ರಿಡ್ ಮಾದರಿಯ ಟೂರ್ನಿಗೆ ಒಲ್ಲದ ಮನಸ್ಸಿನಿಂದ ಸಮ್ಮತಿ ಸೂಚಿಸಿತ್ತು. ಇದೀಗ ಆತಿಥ್ಯವಹಿಸಿಕೊಂಡ ತನ್ನ ದೇಶದ ಹೆಸರನ್ನೇ ಮರೆತಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಕಳೆದ ವರ್ಷ ಯುಎಇಯಲ್ಲಿ ಲಂಕಾ ಆತಿಥ್ಯ ವಹಿಸಿದ ಟೂರ್ನಿಯ ಜೆರ್ಸಿಯನ್ನು ಹಂಚಿಕೊಂಡು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ Asia Cup 2023: ಭಾರತ-ಪಾಕ್ ಏಷ್ಯಾಕಪ್ ಇತಿಹಾಸವೇ ಬಲು ರೋಚಕ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಿರುದ್ದ ಕಿಡಿಕಾರಿದ ಪಾಕ್
ಬಿದ್ದರು ಮೀಸೆ ಮಣ್ಣಾಗಿಲ್ಲ ಎಂಬ ನಾಣುಡಿಯಂತೆ. ತನ್ನ ತಪ್ಪಿದ್ದರೂ ಇದೀಗ ಈ ತಪ್ಪನ್ನು ಏಷ್ಯನ್ ಕ್ರಿಕೆಟ್ ಮಂಡಳಿಯನ್ನು ಪಾಕಿಸ್ತಾನ ಮಾಜಿ ಆಟಗಾರರು ದೂಷಿಸಿದ್ದಾರೆ. ಇದು ಪಾಕಿಸ್ತಾನಕ್ಕೆ ಮುಜುಗರ ಉಂಟುಮಾಡಲೆಂದೇ ಈ ರಿತಿ ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ ಕಳೆದ 15 ವರ್ಷಗಳ ಬಳಿಕ ಮಹತ್ವದ ಟೂರ್ನಿಗೆ ಆತಿಥ್ಯವಹಿಸಿಕೊಂಡಿರುವುದು. ಆದರೆ ಈ ಎಡವಟ್ಟಿನಿಂದ ಇದೀಗ ಮುಜುಗರ ಪಡುವಂತಾಗಿದೆ.